Airtel- ನಿಮ್ಮ ಏರ್‌ಟೆಲ್ ಸಂಖ್ಯೆಯಲ್ಲಿಯೂ ಈ ಸಂದೇಶ ಸ್ವೀಕರಿಸಿದ್ದೀರಾ?

ನೀವು ಏರ್‌ಟೆಲ್ ಗ್ರಾಹಕರಾಗಿದ್ದರೆ, ನಿಮ್ಮ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸುವ ಸಂದೇಶವನ್ನು ನೀವು ಕಂಪನಿಯಿಂದ ಸ್ವೀಕರಿಸಬಹುದು. ಈ ಸಂದೇಶವನ್ನು ಏಕೆ ಕಳುಹಿಸಲಾಗಿದೆ ಮತ್ತು ನೀವು ಏನು ಮಾಡಬೇಕು ಎಂದು ತಿಳಿಯಿರಿ...

Written by - Yashaswini V | Last Updated : Aug 9, 2021, 11:05 AM IST
  • ಹಲವು ಏರ್ಟೆಲ್ ಬಳಕೆದಾರರಿಗೆ ಅವರ ಸೇವೆಗಳನ್ನು ನಿಲ್ಲಿಸಲಾಗಿದೆ ಎಂಬ ಸಂದೇಶ ರವಾನೆ
  • ಸೇವೆಗಳನ್ನು ಬಳಸುವುದನ್ನು ಮುಂದುವರಿಸಲು ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಗಳನ್ನು ರೀಚಾರ್ಜ್ ಮಾಡುವಂತೆ ಸಂದೇಶದಲ್ಲಿ ತಿಳಿಸಲಾಗಿದೆ
  • ಈ ಸಂದೇಶವನ್ನು ಏಕೆ ಕಳುಹಿಸಲಾಗಿದೆ ಮತ್ತು ನೀವು ಏನು ಮಾಡಬೇಕು ಎಂದು ತಿಳಿಯಿರಿ
Airtel- ನಿಮ್ಮ ಏರ್‌ಟೆಲ್ ಸಂಖ್ಯೆಯಲ್ಲಿಯೂ ಈ ಸಂದೇಶ ಸ್ವೀಕರಿಸಿದ್ದೀರಾ?  title=
Representational Image

ನವದೆಹಲಿ: ನೀವು ಏರ್‌ಟೆಲ್ ಗ್ರಾಹಕರಾಗಿದ್ದರೆ, ನಿಮ್ಮ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸುವ ಸಂದೇಶವನ್ನು ನೀವು ಕಂಪನಿಯಿಂದ ಪಡೆಯಬಹುದು. ಸೇವೆಗಳನ್ನು ಬಳಸುವುದನ್ನು ಮುಂದುವರಿಸಲು ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಗಳನ್ನು ರೀಚಾರ್ಜ್ ಮಾಡುವಂತೆ ಸಂದೇಶದಲ್ಲಿ ಸೂಚಿಸಲಾಗಿರುತ್ತದೆ. ನೀವು ಕೂಡ ಇಂತಹ ಸಂದೇಶವನ್ನು ಸ್ವೀಕರಿಸಿದ್ದರೆ, ಚಿಂತಿಸಬೇಡಿ. ಏಕೆಂದರೆ ತಾಂತ್ರಿಕ ದೋಷದಿಂದಾಗಿ ಬಹುತೇಕ ಗ್ರಾಹಕರಿಗೆ ಈ ರೀತಿಯ ಸಂದೇಶ ರವಾನೆಯಾಗಿದೆ ಎಂದು ಹೇಳಲಾಗುತ್ತಿದೆ. ಹಲವಾರು ಬಳಕೆದಾರರು ಈ ಬಗ್ಗೆ ಟ್ವಿಟರ್‌ನಲ್ಲಿ ದೂರಿದ್ದಾರೆ.

ಬಳಕೆದಾರರು ಏರ್‌ಟೆಲ್‌ನಿಂದ ಸಂದೇಶವನ್ನು ಸ್ವೀಕರಿಸಿದ್ದು ಅದರಲ್ಲಿ 'ನಿಮ್ಮ ಪ್ರಸ್ತುತ ಸೇವೆಗಳನ್ನು ನಿಲ್ಲಿಸಲಾಗಿದೆ. ಮುಂದುವರಿಸಲು, airtel.in ಪ್ರಿಪೇಯ್ಡ್/ಪ್ರಿಪೇಯ್ಡ್ ರೀಚಾರ್ಜ್ ಮೇಲೆ ಕ್ಲಿಕ್ ಮಾಡಿ ಅಥವಾ 121 ಅನ್ನು ಡಯಲ್ ಮಾಡಿ ಎಂದು ಸೂಚಿಸಲಾಗಿರುತ್ತದೆ. ನಿಮ್ಮ ಪ್ರಿಪೇಯ್ಡ್ ಪ್ಯಾಕ್ (Prepaid Pack) ಖಾಲಿಯಾದರೆ, ನೀವು ನಿಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡಬೇಕು. ಆದರೆ ನೀವು ಇತ್ತೀಚೆಗೆ ನಿಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡಿದ್ದು, ಅದಗ್ಯೂ ಈ ರೀತಿಯ ಸಂದೇಶವನ್ನು ಸ್ವೀಕರಿಸಿದ್ದರೆ, ನೀವು ಸಂದೇಶವನ್ನು ನಿರ್ಲಕ್ಷಿಸಬೇಕು.

ಇದನ್ನೂ ಓದಿ- WhatsApp Tips: ಟೈಪ್ ಮಾಡದೇ ನೀವು ಸಂದೇಶಗಳನ್ನು ಕಳುಹಿಸಬಹುದೇ..?

ಈ ವಿಷಯವನ್ನು ಟ್ವಿಟರ್‌ನಲ್ಲಿ ಪ್ರಸ್ತಾಪಿಸಿದರು:
ವಾಸ್ತವವಾಗಿ ಈ ರೀತಿಯ ಸಂದೇಶ ಸ್ವೀಕರಿಸುವುದರಿಂದ ಗಾಬರಿಗೊಂಡ ಟ್ವಿಟ್ಟರ್ ಬಳಕೆದಾರರೊಬ್ಬರು ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುತ್ತಾ, 'ಆತ್ಮೀಯ @Airtel_Presence @airtelindia, ನನ್ನ ಎಲ್ಲಾ ನಂಬರ್‌ಗಳಲ್ಲಿ ನಾನು ಈ ಕೆಳಗಿನ ಸಂದೇಶವನ್ನು ಸ್ವೀಕರಿಸಿದ್ದೇನೆ. ಇದು ಕೆಲವು ಸಿಸ್ಟಮ್ ದೋಷದಿಂದಾಗಿ? ನನ್ನ ಎಲ್ಲಾ ಏರ್‌ಟೆಲ್‌ (Airtel) ಸಂಖ್ಯೆಗಳು ಮಾನ್ಯ ಸಕ್ರಿಯ ಯೋಜನೆಗಳನ್ನು ಹೊಂದಿವೆ. ದಯವಿಟ್ಟು ಸೂಚಿಸಿ ಎಂದು ಬರೆದಿದ್ದಾರೆ.

Airtel Technical Glitch

ಇದನ್ನೂ ಓದಿ- World's Smallest Smartphone: ವಿಶ್ವದ ಈ ಅತ್ಯಂತ ಚಿಕ್ಕ ಸ್ಮಾರ್ಟ್ ಫೋನ್ ಅನ್ನು ನೀವು ಕೇವಲ ರೂ 7,500ಕ್ಕೆ ಖರೀದಿಸಬಹುದು, ಇಲ್ಲಿದೆ ವಿಶೇಷತೆ

ಏರ್ಟೆಲ್ ಈ ರೀತಿ ಪ್ರತಿಕ್ರಿಯಿಸಿದೆ:
ಬಳಕೆದಾರರ ಈ ಸಮಸ್ಯೆಗೆ ಪ್ರತಿಕ್ರಿಯಿಸಿರುವ ಏರ್ಟೆಲ್, "ನಮ್ಮ ಕಡೆಯಿಂದ ತಾಂತ್ರಿಕ ದೋಷದಿಂದಾಗಿ ಸೇವೆಗಳನ್ನು ನಿಷ್ಕ್ರಿಯಗೊಳಿಸುವುದಕ್ಕೆ ಸಂಬಂಧಿಸಿದಂತೆ ನೀವು ತಪ್ಪಾದ SMS ಸ್ವೀಕರಿಸಿರಬಹುದು. ದಯವಿಟ್ಟು ಅದನ್ನು ನಿರ್ಲಕ್ಷಿಸಿ. ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ" ಎಂದು ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News