ಬಂಧಿತರ ಮೂಲಕ ಹಳೆ ಪರೀಕ್ಷೆ ದಾಖಲೆಗಳ ತಲಾಶ್ ನಡೆಸಿದೆ. ಹಿಂದೆ ನೇಮಕವಾಗಿದ್ದ ಬಂಧಿತ ಪಿಎಸ್ಐಗಳೂ ಕೂಡ ಅಕ್ರಮವಾಗಿ ನೇಮಕವಾಗಿರುವ ಅನುಮಾನ ಮೂಡಿದ್ದು, ಅಂದು ಅಕ್ರಮದ ಮಾರ್ಗದಿಂದ ಇಲಾಖೆ ಸೇರಿ ಈಗ ಅಭ್ಯರ್ಥಿಗಳಿಗೆ ಮಧ್ಯವರ್ತಿಗಳಂತೆ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಭ್ರಷ್ಟಾಚಾರ ಆರೋಪದಲ್ಲಿ ಡಿಸಿ ಕಚೇರಿಯ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಐಎಎಸ್ ಅಧಿಕಾರಿ ಮಂಜುನಾಥ್ ಅವರನ್ನು ಬಂಧಿಸಿದ್ದಾರೆ. ಇದೀಗ ನ್ಯಾಯಾಲಯವು ಭ್ರಷ್ಟಾಚಾರ ಕೇಸ್ನಲ್ಲಿ ಐಎಎಸ್ ಅಧಿಕಾರಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಪಿಎಸ್ಐ ಅಕ್ರಮಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಧಿಕಾರಿ ಅಮೃತ್ ಪುಲ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಅಮೃತ್ ಪೌಲ್ ಬಂಧನವಾಗ್ತಿದ್ದಂತೆ ಅಮಾನತು ಮಾಡಿ ಸರ್ಕಾರ ಆರ್ಡರ್ ಹೊರಡಿಸಿದೆ.
ರಾಜಕೀಯ ಮುಖಂಡರು, ನೇಮಕಾತಿ ವಿಭಾಗದ ಅಧಿಕಾರಿ, ಸಿಬ್ಬಂದಿ, ಮಧ್ಯವರ್ತಿಗಳು ಹಾಗೂ ಆಭ್ಯರ್ಥಿಗಳು ಸೇರಿ ಸುಮಾರು 50ಕ್ಕಿಂತ ಹೆಚ್ಚು ಮಂದಿಯನ್ನು ಬಂಧಿಸಿ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವತ್ತ ಸಿಐಡಿ ತನಿಖೆ ಚುರುಕಿನಿಂದ ನಡೆಸುತ್ತಿದೆ.
ಚುನಾವಣಾಧಿಕಾರಿ ಆದೇಶ ಪಾಲನೆ ಮಾಡಿ ಎಂದ ಕವಿತಾ.. ಯಾರವನು ಡಿಸಿ ಎಂದು ಮರಳಿ PSIಗೆ ಹೊರಟ್ಟಿ ಅವಾಜ್..ಜಾಸ್ತಿ ಜನ ಇಲ್ಲಿ ಕುಳಿತುಕೊಳ್ಳುವಂತಿಲ್ಲ ಎಂದ ಪಿಎಸ್ಐ..ಇದಕ್ಕೆ ಯಾವ ಡಿಸಿ ಅವಾ ಎಂದ ಹೊರಟ್ಟಿ ಆಕ್ರೋಶ..ಕೊನೆಗೆ ಕಾನೂನು ಪ್ರಕಾರವೇ ನಿಮ್ಮ ಕೆಲಸ ಮಾಡಿ ಎಂದ ಹೊರಟ್ಟಿ
ಪಿಎಸ್ಐ ಹುದ್ದೆಗಳ ನೇಮಕಾತಿ, ಮತ್ತೊಬ್ಬ ಕಿಂಗ್ಪಿನ್ ಅರೆಸ್ಟ್
ಕಿಂಗ್ಪಿನ್ R.D ಪಾಟೀಲ್ ಅಳಿಯ ಪ್ರಕಾಶ್ ಸಿಐಡಿ ವಶಕ್ಕೆ
ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿ ಪ್ರಭುಗೆ ಬ್ಲೂಟೂತ್ ನೀಡಿದ್ದ ಪ್ರಕಾಶ್
ಇಡೀ ರಾಜ್ಯದಲ್ಲಿ ಅಲ್ಲೊಲ ಕಲ್ಲೊಲ ಸೃಷ್ಟಿಸಿರುವ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರೋ ಅಕ್ರಮ ಪ್ರಕರಣ, ದಿನದಿಂದ ದಿನಕ್ಕೆ ಆರೋಪಿಗಳಿಗೆ ಕಾನೂನು ಕುಣಿಕೆ ಬಿಗಿಯಾಗುತ್ತಿದೆ.. ಅಕ್ರಮದ ಕಿಂಗ್ಪಿನ್ ಆರ್ಡಿ ಪಾಟೀಲ್ ಬಂಧನದ ನಂತರ, ನಾನು ಕೇವಲ ಎರಡು ದಿನಗಳಲ್ಲಿ ಬೆಲ್ ಮೇಲೆ ಹೊರಬರುತ್ತೇನೆ..
ಪಿಎಸ್ಐ ಅಕ್ರಮದಲ್ಲಿ ಬಿಜೆಪಿ ನಾಯಕರ ನೇರ ಕೈವಾಡವಿದೆ ಎಂದು ಆರೋಪ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ.ಪ್ರಕರಣ ಮುಚ್ಚಿಹಾಕಲು ನಿಷ್ಟಾವಂತ ಅಧಿಕಾರಿಯನ್ನ ಟಾರ್ಗೆಟ್ ಮಾಡಿದ್ರು.ಈ ಪ್ರಕರಣದಲ್ಲಿ ಸಾಕಷ್ಟು ಪೊಲೀಸರ ಕೈವಾಡ ಇದೆ ಎಂದು ಅವರು ಆರೋಪಿಸಿದ್ದಾರೆ.
PSI ನೇಮಕಾತಿ ರದ್ದು ಮಾಡಿದ ಹಿನ್ನೆಲೆಯಲ್ಲಿ ಪಿಎಸ್ಐ ಅಭ್ಯರ್ಥಿ ಪೂಜಾ ಕಣ್ಣೀರಿಟ್ಟಿದ್ದಾರೆ.. ಮರು ಪರೀಕ್ಷೆ ನಡೆಯುತ್ತೆ ಅನ್ನೋ ಕನಸೂ ಕಂಡಿರಲಿಲ್ಲ. ಕೂಡಲೇ ಸರ್ಕಾರ ನಿರ್ಧಾರ ಬದಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಪಿಎಸ್ಐ ನೇಮಕಾತಿ ರದ್ದು ಮಾಡಿರೋದ್ರಿಂದ ನಮ್ಮ ಮನಸ್ಸಿಗೆ ನೋವಾಗಿದೆ. ಕುಟುಂಬಸ್ಥರು ಆಘಾತಗೊಂಡಿದ್ದಾರೆ ಎಂದು ಪಿಎಸ್ಐ ಅಭ್ಯರ್ಥಿ ಸಂದೀಪ್ ಅಳಲು ತೋಡಿಕೊಂಡಿದ್ದಾರೆ.. ನ್ಯಾಯಯುತವಾಗಿ ಪರೀಕ್ಷೆ ಬರೆದವರಿಗೆ ನೇಮಕಾತಿ ಆದೇಶ ಪ್ರತಿ ನೀಡಿ. ದಯಮಾಡಿ ಮರು ಪರೀಕ್ಷೆ ನಡೆಸಬೇಡಿ.. ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಂದು ನೋವಿನಿಂದ ನುಡಿದಿದ್ದಾರೆ.
ನಾವು ಕೂಲಿ ಮಾಡ್ತಿರೋದು. ನನ್ನ ಮಗಳನ್ನು ಕಷ್ಟಪಟ್ಟು ಓದ್ಸಿದ್ದೀವಿ.. ಇನ್ನು ಓದ್ಸೋದಕ್ಕೆ ನಮಗೆ ಶಕ್ತಿಯಿಲ್ಲ ಎಂದು ಪಿಎಸ್ಐ ಆಗಿ ಆಯ್ಕೆಯಾದ ಅಭ್ಯರ್ಥಿಯೊಬ್ಬರ ತಾಯಿ ಕಣ್ಣೀರಿಟ್ಟಿದ್ದಾರೆ.. ಕಷ್ಟ ಪಟ್ಟು ಓದಿ ಪರೀಕ್ಷೆ ಪಾಸ್ ಆಗಿದ್ದಾಳೆ. ನನ್ನ ಮಗಳಿಗೆ ನ್ಯಾಯ ಕೊಡ್ಸಿ ಅಂತಾ ಮನವಿ ಮಾಡಿದ್ದಾರೆ.
ಒಂದೊತ್ತಿನ ಊಟ ಬಿಟ್ಟು, ವರ್ಷಗಟ್ಟಲೇ ತನ್ನ ಮನೆಯವರು, ಮನದವರಿಂದ ದೂರವಾಗಿ ಜೀವನದಲ್ಲಿ ಏನಾದ್ರೂ ನಿಶ್ಚಿತ ಗುರಿಯ ಪಟ್ಟು ಹಿಡಿದಿದ್ದ ಆರತಿ ಕೊನೆಗೂ ತನ್ನ ಕನಸನ್ನು ನನಸು ಮಾಡಿಯೇ ಬಿಟ್ಟಿದ್ದಳು.. ಅಪ್ಪ ಅಮ್ಮನ ಕಷ್ಟ, ಮನೆಯ ಬಡತನದ ಬೇಗೆಯ ನಡುವೆಯೂ ತನ್ನ ಕನಸಿಗೆ ಮುನ್ನುಡಿ ಬರೆದಿದ್ದಳು. ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಓದಿ ಪಿಎಸ್ಐ ಎಕ್ಸಾಂ ಬರೆದು ರ್ಯಾಂಕ್ನಲ್ಲಿ ಪಾಸಾಗಿದ್ದಳು ಆರತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.