ರಾಜ್ಯದಲ್ಲಿ ಝೀಕಾ ಸೋಂಕಿನ ಢವ.. ಢವ!
ಬೆಂಗಳೂರಿಗೆ ಶುರುವಾಗಿದೆ ಝೀಕಾ ಆತಂಕ..!
ಇದುವರೆಗೂ ಒಂಬತ್ತು ಝೀಕಾ ವೈರಸ್ ಪತ್ತೆ
ಇಬ್ಬರು ಗುಣಮುಖ, ನಾಲ್ವರಿಗೆ ಟ್ರೀಟ್ಮೆಂಟ್
ರಾಜಾಧಾನಿಗೆ ಲಗ್ಗೆ ಇಟ್ಟಿದೆ ಡೆಡ್ಲಿ ಝೀಕಾ ವೈರಸ್..!
ಬೆಂಗಳೂರಿನಲ್ಲಿ ಗರ್ಭಿಣಿ ಸೇರಿ 6 ಮಂದಿಯಲ್ಲಿ ಝೀಕಾ ಪತ್ತೆ
ನಾಲ್ವರಲ್ಲಿ ಮೂವರು ಗರ್ಭಿಣಿಯರೇ ಝೀಕಾಗೆ ತುತ್ತು
ಹೈ ಅಲರ್ಟ್ ಆಗಿರಲು ಆರೋಗ್ಯ ಇಲಾಖೆ ಸೂಚನೆ
ಪ್ರಸ್ತುತ ಪ್ರಾಣಿಗಳಲ್ಲಿ ಕಾಣಿಸಿಕೊಂಡಿರುವ ಝೀಕಾ ವೈರಸ್ ಮಾನವರಲ್ಲಿ ಕಾಣಿಸಿಕೊಳ್ಳುವುದನ್ನು ತಡೆಯುವ ದೃಷ್ಟಿಯಿಂದ ಮಾರ್ಗಸೂಚಿ ರಿಲೀಸ್ ಮಾಡಿರುವ ಆರೋಗ್ಯ ಇಲಾಖೆ, ಝೀಕಾ ವೈರಸ್ ಲಕ್ಷಣಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದೆ.
ರಾಯಚೂರಿನಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ. ಝೀಕಾ ವೈರಸ್ ಪತ್ತೆಯಾಗಿರೋ ಪವಿತ್ರಾ ಟ್ರಾವೆಲ್ ಹಿಸ್ಟರಿ ಇನ್ನೂ ಸಿಕ್ಕಿಲ್ಲ. ಕೇಂದ್ರದ ವೈದ್ಯರ ತಂಡ ರಾಯಚೂರಿಗೆ ಭೇಟಿ ನೀಡಿದ್ದು, ಕೇಂದ್ರ ತಂಡ ಜಿಲ್ಲೆಯ ವೈದ್ಯಾಧಿಕಾರಿಗಳ ಜೊತೆ ಸಭೆ ನಡೆಸಿದೆ..
Zika virus 1st case : ರಾಯಚೂರು ಜಿಲ್ಲೆಯ ಐದು ವರ್ಷದ ಬಾಲಕಿಗೆ ಸೋಮವಾರ (ಡಿ 12) ಝಿಕಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ. ದಕ್ಷಿಣ ರಾಜ್ಯದಲ್ಲಿ ಇದು ಮೊದಲ ಬಾರಿಗೆ ಝಿಕಾ ವೈರಸ್ ದೃಢಪಟ್ಟಿದೆ. ಝಿಕಾ ವೈರಸ್ನ ಸುದ್ದಿ ಬಗ್ಗೆ ಭಯಪಡುವ ಅಗತ್ಯವಿಲ್ಲ. ಸರ್ಕಾರವು ರೋಗವನ್ನು ತಡೆಗಟ್ಟಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಮಾರ್ಗಸೂಚಿಗಳನ್ನು ಸಹ ನೀಡುತ್ತದೆ ಎಂದು ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಜಿಕಾ ವೈರಸ್ ನ ಮೊದಲ ಪ್ರಕರಣ ಪತ್ತೆಯಾಗುತ್ತಿದ್ದಂತೆಯೇ, ಸರ್ಕಾರಿ ವೈದ್ಯಕೀಯ ತಂಡವು ಶನಿವಾರ ಬೆಲ್ಸರ್ ಗ್ರಾಮಕ್ಕೆ ಭೇಟಿ ನೀಡಿತು. ಗ್ರಾಮ ಪಂಚಾಯತ್ ಸದಸ್ಯರನ್ನು ಭೇಟಿಯಾಗಿರುವ ತಂಡ ವೈರಸ್ (Virus) ಹರಡದಂತೆ ತಡೆಗಟ್ಟುವ ಕ್ರಮಗಳ ಬಗ್ಗೆ ಸೂಚನೆ ನೀಡಿದೆ
ರಾಜ್ಯದಲ್ಲಿ ರೋಗ ಹರಡದಂತೆ ತಡೆಯಲು ಸರ್ಕಾರ ಶುಕ್ರವಾರ (ಜುಲೈ 9) ಮಾರ್ಗಸೂಚಿಗಳನ್ನು ಹೊರಡಿಸಿದೆ. ಚಾಮರಾಜನಗರ, ದಕ್ಷಿಣ ಕನ್ನಡ, ಮತ್ತು ಉಡುಪಿ ಸೇರಿದಂತೆ ಕೇರಳದ ಗಡಿಯಲ್ಲಿರುವ ಜಿಲ್ಲೆಗಳು ಜಾಗರೂಕರಾಗಿರಲು ನಿರ್ದೇಶಿಸಲಾಗಿದೆ.
ಸೋಂಕಿತ ಹೆಣ್ಣು ಸೊಳ್ಳೆಗಳ ಕಚ್ಚುವಿಕೆಯ ಮೂಲಕ ಜಿಕಾ ಜನರಿಗೆ ಹರಡುತ್ತದೆ, ಮುಖ್ಯವಾಗಿ ಈಡಿಸ್ ಈಜಿಪ್ಟಿ ಸೊಳ್ಳೆ, ಅದೇ ರೀತಿಯ ಡೆಂಗ್ಯೂ, ಚಿಕೂನ್ಗುನ್ಯಾ ಮತ್ತು ಹಳದಿ ಜ್ವರವನ್ನು ಹರಡುತ್ತದೆ.
ಕೊರೊನಾ ಮಹಾಮಾರಿಯ ಪ್ರಕೋಪದ ನಡುವೆ ಝೀಕಾ ವೈರಸ್ ಕುರಿತಾದ ಮಹತ್ವದ ಮಾಹಿತಿಯೊಂದು ಬಹಿರಂಗಗೊಂಡಿದೆ. ಈ ವೈರಸ್ ಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿರುವ ಸಂಶೋಧಕರು ಲೈಂಗಿಕ ಸಂಬಂಧವೂ ಕೂಡ ಈ ವೈರಸ್ ಹರಡುವುದಕ್ಕೆ ಕಾರಣವಾಗಬಹುದು ಎಂದು ಹೇಳಿದೆ.
ಭಾರತದಲ್ಲಿ ಝಿಕಾ ವೈರಸ್ ರೋಗ (ZVD) ಪ್ರಾರಂಭವಾದಾಗ ಈ ರೋಗವನ್ನು ನಿಯಂತ್ರಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಕೇವಲ ರಾಜಸ್ಥಾನ ಒಂದರಿಂದಲೇ ಝಿಕಾ ವೈರಸ್ ನ 29 ಪ್ರಕರಣಗಳ ಬಗ್ಗೆ ವರದಿಯಾಗಿದೆ.
ರಾಜಸ್ಥಾನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ವೀಣಾ ಗುಪ್ತಾ ಮಂಗಳವಾರ ಒಟ್ಟು 29 ಜೀಕಾ ವೈರಸ್ ಪ್ರಕರಣಗಳನ್ನು ದೃಢಪಡಿಸಿದ್ದಾರೆ.ಜೀಕಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಈಗಾಗಾಗಲೇ 150ರಿಂದ 200 ತಂಡಗಳು ಜೈಪುರದಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.