ನವದೆಹಲಿ: NASA, GJ 1132 b - ಲಾವಾದಿಂದ ತುಂಬಿದ ಏಲಿಯನ್ ಗ್ರಹವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅಷ್ಟೇ ಅಲ್ಲ ಈ ಏಲಿಯನ್ ಗ್ರಹವು ಈ ಸಮಯದಲ್ಲಿ ತನ್ನದೇ ಆದ ವಾಯುಮಂಡಲ ಸೃಷ್ಟಿಸುತ್ತಿದೆ. ಲಕ್ಷಾಂತರ ವರ್ಷಗಳ ಹಿಂದೆ, ಭೂಮಿ ಕೂಡ ಇದೆ ರೀತಿ ಮಾಡಿತ್ತು ಎಂದು ವಿಜ್ಞಾನಿಗಳು ಹೇಳುತ್ತಾರೆ. ಹಬಲ್ ಟೆಲಿಸ್ಕೋಪ್ ಈ ಗ್ರಹವನ್ನು ಕಂಡುಹಿಡಿಯಲಾಗಿದೆ. ಈ ಏಲಿಯನ್ ಗ್ರಹವನ್ನು ಬೇಹುಗಾರಿಕೆಯ ಮೂಲಕ ಪತ್ತೆಹಚ್ಚಲಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಗ್ರಹ ತನ್ನ ವಾಯುಮಂಡಲ ಕಳೆದುಕೊಂಡ ಬಳಿಕ ತನ್ನಷ್ಟಕ್ಕೆ ತಾನೇ ಅದನ್ನು ಪುನರ್ನಿರ್ಮಿಸುತಿದೆ ಎಂದು ಅವರು ಹೇಳಿದ್ದಾರೆ.
This strange lava-rich alien planet is making itself a new atmosphere https://t.co/iVtU3LdJPt pic.twitter.com/MJriY2cApB
— Live Science (@LiveScience) March 15, 2021
ದೊರೆತ ಹೊಸ ವಾಯುಮಂಡಲ ರಚನೆಯ ಸಂಕೇತ (Science News In Kannada)
ಹಬಲ್ ಬಾಹ್ಯಾಕಾಶ ದೂರದರ್ಶಕದ ಪ್ರಕಾರ, ಈ ಗ್ರಹವನ್ನು ಮೊದಲ ಬಾರಿಗೆ 2017 ರಲ್ಲಿ ಗಮನಿಸಲಾಗಿದೆ. ಈ ಗ್ರಹದ ಹೆಸರು ಜಿಜೆ 1132 ಬಿ. ಇದು ಭೂಮಿಯಿಂದ 41 ಬೆಳಕಿನ ವರ್ಷಗಳ ದೂರದಲ್ಲಿರುವ ಸಣ್ಣ ನಕ್ಷತ್ರದ ಸುತ್ತ ಸುತ್ತುತ್ತದೆ. ಇದರ ತಿರುಗುವಿಕೆಯು ಭೂಮಿಯ 1.5 ದಿನಗಳಿಗೆ ಸಮನಾಗಿರುತ್ತದೆ. ಅದರ ನಕ್ಷತ್ರವನ್ನು ಸುತ್ತುತ್ತಿರುವಾಗ, ಇದು ಬಾಹ್ಯಾಕಾಶದಲ್ಲಿ ಇರುವ ಅನೇಕ ರೀತಿಯ ವಿಕಿರಣಗಳನ್ನು ಸಹ ಹೀರಿಕೊಳ್ಳುತ್ತದೆ. ಇದೆ ಕಾರಣದಿಂದ ವಿಜ್ಞಾನಿಗಳು ಈ ಗ್ರಹ ವಾಯುಮಂಡಲ ಸೃಷ್ಟಿಯ ಸಂಕೇತಗಳನ್ನು ನೀಡುತ್ತಿದೆ ಎನ್ನುತ್ತಿದ್ದಾರೆ ಮತ್ತು ಗ್ರಹ ಸಂರಚನೆಯ ದೀರ್ಘಾವಧಿ ಬಳಿಕ ನಡೆಯುತ್ತಿದೆ.
ಇದನ್ನೂ ಓದಿ-ಎಚ್ಚರ! March 21ರಂದು ಭೂಮಿಯ ಸನೀಹದಿಂದ ಹಾದುಹೋಗಲಿದೆ ಇದುವರೆಗಿನ ಅತ್ಯಂತ ದೊಡ್ಡ ಉಲ್ಕಾಶಿಲೆ: NASA
ಆಶ್ಚರ್ಯಕ್ಕೆ ಒಳಗಾದ ವಿಜ್ಞಾನಿಗಳು
ಕ್ಯಾಲಿಫೋರ್ನಿಯಾದ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಎಕ್ಸೋಪ್ಲಾನೆಟ್ ವಿಜ್ಞಾನಿ ರೈಸಾ ಎಸ್ಟ್ರೆಲ್ಲಾ ಹೇಳುವ ಪ್ರಕಾರ, "ಇದು ತುಂಬಾ ರೋಮಾಂಚನಕ ಘಟನೆಯಾಗಿದೆ , ಏಕೆಂದರೆ ಇದು ತನ್ನ ವಾಯುಮಂಡಲವನ್ನು ಪುನಃ ಸೃಷ್ಟಿಸುತ್ತಿದೆ ಎಂಬುದನ್ನು ನಾವು ಊಹಿಸಬಹುದು" ಎನ್ನುತ್ತಾರೆ. ಆದ್ದರಿಂದ, ಇದು ಈ ಗ್ರಹದ ಎರಡನೇ ವಾಯುಮಂಡಲವಾಗಿರುವ ಸಾಧ್ಯತೆ ಇದೆ. ಈ ಹೆಚ್ಚಿನ ವಿಕಿರಣ ಗ್ರಹವು ತನ್ನ ವಾತಾವರಣವನ್ನು ಕಳೆದುಕೊಂಡಿರುವುದರಿಂದ ಬಹಳ ನೀರಸವಾಗಲಿದೆ ಎಂದು ನಾವು ಈ ಹಿಂದೆ ಭಾವಿಸಿದ್ದೇವೆ ಎಂದು ಎಸ್ಟ್ರೆಲ್ಲಾ ಹೇಳುತ್ತಾರೆ. ಹಬಲ್ ಟೆಲಿಸ್ಕೋಪ್ನೊಂದಿಗೆ ಅದರ ಪ್ರಸ್ತುತ ನೋಟವನ್ನು ನೋಡಿದಾಗ, ನಮಗೆ ಆಶ್ಚರ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Parker Solar Probe : ಶುಕ್ರ ಗ್ರಹದ ಬಹು ಅಪರೂಪದ ಫೋಟೋ ಕ್ಲಿಕ್ಕಿಸಿದ ನಾಸಾ..!
ಭೂಮಿಯ ವಾಯುಮಂಡಲ ಅದರ ಆಯಸ್ಕಾಂತೀಯ ಗುಣದ ಕಾರಣ ಉಳಿದುಕೊಂಡಿದೆ. ಆದರೆ, ಬೇರೆ ಗ್ರಹಗಳಲ್ಲಿ ಇದೆ ರೀತಿ ಇರಲಿದೆ ಎಂಬುದನ್ನು ಊಹಿಸುವುದು ಸರಿಯಲ್ಲ. ಮಂಗಳ ಗ್ರಹದ ಮೇಲೂ ಕೂಡ ದಟ್ಟವಾದ ವಾಯುಮಂಡಲವಿತ್ತು. ಆದರೆ, ಮಂಗಳ ಗ್ರಹ 400 ವರ್ಷಗಳ ಬಳಿಕ ತನ್ನ ಮ್ಯಾಗ್ನೆಟಿಕ್ ಫೀಲ್ಡ್ ತೋರೆದಿದೆ. ಆ ನಂತರ ಅದರ ವಾಯುಮಂಡಲ ಕೂಡ ಮಾಯವಾಗಿದೆ.
ಇದನ್ನೂ ಓದಿ-ಹೊಸ ಆಕಾಶಗಂಗೆಯನ್ನು ಪತ್ತೆಹಚ್ಚಿದ ಭಾರತೀಯ ವಿಜ್ಞಾನಿಗಳು, ಭೇಷ್ ಎಂದ NASA
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.