Instagram Reels New Feature: ಸಾಮಾಜಿಕ ಮಾಧ್ಯಮ Instagram Reels ನಲ್ಲಿ ಕೊನೆಗೂ ಬಳಕೆದಾರರು ಬಹುಕಾಲದಿಂದ ಕಾಯುತ್ತಿದ್ದ ವೈಶಿಷ್ಟ್ಯ ಬಂದೆ ಬಿಟ್ಟಿದೆ. ಇನ್ಮುಂದೆ ಈವು ನಿಮ್ಮ ಅಚ್ಚುಮೆಚ್ಚಿನ ರೀಲ್ಸ್ ವಿಡಿಯೋಗೆ ಪ್ರಾಡಕ್ಟ್ ಕೂಡ ಟ್ಯಾಗ್ ಮಾಡಬಹುದು.
ವಿಡಿಯೋ ತಯಾರಕರಿಗೆ ಹಾಗೂ ಇನ್ಫ್ಲುಯೆನ್ಸರ್ ಗಳಿಗೆ ಇದರ ಲಾಭ (Creators and Business Influencers will be benefitted)
ಟೆಕ್ ಸುದ್ದಿಗಳನ್ನು ಬಿತ್ತರಿಸುವ 'ದಿ ವರ್ಜ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಇನ್ಸ್ಟಾಗ್ರಾಮ್ ತನ್ನ ಶಾರ್ಟ್ ವಿಡಿಯೋ ಸೆಕ್ಷನ್ ರೀಲ್ಸ್ ನಲ್ಲಿ ಟ್ಯಾಗಿಂಗ್ ವೈಶಿಷ್ಟ್ಯ ಜೋಡಿಸಿದೆ. ಶಾರ್ಟ್ ವಿಡಿಯೋ ತಯಾರಿಸುವವರಿಗೆ ಹಾಗೂ ಬಿಸಿನೆಸ್ ಇನ್ಫ್ಲುಯೆನ್ಸರ್ ಗಳು ಇನ್ಮುಂದೆ ತಮ್ಮ ವಿಡಿಯೋಗಳಿಗೆ ಪ್ರಾಡಕ್ಟ್ಸ್ ಅನ್ನು ಟ್ಯಾಗ್ ಮಾಡಬಹುದು.
ಇದನ್ನು ಓದಿ- WhatsApp,Facebook,Telegramಗಳು ನೀಡುವ ಈ ಸೇವೆ Google ಕೂಡ ಆರಂಭಿಸಿದೆ
ಟ್ಯಾಪ್ ಮಾಡುವ ಮೂಲಕ ಬಳಕೆದಾರರು ಶಾಪಿಂಗ್ ನಡೆಸಬಹುದು (Just Tap and Shop)
ಈ ಕುರಿತು ಹೇಳಿಕೆ ನೀಡಿರುವ ತಜ್ಞರು, ಇನ್ಸ್ಟಾಗ್ರಾಮ್ ನ ಈ ಟ್ಯಾಗಿಂಗ್ ವೈಶಿಷ್ಟ್ಯದ ಲಾಭ ಬಳಕೆದಾರರಿಗೆ ಆಗಲಿದೆ. ಏಕೆಂದರೆ ಇದರಿಂದ ಬಳಕೆದಾರರು ಕೇವಲ ಟ್ಯಾಪ್ ಮಾಡುವ ಮೂಲಕ ಶಾಪಿಂಗ್ ಕೂಡ ಮಾಡಬಹುದು.
ಇದನ್ನು ಓದಿ- 2020ರಲ್ಲಿ 250ಕ್ಕೂ ಹೆಚ್ಚು ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಭಾರತ: ಇಲ್ಲಿದೆ ಫುಲ್ ಲಿಸ್ಟ್
TikTok ಬ್ಯಾನ್ ಲಾಭ ಪಡೆದ ಇನ್ಸ್ಟಾಗ್ರಾಮ್ (Instagram Benefitted from TikTok ban)
ಭಾರತದಲ್ಲಿ ಚೀನಾ ಮೂಲದ TikTok ಬ್ಯಾನ್ ಆದ ಬಳಿಕ Instagram ಅದರ ಲಾಭ ಪಡೆದಿದೆ. ಟಿಕ್ ಟಾಕ್ ನ ಬಹುತೇಕ ಬಳಕೆದಾರರು ಇದೀಗ Instagram ನ ನೂತನ ಶಾರ್ಟ್ ವಿಡಿಯೋ ವೈಶಿಷ್ಟ್ಯ ರೀಲ್ಸ್ (Short Video Feature Reels) ನಲ್ಲಿ ಸಕ್ರೀಯಗೊಂಡಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಇನ್ಸ್ಟಾಗ್ರಾಮ್ ನ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಏರಿಕೆ ಗಮನಿಸಲಾಗಿದೆ. ಇದರಿಂದ Facebook ಮಾಲೀಕತ್ವದ ಈ ಉತ್ಪನ್ನಕ್ಕೆ ಟ್ರ್ಯಾಫಿಕ್ ಕೂಡ ಹೆಚ್ಚಾಗಿದೆ. LAC ಬಳಿ ಭಾರತ-ಚೀನಾ ಸೇನೆಗಳ ನಡುವೆ ಉಲ್ಭಣಗೊಂಡ ಪರಿಸ್ಥಿತಿಯ ಹಿನ್ನೆಲೆ ಭಾರತ ಚೀನಾ ಮೂಲದ ಸುಮಾರು 200ಕ್ಕೂ ಅಧಿಕ ಆಪ್ ಗಳನ್ನು ಬ್ಯಾನ್ ಮಾಡಿದೆ (Chinese App Ban) ಎಂಬುದು ಇಲ್ಲಿ ಉಲ್ಲೇಖನೀಯ.