Maruti Suzuki Jimny Price List : ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಬಹು ನಿರೀಕ್ಷಿತ ಆಫ್-ರೋಡರ್ ಜಿಮ್ನಿಯನ್ನು ಬಿಡುಗಡೆ ಮಾಡಿದೆ. ಅದರ ಆರಂಭಿಕ ಬೆಲೆಯನ್ನು 12.74 ಲಕ್ಷ ಎಂದು ನಿಗದಿ ಮಾಡಿದೆ. ಮಹೀಂದ್ರ ಥಾರ್ ಗೆ ಹೋಲಿಸಿದರೆ ಈ ದರ ಅಧಿಕವಾಗಿದೆ. ವಾಸ್ತವವಾಗಿ, ಮಹೀಂದ್ರಾ ಸ್ವಲ್ಪ ಸಮಯದ ಹಿಂದೆ ಥಾರ್‌ನ RWD ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಇದು ಅದರ ಆರಂಭಿಕ ಬೆಲೆಯನ್ನು ಕಡಿಮೆ ಮಾಡಲು ಸಹಾಯ ಮಾಡಿತು. ಜಿಮ್ನಿಯನ್ನು ನೆಕ್ಸಾ ಶೋರೂಮ್‌ಗಳಿಂದ ಮಾರಾಟ ಮಾಡಲಾಗುತ್ತಿದೆ ಮತ್ತು ಇಂದಿನಿಂದಲೇ ಈ ಕಾರು ವಿತರಣೆಗೆ ಲಭ್ಯವಿದೆ.
ಮಾರುತಿ ಜಿಮ್ನಿ ಬೆಲೆಗಳು :
-Zeta MT ವೇರಿಯಂಟ್ ಬೆಲೆ 1,274,000 ರೂ. ( ಎಕ್ಸ್ ಶೋ ರೂಂ)
-Zeta AT ವೇರಿಯಂಟ್ ಬೆಲೆ 1,394,000 ರೂ . ( ಎಕ್ಸ್ ಶೋ ರೂಂ)
-ಆಲ್ಫಾ MT ವೇರಿಯಂಟ್ ಬೆಲೆ 1,369,000 ರೂ. (ಎಕ್ಸ್ ಶೋ ರೂಂ )
- ಆಲ್ಫಾ ವೇರಿಯಂಟ್ 1,489,000 ರೂ. (ಎಕ್ಸ್ ಶೋ ರೂಂ)
-ಆಲ್ಫಾ ಎಂಟಿ (ಡ್ಯುಯಲ್ ಟೋನ್) ವೇರಿಯಂಟ್ ಬೆಲೆ 1,385,000 ರೂ. (ಎಕ್ಸ್ ಶೋ ರೂಂ)
--ಆಲ್ಫಾ ಎಟಿ (ಡ್ಯುಯಲ್ ಟೋನ್) ವೇರಿಯಂಟ್ ಬೆಲೆ 1,505,000 ರೂ. (ಎಕ್ಸ್ ಶೋ ರೂಂ)
ಇದನ್ನೂ ಓದಿ : Google Fact: ಗೂಗಲ್ ಕುರಿತಾದ ಈ ಸಂಗತಿಗಳು ನಿಮಗೆಷ್ಟು ಗೊತ್ತು?
ಮಾರುತಿ ಜಿಮ್ನಿ ವೈಶಿಷ್ಟ್ಯ :
ಇದು ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (9 ಇಂಚು), ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಲೆದರ್ ರ್ಯಾಪ್ದ್ ಸ್ಟೇರಿಂಗ್ ವೀಲ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು 5 ಮೊನೊಟೋನ್ ಮತ್ತು 2 ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಗ್ರಾನೈಟ್ ಗ್ರೇ, ನೆಕ್ಸಾ ಬ್ಲೂ, ಬ್ಲೂಶ್ ಬ್ಲ್ಯಾಕ್, ಪರ್ಲ್ ಆರ್ಕ್ಟಿಕ್ ವೈಟ್, ಸಿಜ್ಲಿಂಗ್ ರೆಡ್, ಕೈನೆಟಿಕ್ ಯೆಲ್ಲೋ ಜೊತೆಗೆ ಬ್ಲ್ಯಾಕ್ ರೂಫ್ ಮತ್ತು ಸಿಜ್ಲಿಂಗ್ ರೆಡ್ ಜೊತೆಗೆ ಬ್ಲ್ಯಾಕ್ ರೂಫ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.
ಲ್ಯಾಡರ್ ಫ್ರೇಮ್ ಚಾಸಿಸ್ ಮೇಲೆ ನಿರ್ಮಿಸಲಾದ ಜಿಮ್ನಿ 1.5-ಲೀಟರ್ K15B ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು 103bhp ಮತ್ತು 134Nm ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ. . ಇದನ್ನು ಫೈವ್ ಸ್ಪೀಡ್ ಮ್ಯಾನ್ಯುವಲ್ ಮತ್ತು ಫೋರ್ ಸ್ಪೀಡ್ ಟಾರ್ಕ್ ಕನ್ವರ್ಟರ್ ಟ್ರಾಸ್ಮಿಶನ್ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು AllGrip Pro 4x4 ಸಿಸ್ಟಮ್‌ನೊಂದಿಗೆ ಬರುತ್ತದೆ. 5 ಡೋರ್ ಜಿಮ್ನಿಯನ್ನು ಭಾರತದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಜಿಮ್ನಿಯ ತ್ರೀ ಡೋರ್ ಆವೃತ್ತಿ ಮಾತ್ರ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿದೆ. 5 ಡೋರ್ ಜಿಮ್ನಿ ಲಭ್ಯವಾದ ಮೊದಲ ದೇಶ ಭಾರತ.
ಇದನ್ನೂ ಓದಿ : WiFi Router: ನಿಮ್ಮ ಮನೆಯಲ್ಲಿಯೂ ರಾತ್ರಿ ಇಡೀ ವೈಫೈ ರೌಟರ್ ಆನ್ ಇರುತ್ತಾ? ಇಂದೇ ಎಚ್ಚೆತ್ತುಕೊಳ್ಳಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.