ಜಿಎಸ್ಟಿ ಕೌನ್ಸಿಲ್ ಸಭೆ ಮುಕ್ತಾಯವಾಗುತ್ತಿದ್ದಂತೆ,ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆನ್ಲೈನ್ ಆಹಾರ ವಿತರಣಾ ಸಂಸ್ಥೆಗಳಾದ ಸ್ವಿಗ್ಗಿ ಮತ್ತು ಜೊಮಾಟೊ ಇನ್ನು ಮುಂದೆ ಸರ್ಕಾರಕ್ಕೆ ಜಿಎಸ್ಟಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ಬಹಿರಂಗಪಡಿಸಿದರು.
ಅಂತರ್ಜಾಲ ಮೂಲಸೌಕರ್ಯ ಕಂಪನಿ ಅಕಮೈ ಟೆಕ್ನಾಲಜೀಸ್ನ ಸಮಸ್ಯೆಗಳಿಂದಾಗಿ ಜನಪ್ರಿಯ ಅಂತರ್ಜಾಲ ಕಂಪನಿಗಳಾದ ಜೊಮಾಟೊ, ಪೇಟಿಎಂ, ಡಿಸ್ನಿ + ಹಾಟ್ಸ್ಟಾರ್, ಸೋನಿ ಎಲ್ಐವಿ ಪ್ರಮುಖ ಸ್ಥಗಿತತೆಯನ್ನುಎದುರಿಸುತ್ತಿವೆ.
ಜೊಮ್ಯಾಟೋದ ಐಪಿಓ(initial public offering) ಬುಧವಾರದಿಂದ (ಜುಲೈ 14) ಚಂದಾದಾರಿಕೆಗೆ ಆರಂಭವಾಗಲಿದೆ. ಇದು ಇತ್ತೀಚಿನ ದಿನಗಳಲ್ಲಿ ಭರದಲ್ಲಿ ಪ್ರಾರಂಭವದ ಅತಿದೊಡ್ಡ ಐಪಿಒಗಳಲ್ಲಿ ಒಂದಾಗಿದೆ.
Zomato ಗುರುವಾರ ತನ್ನ ಬಗ್ ಬೌಂಟಿ ಕಾರ್ಯಕ್ರಮಕ್ಕಾಗಿ ನೀಡುವ ರಿವಾರ್ಡ್ ಅನ್ನು ಹೆಚ್ಚಿಸಿದೆ. ವೆಬ್ಸೈಟ್ ಅಥವಾ ಅದರ ಮೊಬೈಲ್ ಅಪ್ಲಿಕೇಶನ್ನಲ್ಲಿ ಯಾರೇ ದೋಷವನ್ನು ಕಂಡುಹಿಡಿದರೂ, ಅವರಿಗೆ 4 ಸಾವಿರ ಡಾಲರ್ ಅಂದರೆ 2.99 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಜೊಮಾಟೊ ಹೇಳಿದೆ.
ರೆಸ್ಟೋರೆಂಟ್ ಅಗ್ರಿಗೇಟರ್ ಜೋಮಾಟೊ ಶುಕ್ರವಾರ ತನ್ನ ಶೇಕಡಾ 13 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ ಮತ್ತು ಜೂನ್ನಿಂದ ಆರು ತಿಂಗಳವರೆಗೆ ತನ್ನ ಉದ್ಯೋಗಿಗಳಾದ್ಯಂತ ಶೇ 50 ರಷ್ಟು ವೇತನ ಕಡಿತವನ್ನು ಘೋಷಿಸಿದೆ.
RBL(ಆರ್ಬಿಎಲ್) ಬ್ಯಾಂಕ್ ಮತ್ತು ಜೊಮಾಟೊ(Zomato) ಮಾಸ್ಟರ್ಕಾರ್ಡ್ ಸಹಾಯದಿಂದ ಸಹ-ಬ್ರಾಂಡ್ ಕ್ರೆಡಿಟ್ ಕಾರ್ಡ್ ಅನ್ನು ಪರಿಚಯಿಸಿದವು.ಆನ್ಲೈನ್ ಆಹಾರ ವಿತರಣಾ ಮಾರುಕಟ್ಟೆಯ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಡ್ ಅನ್ನು ಪರಿಚಯಿಸಲಾಗಿದೆ.
ಕಚೇರಿಯ ಟೆರೇಸ್ ನಲ್ಲಿ ಆಹಾರ ವಿತರಣಾ ಬ್ಯಾಗುಗಳನ್ನು ಸಂಗ್ರಹಿಸಿದ್ದರಿಂದ ಬ್ಯಾಗುಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಇದರಿಂದಾಗಿ ಡೆಂಗ್ಯೂ ಹರಡುವ ಭೀತಿಯಿದೆ ಎಂದಿರುವ ಕಾರ್ಪೋರೇಷನ್, ಜೊಮಾಟೊಗೆ ಒಂದು ಲಕ್ಷ ರೂ. ದಂಡ ವಿಧಿಸಿದೆ.
ಆನ್ಲೈನ್ ಬುಕಿಂಗ್ ಮತ್ತು ಆಹಾರ ವಿತರಣಾ ವೇದಿಕೆ Zomato ಡ್ರೋನ್ಗಳ ಮೂಲಕ ಆಹಾರದ(ಫುಡ್) ವಿತರಣೆ ಮಾಡುವುದಾಗಿ ಘೋಷಿಸಿದೆ. ಕಂಪನಿಯ ಪರವಾಗಿ ಡ್ರೋನ್ ವಿತರಣಾ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.