ಬೆಂಗಳೂರು: ಪ್ರಸ್ತುತ ChatGPT ಬಹಳ ವೇಗವಾಗಿ ಬೆಳೆಯುತ್ತಿರುವ ಮತ್ತು ಸಾಕಷ್ಟು ಚರ್ಚೆಯಾಗುತ್ತಿರುವ ಜನಪ್ರಿಯ ಅಪ್ಲಿಕೇಶನ್ ಆಗಿದೆ. ನೀವೂ ಕೂಡ ಈ ChatGPT ಅನ್ನು ಡೌನ್‌ಲೋಡ್ ಮಾಡಲು ಅಥವಾ ಬಳಸಲು ಚಿಂತಿಸುತ್ತಿದ್ದರೆ ಮೊದಲು ಈ ಸುದ್ದಿಯನ್ನು ತಪ್ಪದೇ ಓದಿ. ವಾಸ್ತವವಾಗಿ, ಕ್ಯಾಸ್ಪರ್ಸ್ಕಿಯ ಸೈಬರ್ ಭದ್ರತಾ ಸಂಶೋಧಕರು ಹೊಸ ಮಾಲ್‌ವೇರ್-ಹೊತ್ತ ನಕಲಿ ಚಾಟ್‌ಜಿಪಿಟಿ ಡೆಸ್ಕ್‌ಟಾಪ್ ಅಪ್ಲಿಕೇಶನ್ ಅನ್ನು ಪತ್ತೆ ಮಾಡಿದ್ದಾರೆ. ವಂಚಕರು ಈ ಚಾಟ್‌ಜಿಪಿಟಿ ಅಪ್ಲಿಕೇಶನ್ ಜನಪ್ರಿಯತೆಯನ್ನು ಬಳಸಿಕೊಂಡು ಜನರನ್ನು ವಂಚಿಸುತ್ತಿದ್ದಾರೆ.
ಈ ಕುರಿತಂತೆ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ, ಮಾಹಿತಿ ಹಂಚಿಕೊಂಡಿರುವ ಸೈಬರ್ ಸೆಕ್ಯೂರಿಟಿ, 'ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗೆ ಲಿಂಕ್‌ಗಳನ್ನು ಪ್ರಸಾರ ಮಾಡಲಾಗುತ್ತಿದೆ'. ಇವುಗಳ ಮೂಲಕ ಚಾಟ್‌ಜಿಪಿಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವಾಗ ಬ್ಯಾಂಕ್ ಖಾತೆಗೆ $50 ಜಮಾ ಮಾಡಲಾಗುವುದು ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಲಾಗಿದೆ. ಆದರೆ ಬಳಕೆದಾರರ ಡೇಟಾವನ್ನು ಕದಿಯಲು ಅಪ್ಲಿಕೇಶನ್ ಮಾಲ್ವೇರ್ ಅನ್ನು ಸ್ಥಾಪಿಸುತ್ತದೆ. ಅದು ಬಳಕೆದಾರರ ಸಾಮಾಜಿಕ ಮಾಧ್ಯಮ ರುಜುವಾತುಗಳನ್ನು ಕದಿಯಬಹುದು ಎಂದು ಬರೆಯಲಾಗಿದೆ.
ಇದನ್ನೂ ಓದಿ- ಇನ್ಮುಂದೆ WhatsApp ನಲ್ಲಿ ಸೆಂಡ್ ಮಾಡಿದ ಮೆಸೇಜ್ ಮತ್ತೆ ಎಡಿಟ್ ಮಾಡಬಹುದು!
FOBO ಮಾಲ್ವೇರ್:
ಈ ಮಾಲ್‌ವೇರ್ ಅನ್ನು FOBO ಎಂದು ಗುರುತಿಸಲಾಗಿದೆ. ಹ್ಯಾಕರ್‌ಗಳು ನಕಲಿ ಚಾಟ್‌ಜಿಪಿಟಿ ವೆಬ್‌ಸೈಟ್ ಅನ್ನು ರಚಿಸಿದ್ದಾರೆ. ವಾಸ್ತವವಾಗಿ ಇದು ನೋಡಲು ನಿಜವಾದ ಚಾಟ್‌ಜಿಪಿಟಿ ವೆಬ್‌ಸೈಟ್ ನಂತೆಯೇ ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಬಳಕೆದಾರರು ಪೋಸ್ಟ್‌ನಲ್ಲಿ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡಿದ ತಕ್ಷಣ, ಅವರನ್ನು ನಕಲಿ ವೆಬ್‌ಸೈಟ್‌ಗೆ ಕಳುಹಿಸಲಾಗುತ್ತದೆ. ಅವರು ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಆಯ್ಕೆಯನ್ನು ಆರಿಸಿದಾಗ, ಅನುಸ್ಥಾಪನಾ ಪ್ರಕ್ರಿಯೆಯು ಇದ್ದಕ್ಕಿದ್ದಂತೆ ಮಧ್ಯದಲ್ಲಿ ನಿಲ್ಲುತ್ತದೆ. ಇಂತಹ ಸಂದರ್ಭದಲ್ಲಿ ಬಳಕೆದಾರರು ಡೌನ್‌ಲೋಡ್‌ನಲ್ಲಿ ಸಮಸ್ಯೆ ಇದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ, ನಿಮ್ಮ ಸಿಸ್ಟಮ್‌ನಲ್ಲಿ ಮಾಲ್‌ವೇರ್ ಫೋಬೋ ಅನ್ನು ಸ್ಥಾಪಿಸಲಾಗುತ್ತದೆ. ಲಾಗಿನ್ ರುಜುವಾತುಗಳನ್ನು ಒಳಗೊಂಡಿರುವ ಕುಕೀಗಳನ್ನು ಕದಿಯಲು ಈ ಮಾಲ್‌ವೇರ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ- ಎಲ್ಲೆಡೆ ಕೆಲಸದಿಂದ ವಜಾ ಮಾಡುತ್ತಿದ್ದರೆ ಟಾಟಾ ಗ್ರೂಪ್‌ನ ಈ ಕಂಪನಿ ಮಾಡಿರುವ ಘೋಷಣೆ ಏನು ಗೊತ್ತಾ ?
ಜಾಗತಿಕ ಮಾರುಕಟ್ಟೆಯೇ ಗುರಿ:
>> ಈ ಮಾಲ್ವೇರ್ ಟ್ರೋಜನ್ ಕ್ರೋಮ್, ಫೈರ್ಫಾಕ್ಸ್ ಸೇರಿದಂತೆ ಹಲವು ವೆಬ್ ಬ್ರೌಸರ್ಗಳ ಮೇಲೆ ಪರಿಣಾಮ ಬೀರುತ್ತಿದೆ.
>> ಕುಕೀಗಳನ್ನು ಬಳಸಿಕೊಂಡು ಹ್ಯಾಕರ್‌ಗಳು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಗೂಗಲ್ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳ ವಿವರಗಳನ್ನು ಕದಿಯಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
>> FOBO ಮಾಲ್ವೇರ್ ಸ್ಕ್ಯಾಮರ್‌ಗಳು ಜಾಗತಿಕ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ನಕಲಿ ವೆಬ್‌ಸೈಟ್ ಆಫ್ರಿಕಾ, ಏಷ್ಯಾ, ಯುರೋಪ್ ಮತ್ತು ಅಮೆರಿಕದ ಬಳಕೆದಾರರ ಮೇಲೆ ದಾಳಿ ಮಾಡಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.