YouTube Hacks: ಯೂಟ್ಯೂಬ್ ನೋಡೋವಾಗ ಜಾಹೀರಾತು ಬಾರದಂತೆ ತಡೆಯೋದು ಹೇಗೆ? ಇಲ್ಲಿದೆ ಸುಲಭ ಟ್ರಿಕ್

Ad Free YouTube: ಯೂಟ್ಯೂಬ್ ನೋಡುವಾಗ ಜಾಹೀರಾತು ಅಡೆತಡೆ ಮಾಡುವುದು ಸಾಮಾನ್ಯ. ಜಾಹೀರಾತು ಎಂಬುದು ಆದಾಯದ ಮೂಲ. ಆದರೆ ಅತಿಯಾದ ಜಾಹೀರಾತಿನಿಂದ ಯೂಟ್ಯೂಬ್ ನೋಡುವುದೇ ಬೇಡ ಎಂದು ಅನಿಸುವುದುಂಟು. ಇಂತಹ ಸಂಕಷ್ಟಕ್ಕೆ ಮುಕ್ತಿ ನೀಡಲು ಇಲ್ಲಿ ಕೆಲವೊಂದು ಟ್ರಿಕ್ಸ್ ನೀಡಲಾಗಿದೆ.

Written by - Bhavishya Shetty | Last Updated : Oct 29, 2022, 10:16 AM IST
    • ಯೂಟ್ಯೂಬ್ ನೋಡುವಾಗ ಜಾಹೀರಾತು ಅಡೆತಡೆ ಮಾಡುವುದು ಸಾಮಾನ್ಯ
    • ಜಾಹೀರಾತು ಎಂಬುದು ಆದಾಯದ ಮೂಲ
    • ಈ ಟ್ರಿಕ್ ಗಳು ಯೂಟ್ಯೂಬ್ ನಲ್ಲಿ ಬರುವ ಜಾಹೀರಾತುಗಳನ್ನು ನಿಯಂತ್ರಿಸುತ್ತದೆ
YouTube Hacks: ಯೂಟ್ಯೂಬ್ ನೋಡೋವಾಗ ಜಾಹೀರಾತು ಬಾರದಂತೆ ತಡೆಯೋದು ಹೇಗೆ? ಇಲ್ಲಿದೆ ಸುಲಭ ಟ್ರಿಕ್ title=
Youtube

Ad Free YouTube: ಈಗ ಪ್ರತಿಯೊಬ್ಬ ವ್ಯಕ್ತಿಯೂ ಯೂಟ್ಯೂಬ್ ಬಳಕೆಯನ್ನು ಮಾಡುತ್ತಾರೆ. ಅಷ್ಟೇ ಅಲ್ಲದೆ ಇದರ ಮೂಲಕ ಹಲವಾರು ವಿಚಾರಗಳನ್ನು ಅರಿತುಕೊಂಡಿರುತ್ತಾರೆ. ಅನೇಕರು ಟಿವಿಯ ಬದಲಾಗಿ ಯೂಟ್ಯೂಬ್ ಗೆ ಹೆಚ್ಚು ಒತ್ತು ನೀಡುತ್ತಾರೆ ಎಂದರೆ ತಪ್ಪಾಗಲಾರದು. ಇದರಲ್ಲಿ ಸಿಗುವ ಅನೇಕ ತೆರನಾದ ವಿಡಿಯೋಗಳು ಜನರನ್ನು ಇನ್ನಷ್ಟು ಗಮನ ಸಳೆಯುತ್ತದೆ.

ಆದರೆ ಯೂಟ್ಯೂಬ್ ನೋಡುವಾಗ ಜಾಹೀರಾತು ಅಡೆತಡೆ ಮಾಡುವುದು ಸಾಮಾನ್ಯ. ಜಾಹೀರಾತು ಎಂಬುದು ಆದಾಯದ ಮೂಲ. ಆದರೆ ಅತಿಯಾದ ಜಾಹೀರಾತಿನಿಂದ ಯೂಟ್ಯೂಬ್ ನೋಡುವುದೇ ಬೇಡ ಎಂದು ಅನಿಸುವುದುಂಟು. ಇಂತಹ ಸಂಕಷ್ಟಕ್ಕೆ ಮುಕ್ತಿ ನೀಡಲು ಇಲ್ಲಿ ಕೆಲವೊಂದು ಟ್ರಿಕ್ಸ್ ನೀಡಲಾಗಿದೆ. ಈ ಟ್ರಿಕ್ ಗಳು ಯೂಟ್ಯೂಬ್ ನಲ್ಲಿ ಬರುವ ಜಾಹೀರಾತುಗಳನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ: Jio Offer: 100% ವ್ಯಾಲ್ಯೂ ಬ್ಯಾಕ್ ಜೊತೆಗೆ ಉಚಿತ ಸೇವೆ ಮತ್ತು 6500 ರೂ.ಗಳವರೆಗೆ ಲಾಭ

ಆ್ಯಡ್ ಬ್ಲಾಕರ್: ಬ್ರೌಸರ್‌ನಲ್ಲಿ ಯೂಟ್ಯೂಬ್‌ ವಿಡಿಯೋಗಳನ್ನು ವೀಕ್ಷಿಸುತ್ತೀರಿ ಎಂದಾದರೆ ಆ್ಯಡ್ ಬ್ಲಾಕರ್‌ಗಳನ್ನು ಉಪಯೋಗಿಸಿ. ಇದು ನಿಮಗೆ ಆ್ಯಡ್‌ಫ್ರೀ ಯೂಟ್ಯೂಬ್‌ ವೀಕ್ಷಣೆ ಸಿಗುವಂತೆ ಮಾಡುತ್ತದೆ. ಆ್ಯಡ್ ಬ್ಲಾಕ್‌, ಸ್ಟಾಪ್‌ ಆ್ಯಡ್ ಗಳಂತಹ ಅನೇಕ ಬ್ಲಾಕರ್‌ಗಳು ಬ್ರೌಸರ್‌ ಎಕ್ಸಟೆನ್ಷನ್‌ ಆಗಿ ದೊರೆಯುತ್ತವೆ. ಇದನ್ನು ಇನ್‌ಸ್ಟಾಲ್‌ ಮಾಡಿಕೊಂಡು ಜಾಹೀರಾತು ಫ್ರೀ ಯೂಟ್ಯೂಬ್‌ ವಿಡಿಯೋ ನೋಡಬಹುದು.  ಒಂದು ವೇಳೆ ಆ್ಯಡ್ ಬ್ಲಾಕರ್‌ ಬಳಸಲು ಆಗಿಲ್ಲವೆಂದರೆ, ಯೂಟ್ಯೂಬ್‌ ವಿಡಿಯೋದ URL ಮತ್ತು ಪದಗಳ ಮೂಲಕ AdlessTube, ViewPure ಮತ್ತು Voilaದಂತಹ ಸರ್ಚ್‌ ಇಂಜಿನ್‌ಗಳಲ್ಲಿ ನೀವು ಜಾಹೀರಾತು ಮುಕ್ತ ಯೂಟ್ಯೂಬ್ ವಿಡಿಯೋ ನೋಡಬಹುದು.

ಪರ್ಯಾಯ ಆ್ಯಪ್: ಇನ್ನು ಯೂಟ್ಯೂಬ್ ನಂತೆಯೇ ಇರುವ ಅನೇಕ ಆ್ಯಪ್ ಗಳು ಇವೆ. ಅವುಗಳನ್ನು ಪರ್ಯಾಯವಾಗಿ ಬಳಸಬಹುದು. OGYoutube, DNS66, NewPipe, YT Vanced, Ad Clearನಂತಹ ಆ್ಯಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಅವುಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಿ.

ಇನ್ನೊಂದು ವಿಚಾರವೆಂದರೆ, ಒಂದು ಡಾಟ್ ಹಾಕುವುದರಿಂದಲೂ ಸಹ ಯೂಟ್ಯೂಬ್​ನಲ್ಲಿ ಬರುವ ಜಾಹೀರಾತುಗಳನ್ನು ಬ್ಲಾಕ್ ಮಾಡಬಹುದು. ಯೂಟ್ಯೂಬ್‌ ಲಿಂಕ್‌ನಲ್ಲಿ youtube.com ನಂತರದಲ್ಲಿ ಬರುವ ‘/’ ಚಿಹ್ನೆಗೂ ಮೊದಲು ಒಂದು ಚುಕ್ಕಿ (.) ಹಾಕಿ. ಬಳಿಕ ಪ್ಲೇ ಮಾಡಿ. ಆ ವಿಡಿಯೋದಲ್ಲಿ ಮುಂದೆ ಕಾಣಿಸಿಕೊಳ್ಳಬಹುದಾದ ಎಲ್ಲ ಜಾಹೀರಾತುಗಳನ್ನು ಬ್ಲಾಕ್‌ ಆಗುತ್ತದೆ. ಆದರೆ ಇದು ಕೇವಲ ಡೆಸ್ಕ್‌ಟಾಪ್‌ ಬ್ರೌಸರ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.

ಇದನ್ನೂ ಓದಿ: Free OTT: ಈ ಅಗ್ಗದ ರೀಚಾರ್ಜ್ ಯೋಜನೆಗಳಲ್ಲಿ ವರ್ಷವಿಡೀ ಫ್ರೀ ಆಗಿ ಸಿಗುತ್ತೆ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್

ಚಂದಾದಾರಿಕೆ: ಇನ್ನು ಜಾಹೀರಾತುಗಳಿಂದ ಬೇಸತ್ತು ಯಾವುದೇ ಬ್ಲಾಕರ್ ಕೂಡ ಬೇಡ ಎನ್ನುವವರು ಹಣ ತೆತ್ತು ಯೂಟ್ಯೂಬ್‌ ಪ್ರೀಮಿಯಂ ಖಾತೆಯ ಚಂದಾದಾರಿಕೆ ಪಡೆದುಕೊಳ್ಳಬಹುದು. ಹೀಗೆ ಮಾಡಿದಲ್ಲಿ ಅನೇಕ ಸವಲತ್ತುಗಳು ಕೂಡ ಯೂಟ್ಯೂಬ್‌ ಪ್ರೀಮಿಯಂನಲ್ಲಿ ಸಿಗಲಿವೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News