ಮನೆಯ ಕಾರಿನ ಚಾಲಕನಿಂದಲೇ ಲೈಂಗಿಕ ಕಿರುಕುಳವಾಗಿದೆ ಎಂದು ಆರೋಪಿಸಿ ವೈದ್ಯೆಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. 32 ವರ್ಷದ ಸಂತ್ರಸ್ತೆ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಪುಲಿಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Viral Video: ಕರ್ನಾಟಕದ ಮಂಡ್ಯ ಜಿಲ್ಲೆಯ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಶಿಕ್ಷಕನೋರ್ವ ಕಿರುಕುಳ ನೀಡಿದ ಪ್ರಕರಣ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಮೂಡಿಸತೊಡಗಿದೆ. ವಿದ್ಯಾರ್ಥಿನಿಯರು ಶಾಲೆಯ ಆರೋಪಿ ಮುಖ್ಯೋಪಾಧ್ಯಾಯರನ್ನು ಪೊರಕೆ ಮತ್ತು ಕೋಲುಗಳಿಂದ ಥಳಿಸಿದ್ದಾರೆ.
Shocking News: ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಪೊಲೀಸರು ಆರೋಪಿ ಪತಿ, ಅತ್ತೆ ಮತ್ತು ಸೋದರ ಮಾವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದುಬಂದಿದೆ.
ಬಾಲಸುಬ್ರಮಣಿಯನ್ ಮನೆಗೆಲಸ ಮಾಡುವ ಮಹಿಳೆಯೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಇದೇ ನವೆಂಬರ್ 16 ರಂದು ಮೊಮ್ಮಗನನ್ನ ಶಾಲೆಗೆ ಬಿಟ್ಟು ಬಳಿಕ ಮಹಿಳೆಯ ಮನೆಗೆ ತೆರಳಿದ್ದ. ಮನೆಗೆ ಕರೆ ಮಾಡಿದ್ದ ವೃದ್ಧ ಸ್ವಲ್ಪ ಕೆಲಸ ಇದೆ. ಮನೆಗೆ ತಡವಾಗಿ ಬರುತ್ತೇನೆ ಎಂದಿದ್ದ.
ವೈದ್ಯರೆಂದರೆ ರೋಗಿಗಳು ದೇವರೆಂದು ನಂಬುತ್ತಾರೆ. ಅದರೆ ಉಬೇದುಲ್ಲಾ ಎಂಬ ವೈದ್ಯ ಆಸ್ಪತ್ರೆಗೆ ಬರುವ ಹೆಣ್ಣು ಮಕ್ಕಳನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ. ಹೀಗೆಯೇ ಚಿಕಿತ್ಸೆಗೆಂದು ತನ್ನ ಅಜ್ಜಿಯ ಜೊತೆ ಬಂದ 19 ವರ್ಷದ ಯುವತಿಗೆ ಈ ಕೀಚಕ ಲೈಂಗಿಕ ಕಿರುಕುಳ ನೀಡಿದ್ದಾನೆ.
ಕೋಲಾರ ನಗರದ ಪ್ರತಿಷ್ಠಿತ ಇ.ಟಿ.ಸಿ.ಎಂ ಆಸ್ಪತ್ರೆ ಲೆಕ್ಕಾಧಿಕಾರಿ ಹಾಗೂ ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ಜಾನ್ಸನ್ ಕುಂದರ್ ವಿರುದ್ದ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಈ ಕುರಿತು ಸಂತ್ರಸ್ತ ವಿದ್ಯಾರ್ಥಿನಿಯರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೋಕ್ಸೋ ಕೇಸ್ನಡಿ ಮುರುಘಾ ಶ್ರೀ ಬಂಧನ ವಿಚಾರ. ಮತ್ತೆ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್. ಶ್ರೀಗಳನ್ನ 4 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ. ಬೆಂಗಳೂರಿಗೆ ಬೇಡ, ಜೈಲಿನಲ್ಲೇ ಚಿಕಿತ್ಸೆ ನೀಡಲು ತಾಕೀತು. ಸೆ. 6ರಂದು ಮಧ್ಯಾಹ್ನ 12ಕ್ಕೆ ಕೋರ್ಟ್ಗೆ ಹಾಜರಾಗಲು ಸೂಚನೆ
ಮುರುಘಾ ಶ್ರೀಗಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಎದೆನೋವಿನಿಂದ ಆಸ್ಪತ್ರೆಗೆ ಶಿಫ್ಟ್ ಆಗ್ತಿರೋ ಕಾರಣ ಅಭಿಮಾನಿಗಳಲ್ಲಿ ತಳಮಳ ಕೂಡ ಹೆಚ್ಚಾಗಿದೆ. ಇನ್ನೊಂದ್ ಕಡೆ ಕೋರ್ಟ್ ಮುಂದೆ ಹಾಜರು ವಿಚಾರವಾಗಿ ಹೈಡ್ರಾಮಾ ನಡೆದು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶ್ರೀಗಳನ್ನು ಶಿಫ್ಟ್ ಮಾಡೋದು ರದ್ದಾಗಿದೆ.
ಲೈಂಗಿಕ ಕಿರುಕುಳ ಪ್ರಕರಣ ಹಿನ್ನೆಲೆಯಲ್ಲಿ ಮುರುಘಾ ಶರಣರ ಬಂಧನಕ್ಕೆ ಒತ್ತಾಯ ಹೆಚ್ಚಾಗಿದೆ. ಈ ಬಗ್ಗೆ ವಿವಿಧ ಮಠಾಧೀಶರು ಸ್ವಾಮೀಜಿ ಬೆಂಬಲಕ್ಕೆ ನಿಂತಿದ್ದಾರೆ. ಸ್ವಾಮೀಜಿ ಬಂಧನವಾಗ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.
ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ. ಸಂತ್ರಸ್ತರನ್ನ ಚಿತ್ರದುರ್ಗಕ್ಕೆ ಕರೆದೊಯ್ದು ಚೈಲ್ಡ್ ವೆಲ್ಫೇರ್ ಕಮಿಟಿ. ಹೆಚ್ಚಿನ ತನಿಖೆ ಸಲುವಾಗಿ ನೊಂದ ಮಕ್ಕಳು ಚಿತ್ರದುರ್ಗಕ್ಕೆ ಶಿಫ್ಟ್. ಮೈಸೂರು ನಗರದ ಒಡನಾಡಿ ಸಂಸ್ಥೆಯಲ್ಲಿದ್ದ ಸಂತ್ರಸ್ತ ಮಕ್ಕಳು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.