WhatsApp: ಇತ್ತೀಚಿನ ದಿನಗಳಲ್ಲಿ ಪ್ರಮುಖ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್ ನಮ್ಮ ಹಲವಾರು ಪ್ರಮುಖ ಚಾಟ್ಗಳು, ಚಿತ್ರಗಳು, ವೀಡಿಯೊಗಳು ಮತ್ತು ಡಾಕ್ಯುಮೆಂಟ್ಗಳನ್ನು ಒಳಗೊಂಡಿರುತ್ತದೆ. ಇವುಗಳನ್ನು ಕಳೆದುಕೊಳ್ಳುವುದು ದುಃಸ್ವಪ್ನವಾಗಬಹುದು. ಈ ಮೊದಲು ವಾಟ್ಸಾಪ್ ಆಂಡ್ರಾಯ್ಡ್ ಬಳಕೆದಾರರಿಗೆ ತಮ್ಮ ಚಾಟ್ಗಳನ್ನು ಗೂಗಲ್ ಡ್ರೈವ್ಗೆ ಉಚಿತವಾಗಿ ಬ್ಯಾಕಪ್ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಆದರೆ, ಶೀಘ್ರದಲ್ಲೇ ಇದು ಬದಲಾಗಬಹುದು.
ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ ಈಗಾಗಲೇ ತಿಳಿದಿರುವಂತೆ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ, ಎಲ್ಲಾ ಆಂಡ್ರಾಯ್ಡ್ ಬಳಕೆದಾರರು ಪ್ರಸ್ತುತ ಗೂಗಲ್ ಡ್ರೈವ್ನಲ್ಲಿ 15GB ಉಚಿತ ಡೇಟಾವನ್ನು ಪಡೆಯಬಹುದು. ಈ 15ಜಿಬಿ ಡೇಟಾ ಫೋನ್ನಲ್ಲಿ ಎಲ್ಲಾ ಡೇಟಾವನ್ನು ಸಹ ಒಳಗೊಂಡಿರುತ್ತದೆ. ಹೀಗಿರುವಾಗ ವಾಟ್ಸಾಪ್ ಚಾಟ್ಗಳು ಫೋಟೋಗಳು, ವಿಡಿಯೋಗಳು ಎಲ್ಲವನ್ನೂ ಒಳಗೊಂಡಿರುವುದರಿಂದ 15GB ತುಂಬಾ ಕಡಿಮೆ ಸಂಗ್ರಹ ಸಾಮರ್ಥ್ಯವಾಗಿದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನೀವು ಪ್ರತಿ ತಿಂಗಳು ಕೇವಲ 35 ರೂ. ಖರ್ಚು ಮಾಡುವ ಮೂಲಕ ಹೆಚ್ಚಿನ ಸ್ಟೋರೇಜ್ ಅನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಗೂಗಲ್ ಒನ್ ಸೇವೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಇದನ್ನೂ ಓದಿ- WhatsApp Call ರೆಕಾರ್ಡ್ ಮಾಡಲು ಇಲ್ಲಿದೆ ಸುಲಭ ವಿಧಾನ
ಏನಿದು ಗೂಗಲ್ ಒನ್ ಸೇವೆ?
ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿ ಗೂಗಲ್ ಡ್ರೈವ್ನಿಂದ ಲಭ್ಯವಿರುವ 15ಜಿಬಿ ಉಚಿತ ಸಂಗ್ರಹಣೆಯು ಖಾಲಿಯಾಗಿದ್ದರೆ ಮಾತು ನೀವು ನಿಮ್ಮ ವಾಟ್ಸಾಪ್ ಚಾಟ್ಗಳ ಸಂಪೂರ್ಣ ಬ್ಯಾಕಪ್ ತೆಗೆದುಕೊಳ್ಳಲು ಬಯಸಿದರೆ ಗೂಗಲ್ ಒನ್ ಸೇವೆ ತುಂಬಾ ಪ್ರಯೋಜನಕಾರಿಯಾಗಿದೆ.
ಗೂಗಲ್ ಒನ್ ವಾಸ್ತವವಾಗಿ ಗೂಗಲ್ ಡ್ರೈವ್ನ ಪಾವತಿಸಿದ ಯೋಜನೆಯಾಗಿದ್ದು ಅದು ನಿಮಗೆ ಹೆಚ್ಚಿನ ಸಂಗ್ರಹಣೆಯನ್ನು ನೀಡುತ್ತದೆ. ನೀವು ಬಯಸಿದರೆ, ನೀವು ಪ್ರತಿ ತಿಂಗಳು ಅಥವಾ ಇಡೀ ವರ್ಷಕ್ಕೆ ಚಂದಾದಾರರಾಗಬಹುದು.
ಗೂಗಲ್ ಒನ್ ಯೋಜನೆಗಳು:
ಗೂಗಲ್ ಒನ್ ಮೂರು ಪ್ಲಾನ್ಗಳನ್ನು ಹೊಂದಿದ್ದು, ಅವು ಈ ಕೆಳಕಂದಂತಿವೆ.
* ಬೇಸಿಕ್ (100GB) ಬೆಲೆ 130 ರೂ.
* ಸ್ಟ್ಯಾಂಡರ್ಡ್ (200GB) ಬೆಲೆ 210 ರೂ.
* ಪ್ರೀಮಿಯಂ (2TB) ಬೆಲೆ 650 ರೂ. ಆದಾಗ್ಯೂ, ಸದ್ಯ ವಿಶೇಷ ಆಫರ್ ಲಭ್ಯವಿದ್ದು ಇದರ ಭಾಗವಾಗಿ ನೀವು ಬೇಸಿಕ್ ಪ್ಲಾನ್ ಅನ್ನು ಕೇವಲ 35 ರೂ.ಗಳಿಗೆ ಪಡೆಯಬಹುದಾಗಿದೆ. ಅಂತೆಯೇ ಸ್ಟ್ಯಾಂಡರ್ಡ್ ಪ್ಲಾನ್ ಅನ್ನು 50 ರೂ.ಗಳಿಗೆ ಹಾಗೂ ಪ್ರೀಮಿಯಂ ಪ್ಲಾನ್ ಅನ್ನು ಪ್ರತಿ ತಿಂಗಳಿಗೆ ಕೇವಲ 160 ರೂ.ಗಳಿಗೆ ಪಡೆಯಬಹುದಾಗಿದೆ.
ಗಮನಾರ್ಹ ವಿಷಯವೆಂದರೆ ಈ ಅಗ್ಗದ ಪ್ಲಾನ್ಗಳು ಮೂರು ತಿಂಗಳವರೆಗೆ ಮಾತ್ರ ಮಾನ್ಯವಾಗಿದ್ದು, ಬಳಿಕ ನಿರ್ದಿಷ್ಟ ಬೆಲೆಯನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ- ಪತಿ ಪತ್ನಿ ಪರಸ್ಪರರ ವಾಟ್ಸಾಪ್ ಮೆಸೇಜ್ ಪರಿಶೀಲಿಸಬಹುದೇ? ಕಾನೂನು ಏನು ಹೇಳುತ್ತೇ?
ಮೂರು ತಿಂಗಳ ಪ್ಲಾನ್:
ನೀವು ಮೂರು ತಿಂಗಳವರೆಗೆ ಚಂದಾದಾರರಾಗಲು ಬಯಸಿದರೆ ಇದಕ್ಕಾಗಿ ವಿಶೇಷ ರಿಯಾಯಿತಿ ಕೂಡ ಲಭ್ಯವಿದೆ. ಮೂರು ತಿಂಗಳಿಗೆ ಸಾಮಾನ್ಯವಾಗಿ 390 ರೂ. ಬೆಲೆಯ ಬೇಸಿಕ್ ಪ್ಲಾನ್ ಅದೇ ಅವಧಿಗೆ 100 ರೂ.ಗೆ ಲಭ್ಯವಿರುತ್ತದೆ. ಅದೇ ರೀತಿ ಸ್ಟ್ಯಾಂಡರ್ಡ್ ಪ್ಲಾನ್ ಬೆಲೆಯನ್ನು ಮೂರು ತಿಂಗಳಿಗೆ 630 ರೂ.ನಿಂದ 160 ರೂ.ಗೆ ಇಳಿಸಲಾಗಿದೆ.
ಒಂದೊಮ್ಮೆ ನಿಮಗೆ ಹಣ ಪಾವತಿಸಿ ಗೂಗಲ್ ಒನ್ ಸೇವೆಯನ್ನು ಪಡೆಯಲು ಇಷ್ಟವಿಲ್ಲದಿದ್ದರೆ ವಾಟ್ಸಾಪ್ ಸೆಟ್ಟಿಂಗ್ಗಳಿಗೆ ಹೋಗಿ, ನಂತರ ಸಂಗ್ರಹಣೆ ಮತ್ತು ಡೇಟಾ ಮತ್ತು ಸಂಗ್ರಹಣೆಯನ್ನು ನಿರ್ವಹಿಸಿ ಎಂಬ ಆಯ್ಕೆಯನ್ನು ಆರಿಸಿ. ಇಲ್ಲಿ ನಿಮಗೆ ವಾಟ್ಸಾಪ್ ಹಣವನ್ನು ಖರ್ಚು ಮಾಡದೆಯೆ ನಿಮ್ಮ ಸ್ಟೋರೇಜ್ನ ನಿರ್ವಹಣೆ ಮಾಡಲು ಅನುಕೂಲವಾಗುವ ವಿವಿಧ ಆಯ್ಕೆಗಳು ಲಭ್ಯವಿವೆ. ಇದರಲ್ಲಿ ನೀವು ಪ್ರಮುಖ ಚಾಟ್ಗಳನ್ನು ಮಾತ್ರ ಉಳಿಸಲು ಅಥವಾ ಆ ಚಾಟ್ಗಳಿಗಾಗಿ ಪ್ರತ್ಯೇಕ ಬ್ಯಾಕಪ್ ಅನ್ನು ರಚಿಸಲು ಸಹಾಯಕವಾಗುವ ವಿವಿಧ ಮಾರ್ಗಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.