ಸಿದ್ದು ಯಾದಗಿರಿ ಕ್ಷೇತ್ರಕ್ಕೆ ಬಂದ್ರೆ 1 ಕೋಟಿ ಗಿಫ್ಟ್ ಕೊಡ್ತೀನಿ ಎಂದು ಬಹಿರಂಗವಾಗಿ ಆಫರ್ ನೀಡಿದ ಸಿದ್ದು ಅಭಿಮಾನಿ, BJP ನಾಯಕ. ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸಿದ್ದರಾಮಯ್ಯನವರೇ ಸೂಕ್ತ ನಾಯಕ ಎಂದು ಬಿಜೆಪಿ ನಾಯಕ ತಾಪಂ ಮಾಜಿ ಸದಸ್ಯ ಚಂದ್ರಯ್ಯ ನಾಗರಾಳ ಹೇಳಿದ್ದಾರೆ.
ಯಾದಗಿರಿ ಪಶು ಪಾಲಿಕ್ಲಿನಿಕ್ನಲ್ಲಿ ರಾತ್ರಿ ವೇಳೆ ಮೂಕ ಪ್ರಾಣಿಗಳು ಅಸ್ವಸ್ಥವಾದರೆ ತುರ್ತು ಚಿಕಿತ್ಸೆ ಸಿಗ್ತಿಲ್ಲ.. ಪಶು ವೈದ್ಯಕೀಯ ಇಲಾಖೆ ಕಾರ್ಯ ವೈಖರಿಗೆ ಪ್ರಾಣಿ ಪ್ರಿಯರ ಕಿಡಿಕಾರಿದ್ದಾರೆ.
ಯಾದಗಿರಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಕಾರ್ಯಕ್ರಮದ ಸ್ಥಳ ಪರಿಶೀಲಿಸಿದ ಜಿಲ್ಲಾಡಳಿತ, ಶಾಸಕ ರಾಜುಗೌಡ. ಕೊಡೇಕಲ್ ಗ್ರಾಮದ ಹೊರಭಾಗದಲ್ಲಿ ಕಾರ್ಯಕ್ರಮಕ್ಕೆ ಸ್ಥಳ ನಿಗದಿ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮ
ಬೆಂಗಳೂರು ಗ್ರಾಮಾಂತರ, ಯಾದಗಿರಿ, ಕೊಡಗು, ತುಮಕೂರು, ಹಾಸನಕ್ಕೆ ಜಿಲ್ಲಾಧ್ಯಕ್ಷರುಗಳನ್ನು ನೇಮಕ ಮಾಡಿ AICC ಆದೇಶ ಹೊರಡಿಸಿದೆ. ಕೋಲಾರದಲ್ಲಿ ಡಿಸಿಸಿ ಅಧ್ಯಕ್ಷರ ನೇಮಕಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ.
ಶೆಟ್ಟಿಗೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಆನೆಕಾಲು ಮಾತ್ರೆ ನೀಡಲಾಗಿತ್ತು. ಮಾತ್ರೆ ಸೇವಿಸಿದ ಬಳಿಕ ಕೆಲವು ವಿದ್ಯಾರ್ಥಿಗಳಿಗೆ ವಾಂತಿ-ಭೇದಿ ಆರಂಭವಾಗಿ, ಸುಮಾರು 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದರಿಂದ ತಕ್ಷಣ ಅವರನ್ನು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೀವ ಜಲವೇ ಪ್ರಾಣಕ್ಕೆ ಅಪಾಯ ತರುತ್ತಿದೆ. ಆ ಗ್ರಾಮದ ಜನರಿಗೆ ಹಬ್ಬದ ಖುಷಿಯನ್ನೆ ಮರೆಸಿ ಸೂತಕ ಛಾಯೆ ಆವರಿಸಿದೆ. ಆ ಗ್ರಾಮ ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ್ದರೆ, ಅನೇಕ ಜನ ವಾಂತಿ ಭೇದಿಯಿಂದ ಆಸ್ಪತ್ರೆ ಪಾಲಾಗಿದ್ದಾರೆ.
ಅತಿವೃಷ್ಟಿಯ ಹೊಡೆತಕ್ಕೆ ಸಿಲುಕಿದ ರೈತಾಪಿ ವರ್ಗಕ್ಕೆ ಈಗ ಮತ್ತೆ ಗಾಯದ ಮೇಲೆ ಬರೆ ಬಿದ್ದಿದೆ. ಸಾಲಸೋಲ ಮಾಡಿ ರೈತರು ಬೆಳೆ ಬೆಳೆದಿದ್ದು, ಅತಿಯಾದ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಯಾದಗಿರಿ ರೈತರ ಸ್ಥಿತಿ.
ಯಾದಗಿರಿ ನಗರಸಭೆ ಅಧಿಕಾರಿಗಳು ಒತ್ತುವರಿದಾರರಿಗೆ ಶಾಕ್ ನೀಡಿದ್ದಾರೆ. ಬೆಳ್ಳಂಬೆಳಗ್ಗೆ ಜೆಸಿಬಿ, ಹಿಟಾಚಿ ಘರ್ಜನೆ ಮಾಡಿವೆ.. ಗಾರ್ಡನ್ ಜಾಗದಲ್ಲಿ ಕಟ್ಟಿಕೊಂಡಿದ್ದ ಕಟ್ಟಡಗಳನ್ನು ತೆರವು ಮಾಡಲಾಗಿದೆ.
ಕೃಷ್ಣಾ ನದಿಯ ಅಬ್ಬರಕ್ಕೆ ಯಾದಗಿರಿ ಜನ ತತ್ತರಿಸಿದ್ದಾರೆ. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. 1 ಲಕ್ಷ 21 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಲಾಗಿದ್ದು, ನದಿ ತೀರದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಯಾದಗಿರಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಒಲಿದು ಬಂದಿದೆ. 2022-23ನೇ ಸಾಲಿಗೆ ಭಾರತೀಯ ಮೆಡಿಕಲ್ ಕೌನ್ಸಿಲ್ನಿಂದ 150 ಸೀಟುಗಳು ಘೋಷಣೆಯಾಗಿದೆ. ಕೇಂದ್ರದ IMCಯಿಂದ 150 ಎಮ್ಬಿಬಿಎಸ್ ಸೀಟು ಮೊದಲ ಬ್ಯಾಚ್ನಲ್ಲಿ ಲಭ್ಯವಾಗಲಿದೆ. ವೈದ್ಯಕೀಯ ಶಿಕ್ಷಣ ಈ ಭಾಗದ ವಿದ್ಯಾರ್ಥಿಗಳ ಕನಸಿಗೆ ಸರ್ಕಾರದ ನೆರವು ಸಿಗಲಿದೆ. ಕೇಂದ್ರ 60% ಹಾಗೂ ರಾಜ್ಯ ಸರ್ಕಾರದ 40% ಅನುದಾನದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗಲಿದೆ. ಶೀಘ್ರ ಕಾಮಗಾರಿ ಮುಗಿಸಲು ಆಗ್ರಹ ವ್ಯಕ್ತವಾಗಿದೆ.
ಯಾದಗಿರಿಯಲ್ಲಿ ಮಳೆಯ ಅಬ್ಬರ ಜೋರಾಗಿದೆ.. ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಯಾರು ಕೂಡಾ ಹೊಲ ದಂಡೆಗೆ ಹೋಗಬಾರದು ಎಂದು ಅಜ್ಜರೊಬ್ಬರು ತಾಳ ಬಾರಿಸಿ ವಿಭಿನ್ನ ರೀತಿಯಲ್ಲಿ ಎಚ್ಚರಿಕೆ ನೀಡಿದ್ದಾರೆ..
ಕೇಂದ್ರ ಸಚಿವ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿರುವ ಹುಣಸಗಿ ತಾಲೂಕಿನಲ್ಲಿರುವ ನಾರಾಯಣಪುರ ಬಸವಸಾಗರ ಜಲಾಶಯದ ಕಾಲುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.