Flipkart Black Friday Sale: ಬ್ಲ್ಯಾಕ್ ಫ್ರೈಡೇ ಸೇಲ್ ಫ್ಲಿಪ್ಕಾರ್ಟ್ನಲ್ಲಿ ನಡೆಯುತ್ತಿದೆ. ನವೆಂಬರ್ 30 ಅಂದರೆ ಇಂದು ಮಾರಾಟದ ಕೊನೆಯ ದಿನವಾಗಿದೆ. ನೀವು ಅಗ್ಗವಾಗಿ ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ ಇದು ಸರಿಯಾದ ಅವಕಾಶ. Apple ನ iPhone 14 ಸರಣಿಯನ್ನು ಕೆಲವು ತಿಂಗಳ ಹಿಂದೆ ಬಿಡುಗಡೆ ಮಾಡಲಾಗಿದೆ. ಆದರೆ ಕೆಲವೇ ತಿಂಗಳುಗಳ ನಂತರ ಫೋನ್ನ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ. ಫ್ಲಿಪ್ಕಾರ್ಟ್ ಮಾರಾಟದಲ್ಲಿ ಐಫೋನ್ 14 ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ಸುಮಾರು 80 ಸಾವಿರ ರೂಪಾಯಿ ಬೆಲೆಯ ಈ ಫೋನ್ಅನ್ನು ನೀವು ಸುಮಾರು 50 ಸಾವಿರ ರೂಪಾಯಿಗೆ ಖರೀದಿಸಬಹುದು.
ಇದನ್ನೂ ಓದಿ : iPhone 15: ಹೀಗಿರುತ್ತೆ ನೋಡಿ ಐಫೋನ್ 15, ಮೊದಲ ಫೋಟೋ ರಿವೀಲ್ ಮಾಡಿದ ಆ್ಯಪಲ್!
iPhone 14 (128GB) ಬೆಲೆ ರೂ 79,900 ಆಗಿದೆ. ಆದರೆ ಬ್ಯಾಂಕ್ ಮತ್ತು ಎಕ್ಸ್ಚೇಂಜ್ ಆಫರ್ಗಳೊಂದಿಗೆ ತುಂಬಾ ಕಡಿಮೆ ಬೆಲೆಗೆ ಇದೀಗ ಐಫೋನ್ 14 ಅನ್ನು ಖರೀದಿಸಬಹುದಾಗಿದೆ. ಐಫೋನ್ 14 ಖರೀದಿಸಲು ನೀವು HDFC ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಬಳಸಿದರೆ, ನಿಮಗೆ 5 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಅದರ ನಂತರ ಫೋನ್ ಬೆಲೆ 74,900 ರೂ. ಅದರ ನಂತರ ಎಕ್ಸ್ಚೇಂಜ್ ಆಫರ್ ಕೂಡ ಇದೆ, ಈ ಕಾರಣದಿಂದಾಗಿ ಫೋನ್ನ ಬೆಲೆ ಗಣನೀಯವಾಗಿ ಕಡಿಮೆಯಾಗಲಿದೆ.
ಐಫೋನ್ 14 ನಲ್ಲಿ 20,500 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಇದೆ. ನಿಮ್ಮ ಹಳೆಯ ಸ್ಮಾರ್ಟ್ಫೋನ್ ಅನ್ನು ನೀವು ಎಕ್ಸ್ಚೇಂಜ್ ಮಾಡಿಕೊಂಡರೆ ನೀವು ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ಫೋನ್ನ ಸ್ಥಿತಿ ಉತ್ತಮವಾಗಿದ್ದಾಗ ಮತ್ತು ಮಾಡೆಲ್ ಇತ್ತೀಚಿನದ್ದಾಗಿದ್ದರೆ ಮಾತ್ರ 20,500 ರೂಗಳ ಪೂರ್ಣ ಆಫ್ ಲಭ್ಯವಿರುತ್ತದೆ. ನೀವು ಸಂಪೂರ್ಣ ಆಫರ್ ಪಡೆದರೆ ಐಫೋನ್ನ ಬೆಲೆ 54,400 ರೂ. ಆಗಲಿದೆ.
ಇದನ್ನೂ ಓದಿ : Xiaomi ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ ಸ್ಟೈಲಿಶ್ ವಿನ್ಯಾಸದ Waterproof Smartphone
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.