ಮಳೆಗಾಲದಲ್ಲಿ ನಿಮ್ಮ ಈ ತಪ್ಪುಗಳು ಗೀಸರ್ ಸ್ಫೋಟಕ್ಕೆ ಕಾರಣವಾಗಬಹುದು, ಎಚ್ಚರ!

Geyser Blast: ಮಳೆಗಾಲದಲ್ಲಿ ಗೀಸರ್ ಅವಶ್ಯಕತೆ ಇದೆಯಾದರೂ ನೀವು ಈ ಋತುವಿನಲ್ಲಿ ಗೀಸರ್ ಬದಲಾವಣೆ ಮಾಡುವ ಚಿಂತನೆಯಲ್ಲಿದ್ದರೆ ಇದು ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಮಾನ್ಸೂನ್‌ನಲ್ಲಿ ನೀವು ಮಾಡುವ ಒಂದು ಸಣ್ಣ ತಪ್ಪು ಸ್ಫೋಟಕ್ಕೆ ಕಾರಣವಾಗಬಹುದು. 

Written by - Yashaswini V | Last Updated : Jul 26, 2024, 01:19 PM IST
  • ಮಳೆಗಾಲದಲ್ಲಿ ಆರ್ದ್ರತೆ ಹೆಚ್ಚಾಗುತ್ತದೆ.
  • ಹೀಗಾಗಿ, ಶಾರ್ಟ್ ಸರ್ಕ್ಯೂಟ್ ಅಪಾಯ ಹೆಚ್ಚಾಗುತ್ತದೆ.
  • ಗೀಸರ್‌ನ ವೈರಿಂಗ್ ಅಥವಾ ಸಂಪರ್ಕಗಳಲ್ಲಿ ಯಾವುದೇ ದೋಷವಿದ್ದರೆ ಇದು ಗೀಸರ್ ಸ್ಫೋಟಕ್ಕೆ ಕಾರಣವಾಗಬಹುದು.
ಮಳೆಗಾಲದಲ್ಲಿ ನಿಮ್ಮ ಈ ತಪ್ಪುಗಳು ಗೀಸರ್  ಸ್ಫೋಟಕ್ಕೆ ಕಾರಣವಾಗಬಹುದು, ಎಚ್ಚರ!  title=

Geyser Blast Reason: ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಈ ಬಾರಿ ಮಾನ್ಸೂನ್ ಅಬ್ಬರ ಹೆಚ್ಚಾಗಿದೆ. ಮಾನ್ಸೂನ್‌ನಲ್ಲಿ ತಣ್ಣೀರಿನ ಬಳಕೆ ಕಠಿಣವೆನಿಸಬಹುದು. ಇದರಿಂದ ಪರಿಹಾರಕ್ಕಾಗಿ ಅಣರು ಗೀಸರ್ ಬಳಸುತ್ತಾರ್. ಆದರೆ, ಮಳೆಗಾಲದಲ್ಲಿ ಗೀಸರ್ ವಿಷಯದಲ್ಲಿ ನಿಮ್ಮ ಸಣ್ಣ ನಿರ್ಲಕ್ಷ್ಯವೂ ಕೂಡ ಭಾರೀ ನಷ್ಟಕ್ಕೆ ಕಾರಣವಾಗಬಹುದು. 

ಹೌದು, ಮಳೆಗಾಲದಲ್ಲಿ ಗೀಸರ್ (Geyser In Monsoon) ಬಳಕೆಯಲ್ಲಿ ನೀವು ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ವಿಷಯದಲ್ಲಿ ಸಣ್ಣ ತಪ್ಪು ಕೂಡ ನಿಮಗೆ  ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಹಾಗಿದ್ದರೆ ಮಳೆಗಾಲದಲ್ಲಿ ಗೀಸರ್ ಹಾನಿಗೊಳಗಾಗಲು ಅಥವಾ ಸ್ಫೋಟಗೊಳ್ಳಲು ಕಾರಣಗಳೇನು. ಈ ಸಮಯದಲ್ಲಿ ಯಾವ ರೀತಿ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ. 

ಶಾರ್ಟ್ ಸರ್ಕ್ಯೂಟ್: 
ಮಳೆಗಾಲದಲ್ಲಿ (Rainy Season) ಆರ್ದ್ರತೆ ಹೆಚ್ಚಾಗುತ್ತದೆ. ಹೀಗಾಗಿ, ಶಾರ್ಟ್ ಸರ್ಕ್ಯೂಟ್ ಅಪಾಯ ಹೆಚ್ಚಾಗುತ್ತದೆ. ಗೀಸರ್‌ನ ವೈರಿಂಗ್ ಅಥವಾ ಸಂಪರ್ಕಗಳಲ್ಲಿ ಯಾವುದೇ ದೋಷವಿದ್ದರೆ, ತೇವಾಂಶದಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಬಹುದು. ಈ ಸಮಯದಲ್ಲಿ ಗೀಸರ್ ಬಾಂಬ್‌ನಂತೆ ಸ್ಫೋಟಗೊಳ್ಳುವ ಅಪಾಯವೂ ಹೆಚ್ಚಿರುತ್ತದೆ. 

ಇದನ್ನೂ ಓದಿ- ಜಿಯೋ, ಏರ್ ಟೆಲ್ ಬಿಟ್ಟು BSNLಗೆ ಪೋರ್ಟ್ ಆಗುತ್ತೀರಾ? ನಿಮ್ಮ ಸುತ್ತ ಮುತ್ತ ಬಿಎಸ್ಎನ್ಎಲ್ ಟವರ್ ಇದೆಯಾ ಹೀಗೆ ಚೆಕ್ ಮಾಡಿಕೊಳ್ಳಿ !

ತುಕ್ಕು ಹಿಡಿಯುವುದು: 
ಮಳೆಗಾಲದಲ್ಲಿ ತೇವಾಂಶದಿಂದಾಗಿ ಗೀಸರ್‌ನ (Geyser) ಲೋಹದ ಭಾಗಗಳು ತುಕ್ಕು ಹಿಡಿಯಬಹುದು ಸರ್ವೇ ಸಾಮಾನ್ಯ. ಆದರೆ, ಇದು ಗೀಸರ್‌ನ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ, ಅದರ ಕಾರ್ಯ ಸಾಮರ್ಥ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ. 

ಈ ಮೇಲೆ ಉಲ್ಲೇಖಿಸಲಾದ ಕಾರಣಗಳು ನಿಮ್ಮ ಗೀಸರ್ ಸ್ಫೋಟಗೊಳ್ಳಲು (Geyser Blast) ಕಾರಣವಾಗಬಹುದು. ಇದಲ್ಲದೆ ಮಾನ್ಸೂನ್‌ನಲ್ಲಿ ತಾಪಮಾನವು ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಗೀಸರ್ ಬಿಸಿ ನೀರನ್ನು ಉತ್ಪಾದಿಸಲು ಹೆಚ್ಚಿನ ವಿದ್ಯುತ್ ಬಳಸಬಹುದು. ಇದು ನಿಮ್ಮ ವಿದ್ಯುತ್ ಬಿಲ್ ಹೆಚ್ಚಾಗಲುಪ್ರಮುಖ ಕಾರಣವಾಗಬಹುದು. 

ಇದನ್ನೂ ಓದಿ- ಒಂದು ಲೋಟ ಬಿಸಿ ನೀರಿನಿಂದ ಕಾರಿನ ಡೆಂಟ್ ತೆಗೆಯಬಹುದು ! ಮೆಕ್ಯಾನಿಕ್ ಕರೆಯುವ ಅಗತ್ಯವೇ ಇಲ್ಲ

ಗೀಸರ್  ಸ್ಫೋಟಗೊಳ್ಳುವುದನ್ನು ತಪ್ಪಿಸಲು ಈ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ: 
ವೈರಿಂಗ್ ದೋಷ: 

ನಿಮ್ಮ ಮನೆಯಲ್ಲಿ ವೈರಿಂಗ್ ದೋಷವಿದ್ದರೆ  ಮೊದಲು ಅದನ್ನು ಸರಿಪಡಿಸಿ. ಇದರೊಂದಿಗೆ ಗೀಸರ್‌ನ ವೈರಿಂಗ್ ಸರಿಯಾಗಿದೆಯೇ ಮತ್ತು ಅದರಲ್ಲಿ ಏನಾದರೂ ದೋಷವಿದೆಯೇ ಎಂಬುದನ್ನೂ ಪರಿಶೀಲಿಸಿ ಸರಿಪಡಿಸಿ. 

ಸ್ವಚ್ಛತೆ: 
ಮನೆಯಲ್ಲಿ ಇತರ ಸಾಧನಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವಂತೆಯೇ ಗೀಸರ್ ಅನ್ನು ಸಹ ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಿ. ಇದರಿಂದ ಗೀಸರ್ ತುಕ್ಕು ಹಿಡಿಯುವುದನ್ನು ತಪ್ಪಿಸಬಹುದು. 

ಗುಣಮಟ್ಟದ ಗೀಸರ್: 
ಯಾವಾಗಲೂ ತುಕ್ಕು ಮತ್ತು ತೇವಾಂಶಕ್ಕೆ ಹೆಚ್ಚು ನಿರೋಧಕವಾಗಿರುವ ಉತ್ತಮ ಗುಣಮಟ್ಟದ ಗೀಸರ್ ಅನ್ನು ಮಾತ್ರವೇ ಖರೀದಿಸಲು ಪ್ರಯತ್ನಿಸಿ.

ಓವರ್‌ಲೋಡ್: 
ಗೀಸರ್ ಓವರ್‌ಲೋಡ್ ಆಗದಂತೆ ನಿಗಾವಹಿಸಿ. ಗೀಸರ್ ಅನ್ನು ಸದಾ ಆನ್ ಮಾಡಿ ಇಡುವ ಬದಲಿಗೆ ನಿಮಗೆ ಅಗತ್ಯವಿದ್ದಾಗ ಮಾತ್ರವೇ ಗೀಸರ್ ಆನ್ ಮಾಡಿ ಬಳಸಿ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News