Town Planning: ಹಿಂದೆದೂ ಕಂಡರಿಯದ ಮಹಾಮಳೆ 2024ರಲ್ಲಿ ಬೆಂಗಳೂರಿನಲ್ಲಿ ದಾಖಲಾಗಿದೆ. ಹಲವಾರು ಲೇಔಟ್ಗಳು ಭಾರೀ ಮಳೆಯಿಂದ ಮುಳುಗಿವೆ. ಈ ಪ್ರದೇಶದಲ್ಲಿ ಜನರು ಪರದಾಡುವ ದೃಶ್ಯ ನೋಡಲಾಗುತ್ತಿಲ್ಲ. ಅದಾಗ್ಯೂ ಸಹ ಕೋರಮಂಗಲದಲ್ಲಿ ಆ ರೀತಿಯ ಯಾವುದೇ ಚಿತ್ರಣ ಕಾಣಸಿಗದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಸಿಎಂ, ಡಿಸಿಎಂ ಹೈಕಮಾಂಡ್ ಭೇಟಿಯ ವಿಚಾರ ಕೇಳಿದಾಗ "ಶುಕ್ರವಾರ ಸಿಎಂ, ಡಿಸಿಎಂ ಹೈಕಮಾಂಡ್ ಭೇಟಿ ಮಾಡಿ ಮುಡಾ, ವಾಲ್ಮೀಕಿ ಆರೋಪಗಳ ನಂತರ ಒಂದು ತಿಂಗಳಲ್ಲಿ ಯಾವ, ಯಾವ ಬೆಳವಣಿಗೆ ಆಗಿದೆ ಎಂದು ಮಾಹಿತಿ ನೀಡಿರಬಹುದು. ಬಿಜೆಪಿ, ಜೆಡಿಎಸ್ ಷಡ್ಯಂತ್ರದ ಬಗ್ಗೆ, ರಾಜ್ಯಪಾಲರ ನಡೆಯ ಬಗ್ಗೆ ಚರ್ಚೆಯಾಗಿರುತ್ತದೆ" ಎಂದು ತಿಳಿಸಿದರು.
HSRP Number Plate: 2023ರ ಆಗಸ್ಟ್ 17ರಂದು ಕರ್ನಾಟಕ ಸಾರಿಗೆ ಇಲಾಖೆ HSRP ನಂಬರ್ ಪ್ಲೇಟ್ ಕಡ್ಡಾಯ ತೀರ್ಮಾನವನ್ನು ಜಾರಿಗೆ ತಂದಿತ್ತು. ಆದರೆ ಅಂದಿನಿಂದ ಇಂದಿನವರೆಗೆ ಹಲವು ಬಾರಿ ತನ್ನ ಡೆಡ್ಲೈನ್ ಅನ್ನು ವಿಸ್ತರಿಸುತ್ತಲೇ ಬಂದಿದೆ.
ರಾಜ್ಯದಲ್ಲಿ ನೂತನ ಬಸ್ ಗಳ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದ್ದು, 2 ಸಾವಿರಕ್ಕಿಂತಲೂ ಅಧಿಕ ವಾಹನ ಚಾಲಕರ ಹಾಗೂ ನಿರ್ವಾಹಕರ ಹುದ್ದೆಗಳ ಭರ್ತಿ ಪ್ರಕ್ರಿಯೆ ಕೂಡ ಚಾಲನೆಯಲ್ಲಿದೆ. ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿ ಬಸ್ ಸಂಚಾರ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಗಾರೆಡ್ಡಿ ತಿಳಿಸಿದರು.
ಕೋವಿಡ್-19ರ ಕಾರಣ ಸ್ಥಗಿತಗೊಂಡಿದ್ದ 726 ತಾಂತ್ರಿಕ ಸಹಾಯಕ ಹುದ್ದೆಗಳಲ್ಲಿ 300 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರವು ಸುಮಾರು 06 ವರ್ಷಗಳ ನಂತರ ಅಂದರೆ ದಿನಾಂಕ: 13-10-2023 ರಂದು ಅನುಮತಿ ನೀಡಿರುತ್ತದೆ.
Insurance without premium: ದೇಶದ ಸಾರಿಗೆ ನಿಗಮಗಳಲ್ಲಿ ಮೊದಲ ಬಾರಿಗೆ 1.20 ಕೋಟಿ ರೂ.ಗಳ ಅಪಘಾತ ವಿಮೆ ಸಾರಿಗೆ ನೌಕರರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಜಾರಿಗೆ ತರಲಾಗಿದೆ.
Transport Department Recruitment 2023: ಪ್ರತಿದಿನದ ಸರಾಸರಿ ಆದಾಯ KSRTCಯಲ್ಲಿ 12.57 ಕೋಟಿ ರೂ., ಬಿಎಂಟಿಸಿಯಲ್ಲಿ 5.39 ಕೋಟಿ ರೂ. ವಾಯುವ್ಯ ಸಾರಿಗೆಯಲ್ಲಿ 6.60 ಕೋಟಿ ರೂ. ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ 5.92 ಕೋಟಿ ರೂ. ತಲುಪಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ತಮಗೂ ಒಂದು ಅಭಿವೃದ್ದಿ ಮಂಡಳಿ ಬೇಕು ಅಂತಾ ಸರ್ಕಾರದ ಮುಂದೆ ಖಾಸಗಿ ಚಾಲಕರು ಬಿಗಿಪಟ್ಟು ಹಿಡಿದಿದ್ದರು. ಜೊತೆಗೆ ಹಲವು ಬಾರಿ ರಸ್ತೆಗಿಳಿದು ಹೋರಾಟವನ್ನೂ ಮಾಡಿದ್ರು. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಂದಿರಲಿಲ್ಲ.
ಮುಂಬರುವ 2024ರ ಲೋಕಸಭಾ ಚುನಾವಣೆ ಬಳಿಕ ‘ಶಕ್ತಿ’ ಯೋಜನೆ ನಿಲ್ಲುತ್ತದೆ ಎಂದು ವಿಪಕ್ಷಗಳು ಟೀಕಿಸುತ್ತಿವೆ. ಆದರೆ ನಾವು ಮತ್ತೆ ಅಧಿಕಾರಕ್ಕೆ ಬಂದು ಈ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬಂದ್ ಕರೆ ನೀಡಿದ ಸಂಘಟನೆಗಳ ಮನವೊಲಿಕೆಗೆ ಸರ್ಕಾರ ಕಸರತ್ತು . ಇಂದು ಸಚಿವ ರಾಮಲಿಂಗರೆಡ್ಡಿ ಜೊತೆ ಹೈವೋಲ್ಟೇಜ್ ಮೀಟಿಂಗ್. 35 ಸಂಘಟನೆ ಮುಖಂಡರ ಜೊತೆ ರಾಮಲಿಂಗಾರೆಡ್ಡಿ ಮಾತುಕತೆ. ಬೆಂಗಳೂರಿನ ಶಾಂತಿನಗರದ ಸಾರಿಗೆ ಇಲಾಖೆ ಕಚೇರಿಯಲ್ಲಿ ಮಾತುಕತೆ
Accident compensation: KSRTC ದೇಶದಲ್ಲಿಯೇ ಪ್ರಪ್ರಥಮವಾಗಿ ಕಾರ್ಮಿಕ ಕಲ್ಯಾಣದ ವಿನೂತನ ಯೋಜನೆಯಡಿ ತನ್ನ ಸಿಬ್ಬಂದಿಗೆ 1 ಕೋಟಿ ರೂ. ಮೊತ್ತದ ಅಪಘಾತ ವಿಮೆ (on Duty and Off Duty)ಯನ್ನು ಜಾರಿಗೊಳಿಸಿದೆ.
Electricity Rate Hike: ಕೈಗಾರಿಕೋದ್ಯಮಕ್ಕೆ ಹೊರೆಯಾದ ವಿದ್ಯುತ್ ದರ ಏರಿಕೆ ಖಂಡಿಸಿ, ಕರ್ನಾಟಕದಾದ್ಯಂತ ನೀಡಲಾದ ಬಂದ್ ಕರೆಗೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸೇರಿದಂತೆ ಕೈಗಾರಿಕಾ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.
Karnataka Bandh: ಚುನಾವಣೆ ಬಳಿಕ ರಾಜ್ಯದಲ್ಲಿ ಅತ್ಯಧಿಕ ವಿದ್ಯುತ್ ದರ ಬರುತ್ತಿದೆ. ಈ ನಿಟ್ಟಿನಲ್ಲಿ ವಿದ್ಯುತ್ ದರ ಏರಿಕೆ ಖಂಡಿಸಿ ವಾಣಿಜ್ಯ ಹಾಗೂ ಕೈಗಾರಿಕ ಮಹಾಸಂಸ್ಥೆ ಗುರುವಾರದಂದು ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿದೆ.
ರಾಜ್ಯದ ಎಲ್ಲಾ ಮಹಿಳೆಯರಿಗೆ ಯಾವುದೇ ಷರತ್ತುಗಳಿಲ್ಲದೆ ಬಸ್ ಪ್ರಯಾಣ ಉಚಿತವಾಗಿರುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಬುಧವಾರ ಸಭೆ ಕರೆದಿದ್ದು, ಈ ಯೋಜನೆಗೆ ತಗಲುವ ವೆಚ್ಚದ ವರದಿಯನ್ನು ಅವರಿಗೆ ಸಲ್ಲಿಸಲಾಗುವುದು ಎಂದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.