ಮೇ 28 ರಂದು ಅಂದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ನೂತನ ಕಟ್ಟಡವನ್ನು ಉದ್ಘಾಟಿಸಿದ್ದಾರೆ. 21 ವಿರೋಧ ಪಕ್ಷಗಳು ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿವೆ. ಮೇ 28 ರಂದು ಸಂಸತ್ತಿನ ಹೊಸ ಕಟ್ಟಡದ ಉದ್ಘಾಟನೆಗೆ ಎಲ್ಲಾ ರಾಜಕೀಯ ಪಕ್ಷಗಳನ್ನು ಆಹ್ವಾನಿಸಲಾಗಿದೆ.
ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಮೈದಾನದಲ್ಲಿರುವ ನೂತನ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ನೀತಿ ಆಯೋಗದ ಸಭೆಗೆ ಎಂಟು ರಾಜ್ಯಗಳ ಮುಖ್ಯಮಂತ್ರಿಗಳು ಗೈರು ಹಾಜರಾಗಿದ್ದಾರೆ.
Karnataka Election 2023: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡದಲ್ಲಿರುವ ಸವದತ್ತಿ ಯಲ್ಲಮ್ಮನ ಕ್ಷೇತ್ರಕ್ಕೆ ಕುಟುಂಬ ಸಮೇತ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿಗೆ, ಸಚಿವ ಸಿಸಿ ಪಾಟೀಲ್, ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಸಾಥ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಕೂಡ ಮೋದಿ ಮೇನಿಯಾ ಕಂಟಿನ್ಯೂ. 6 ಕ್ಷೇತ್ರಗಳ ಟಾರ್ಗೆಟ್.. 8 ಕಿಲೋ ಮೀಟರ್ ರೋಡ್ ಶೋ. 8 ಕಿಲೋ ಮೀಟರ್ ರೋಡ್ ಶೋ ನಡೆಸಲಿರುವ ಪ್ರಧಾನಿ ಮೋದಿ. ಸುಮಾರು ಮೂರು ಗಂಟೆಗಳ ಕಾಲ ಪ್ರಧಾನಿ ಮೋದಿ ಮತಯಾತ್ರೆ. 6 ಕ್ಷೇತ್ರಗಳನ್ನ ಟಾರ್ಗೆಟ್ ಮಾಡಿ ಪ್ರಧಾನಿ ಮೋದಿ ಮತಬೇಟೆ.
ಬೆಂಗಳೂರು ಬಳಿಕ ಮೈಸೂರಿನಲ್ಲಿ ಪ್ರಧಾನಿ ಮೋದಿ ಸವಾರಿ. ನಂಜನಗೂಡಿನ ಶ್ರೀಕಂಠೇಶ್ವರನಿಗೆ ಮೋದಿ ವಿಶೇಷ ಪೂಜೆ. ಎಲಚಿಗೆರೆ ಬೋರೆ ಗ್ರಾಮದಲ್ಲಿ ಪ್ರಧಾನಿ ಸಾರ್ವಜನಿಕ ಸಭೆ. ನಂಜನಗೂಡು ತಾಲೂಕಿನ ಎಲಚಿಗೆರೆ ಬೋರೆ ಗ್ರಾಮದಲ್ಲಿ ಸಭೆ. ಸಭೆ ನಂತರ ಶ್ರೀಕಂಠೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಸಭೆ.
ಪ್ರಧಾನಿ ನಮೋ ಸುನಾಮಿಗೆ ಪೊಲೀಸರ ಸರ್ಪಗಾವಲು. ಮೋದಿ ಸಂಚರಿಸುವ ಮಾರ್ಗದಲ್ಲಿ ಬಿಗಿ ಬಂದೋಬಸ್ತ್. 2 ಸಾವಿರ ಪೊಲೀಸರ ನಿಯೋಜನೆ ಮಾಡಿ ಬಿಗಿ ಭದ್ರತೆ. ಮೋದಿ ಸಂಚರಿಸುವ ಮಾರ್ಗದಲ್ಲಿ ಖಾಕಿ ಕಟ್ಟೆಚ್ಚರ. ಐತಿಹಾಸಿಕ ಕ್ಷಣಕ್ಕೆ ಸಾಕಿಯಾಗಲಿರುವ ಸಿಲಿಕಾನ್ ಸಿಟಿ. ಹೆಜ್ಜೆ ಹೆಜ್ಜೆಗೂ ಖಾಕಿ ಕೋಟೆ.. ಬಿಗಿ ಪೊಲೀಸ್ ಭದ್ರತೆ.
ರಾಜಧಾನಿ ಬೆಂಗಳೂರು ಗೆಲ್ಲಲು ಪ್ರಧಾನಿ ಮೋದಿ ಮೆಗಾಬೇಟೆ. ಯಾವೆಲ್ಲ ರಸ್ತೆಗಳು ಬಳಸಬಾರದು.. ಯಾವೆಲ್ಲ ರಸ್ತೆಗಳು ಬಂದ್.? ರಾಜ ಭವನ ರಸ್ತೆ, ರಮಣ ಮಹರ್ಷಿ ರಸ್ತೆ, ಮೇಖ್ರಿ ವೃತ್ತ, ಆರ್ಬಿಐ ಲೇಔಟ್, ಜೆಪಿ ನಗರ, ಶಿರ್ಸಿ ಸರ್ಕಲ್, ಜೆಜೆ ನಗರ, ಬಿನ್ನಿ ಮಿಲ್ ರಸ್ತೆ, ಶಾಲಿನಿ ಮೈದಾನ, ಸೌತ್ ಎಂಡ್ ಸರ್ಕಲ್ ಸೇರಿದಂತೆ ಹಲವು ರಸ್ತೆಗಳು ಬಂದ್.
ರಾಜಧಾನಿ ಬೆಂಗಳೂರು ಗೆಲ್ಲಲು ಪ್ರಧಾನಿ ಮೋದಿ ಮೆಗಾಬೇಟೆ. ನರೇಂದ್ರ ನರೇಂದ್ರ ಮೋದಿ ರಾಜಧಾನಿ ರೌಂಡ್ಸ್ಗೆ ಕೌಂಟ್ಡೌನ್. ಬೆಂಗಳೂರಿನಲ್ಲಿಂದು ಪ್ರಧಾನಮಂತ್ರಿ ಮೆಗಾ ರೋಡ್ ಶೋ. ಬೆಂಗಳೂರನ್ನ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಮೋದಿ ರಣಬೇಟೆ. ಎರಡು ದಿನ.. ಒಂದು ರಾಜಧಾನಿ.. ಒನ್ ಮ್ಯಾನ್ ಶೋ..! 26 ಕಿಲೋಮೀಟರ್ ರೋಡ್ ಶೋ.. 28 ಕ್ಷೇತ್ರಗಳ ಟಾರ್ಗೆಟ್. 28ರಲ್ಲಿ 20 ಕ್ಷೇತ್ರಗಳನ್ನ ಗೆಲ್ಲಲೇಬೇಕು ಅಂತ ಪಣತೊಟ್ಟಿರುವ BJP. ರೋಡ್ ಶೋ ಮೂಲಕ ಮತದಾರರ ಮನ ಗೆಲ್ಲಲು ಮೋದಿ ಕಸರತ್ತು.
ನೀಟ್ ಪರೀಕ್ಷೆ ಹಿನ್ನೆಲೆ ಮೋದಿ ರೂಟ್ ಚೇಂಜ್. ಬೆಂಗಳೂರಲ್ಲಿ ಮೋದಿ ರೋಡ್ ಶೋ ಬದಲಾವಣೆ. ಭಾನುವಾರದ ಮೋದಿ ರೋಡ್ ಶೋ 4 ಕಿ.ಮೀ ಕಡಿತ. ಭಾನುವಾರದ ರೋಡ್ ಶೋ ಶನಿವಾರಕ್ಕೆ ನಿಗದಿ. ಶನಿವಾರದ ರೋಡ್ ಶೋ ಭಾನುವಾರಕ್ಕೆ ನಿಗದಿ.
Badminton Asia Championships 2023: ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಬಂದಿದೆ. ಈ ಸಾಧನೆ ಮಾಡಿದವರು ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ. ಈ ಮೂಲಕ 58 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ನಾಯಕ ಎಂದು ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ, ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.. ಈ ಬಾರಿ ಬಿಜೆಪಿಗೆ ಬಹುಮತ ಗಳಿಸೋ ರೀತಿ ಕೆಲಸ ಮಾಡಬೇಕು ಅಂತಾ ಕರೆ ನೀಡಿದ್ದಾರೆ..
ಕರ್ನಾಟಕದ ಮೈಸೂರು-ಊಟಿ ಹೆದ್ದಾರಿಯಲ್ಲಿ ಎತ್ತರದ ಪಶ್ಚಿಮ ಘಟ್ಟಗಳ ಸುಂದರವಾದ ಪರಿಸರದ ನಡುವೆ ಇರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ನೀಲಗಿರಿ ಜೀವಗೋಳ ಮೀಸಲು ಪ್ರದೇಶದ ಪ್ರಮುಖ ಭಾಗವಾಗಿದೆ, ಇದು ಕರ್ನಾಟಕದ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವನ್ನು (ನಾಗರಹೊಳೆ) ಅದರ ವಾಯುವ್ಯ ಭಾಗದಲ್ಲಿದ್ದರೆ, ಅದರ ದಕ್ಷಿಣಕ್ಕೆ ತಮಿಳುನಾಡಿನ ಮುದುಮಲೈ ವನ್ಯಜೀವಿ ಪ್ರದೇಶ ಮತ್ತು ನೈಋತ್ಯಕ್ಕೆ ಕೇರಳದ ವಯನಾಡ್ ವನ್ಯಜೀವಿ ಅಭಯಾರಣ್ಯ ಇದೆ.
PM Modi Bandipur Visit: ಹುಲಿ ಯೋಜನೆ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟಿದ್ದು ಓಪನ್ ಜೀಪ್ ನಲ್ಲಿ ವನ್ಯಜೀವಿ ಸಫಾರಿ ನಡೆಸಿದ್ದಾರೆ.
PM Modi Bandipur Visit : ಪ್ರಧಾನಿ ನರೇಂದ್ರ ಮೋದಿಯವರ ಇಂದು ಬಂಡೀಪುರ ಪ್ರವಾಸ ಕೈಗೊಳ್ಳಲಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಹೆಲಿಪ್ಯಾಡ್ಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ.
Bhadra Upper Bank Project: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳ ಸೌಲಭ್ಯ ಮತ್ತು ಸಲಕರಣೆಗಳ ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.
ಮಂಡ್ಯ, ಧಾರವಾಡದಲ್ಲಿ ಮೋದಿ ಪ್ರವಾಸದ ವಿಚಾರ ಮಂಡ್ಯದಲ್ಲಿ ಪ್ರಧಾನಿ ಮೋದಿ ರೋಡ್ ಶೋ ಯಶಸ್ವಿ ಹಿನ್ನೆಯಲ್ಲಿ ಪದಾಧಿಕಾರಿಗಳಿಗೆ ಬಿ ಎಲ್ ಸಂತೋಷ್ ಪತ್ರ ಬರೆದಿದ್ದಾರೆ.. ಮಂಡ್ಯದಲ್ಲಿ ಇದೇ ಉತ್ಸಾಹ ಮುಂದೆಯೂ ಮುಂದುವರೆಯಲಿ ಎಂದು ಅಭಿನಂದಿಸಿದ್ದಾರೆ.
ಧಾರವಾಡದಲ್ಲಿ ಪ್ರಧಾನಿ ಮೋದಿಗೆ ಆರತಿ ಎತ್ತಿದ ಅಜ್ಜಿ. ಧಾರವಾಡ IITಗೆ ಮೋದಿ ಬಂದಾಗ ದೂರಿಂದಲೇ ಆರತಿ. ಧಾರವಾಡದ ಬೇಲೂರು ಗ್ರಾಮದ ಚಿಕ್ಕಮಠ ಎಂಬ ಅಜ್ಜಿ. ಚಿಕ್ಕಮಠ ಎಂಬ ಅಜ್ಜಿ ಹಠ ಹಿಡಿದು ಆರತಿ ಮಾಡಿದ ಅಜ್ಜಿ. ಆರತಿ ಮಾಡಲು ಅವಕಾಶ ಇಲ್ಲಾ ಎಂದರೂ ಬಿಡದೇ ಆರತಿ. ಧಾರವಾಡದಲ್ಲಿ ಮೋದಿ ಭೇಟಿಗೆ ಅವಕಾಶ ಕೇಳಿದ್ದ ಅಜ್ಜಿ
ಆದರೆ ಅವಕಾಶ ಸಿಗದ ಹಿನ್ನೆಲೆ ದೂರಿಂದಲೇ ಅಜ್ಜಿ ಆರತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.