ಬೆಂಗಳೂರು : ಗರಿಷ್ಠ ಬಳಕೆದಾರರನ್ನು ಹೊಂದುವಲ್ಲಿ ಮತ್ತು 5G ರೇಸ್ ನಲ್ಲಿ Vodafone Idea ನಿರಂತರವಾಗಿ ಹಿಂದುಳಿದಿದೆ. ಆದರೂ ವಿಐ ಬಳಕೆದಾರರಿಗೆ ಹೊಸದನ್ನು ನೀಡಲು ಪ್ರಯತ್ನಿಸುತ್ತಿದೆ. ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ, ಬಳಕೆದಾರರನ್ನು ತನ್ನತ್ತ ಸೆಳೆಯಲು ಮತ್ತು ಬಳಕೆದಾರರನ್ನು ಉಳಿಸಿಕೊಳ್ಳಲು ಸತತ ಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. 24 ರೂಪಾಯಿ ಮತ್ತು 49 ರೂಪಾಯಿ ಬೆಲೆಯ ಪ್ಲಾನ್ಗಳನ್ನು ಕಂಪನಿ ಪರಿಚಯಿಸಿದೆ.
ಕಡಿಮೆ ಡೇಟಾ ಅಗತ್ಯವಿರುವ ಬಳಕೆದಾರರಿಗಾಗಿ ಈ ಯೋಜನೆ ಬಹಳ ಪ್ರಯೋಜನಕಾರಿಯಾಗಿದೆ. ಅಥವಾ ಯಾರ ದೈನಂದಿನ ಡೇಟಾ ಮುಗಿದಿದ್ದು, ಇನ್ನು ಕೆಲವು ಗಂಟೆಗಳವರೆಗೆ ಇಂಟರ್ ನೆಟ್ ಪ್ಯಾಕ್ ಅಗತ್ಯವಿದೆಯೋ ಅವರಿಗೆ ಈ ಪ್ಲಾನ್ ಹೆಚ್ಚು ಸಹಕಾರಿಯಾಗಲಿದೆ.
ಇದನ್ನೂ ಓದಿ : 5 ಲಕ್ಷಕ್ಕಿಂತ ಕಡಿಮೆ ಬೆಲೆಯ ಬೆಸ್ಟ್ ಕಾರುಗಳಿವು ! ಸೆವೆನ್ ಸೀಟರ್ ಕೂಡಾ ಈ ಲಿಸ್ಟ್ ನಲ್ಲಿದೆ
Vi ಸೂಪರ್ ಅವರ್ ಯೋಜನೆಯ ವಿವರಗಳು :
ಈ ಪ್ಲಾನ್ ಬೆಲೆ ಕೇವಲ 24 ರೂಪಾಯಿ. ಈ ಪ್ಲಾನ್ ಪ್ರಕಾರ ಒಂದು ಗಂಟೆಯವರೆಗೆ ಅನಿಯಮಿತ ಇಂಟರ್ನೆಟ್ ಅಕ್ಸೆಸ್ ನೀಡುತ್ತದೆ. Vi ಬಳಕೆದಾರರು ಈ ಯೋಜನೆಯನ್ನು ರೀಚಾರ್ಜ್ ಮಾಡಿದಾಗ, ಅವರು ಒಂದು ಗಂಟೆಯವರೆಗೆ ಅನಿಯಮಿತ 4G ಡೇಟಾವನ್ನು ಆನಂದಿಸಬಹುದು. ಒಂದು ಗಂಟೆಯ ನಂತರ, ಸಕ್ರಿಯ ರೀಚಾರ್ಜ್ ಯೋಜನೆಗಳನ್ನು ಅವಲಂಬಿಸಿ ಇಂಟರ್ನೆಟ್ ವೇಗವನ್ನು ಕಡಿಮೆಗೊಳಿಸಲಾಗುತ್ತದೆ.
Vi Super Day ಯೋಜನೆಯ ವಿವರಗಳು :
ಈ ಯೋಜನೆಯ ಹೆಸರು '24 ಗಂಟೆಗಳ ಡೇಟಾ ಪ್ಯಾಕ್' ಮತ್ತು ಇದು 24 ಗಂಟೆಗಳ ಮಾನ್ಯತೆಯನ್ನು ಹೊಂದಿರುತ್ತದೆ. ಈ ಪ್ಲಾನ್ ನಲ್ಲಿ 49 ರೂಪಾಯಿಗೆ 6GB ಹೈಸ್ಪೀಡ್ 4G ಇಂಟರ್ನೆಟ್ ಡೇಟಾ ಸಿಗುತ್ತದೆ. ಇದರೊಂದಿಗೆ, ಈ ಯೋಜನೆಯು 1 ದಿನಕ್ಕೆ ಡೇಟಾ ಟಾಪ್ ಅಪ್ ಆಯ್ಕೆಯನ್ನು ಸಹ ಒದಗಿಸುತ್ತದೆ. ಇದರಿಂದಾಗಿ ಬಳಕೆದಾರರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಇಂಟರ್ನೆಟ್ ಡೇಟಾವನ್ನು ಬಳಸಬಹುದು.
ಇದನ್ನೂ ಓದಿ : ನಯಾ ಪೈಸೆ ಖರ್ಚಿಲ್ಲ ! ಮಳೆಗಾಲದಲ್ಲಿ ಕಾರಿನೊಳಗಿನಿಂದ ಬರುವ ದುರ್ವಾಸನೆ ತಡೆಯಲು ಇಷ್ಟು ಮಾಡಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.