Worlds First AI Dress: 'ವಿಶ್ವದ ಮೊದಲ AI ಡ್ರೆಸ್' ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಉಡುಗೆಯನ್ನು ಮಹಿಳೆಯೊಬ್ಬರು ತಯಾರಿಸಿದ್ದು, ಇವರು ಗೂಗಲ್ ಎಂಜಿನಿಯರ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಗೂಗಲ್ನ ಸಾಫ್ಟ್ವೇರ್ ಇಂಜಿನಿಯರ್ (Software Engineer at Google) ಆಗಿರುವ ಕೆಲಸ ನಿರ್ವಹಿಸುತ್ತಿರುವ ಕ್ರಿಸ್ಟಿನಾ ಅರ್ನ್ಸ್ಟ್ (Christina Ernst) ಎಂಬಾಕೆ ರೋಬೋಟಿಕ್ ಹಾವುಗಳನ್ನು ಒಳಗೊಂಡಿರುವಂತಹ "ವಿಶ್ವದ ಮೊದಲ AI ಉಡುಗೆ" ಅನ್ನು ತಯಾರಿಸಿದ್ದು, ಸದ್ಯ ಈ ಡ್ರೆಸ್ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಇದನ್ನೂ ಓದಿ- WhatsApp: ಗ್ರೂಪ್ ಚಾಟ್ಗಳಿಗಾಗಿ ಹೊಸ ಈವೆಂಟ್ ವೈಶಿಷ್ಟ್ಯವನ್ನು ಪರಿಚಯಿಸಿದ ವಾಟ್ಸಾಪ್
ಗೂಗಲ್ ಎಂಜಿನಿಯರ್ (Google Engineer) ತಯಾರಿಸಿರುವ 'ವಿಶ್ವದ ಮೊದಲ AI ಉಡುಗೆ' ಗೆ "ಮೆಡುಸಾ ಉಡುಗೆ" ಎಂದು ಹೆಸರಿಸಿದ್ದಾರೆ. ಮೆಡುಸಾ ಎಂದರೆ ಸಾಮಾನ್ಯವಾಗಿ ಶಿರದಲ್ಲಿ ಜೀವಂತ ಹಾವುಗಳನ್ನು ಹೊಂದಿರುವ ಮಹಿಳೆ ಎಂದು ಹೇಳಲಾಗುತ್ತದೆ. ಈ ಉಡುಗೆ ರೊಬೊಟಿಕ್ ಹಾವುಗಳನ್ನು ಒಳಗೊಂಡಿರುವುದರಿಂದ ಇದಕ್ಕೆ "ಮೆಡುಸಾ ಡ್ರೆಸ್" ಎಂದು ಹೆಸರಿಸಿರಬಹುದು ಎಂದು ಹೇಳಲಾಗುತ್ತಿದೆ.
Instagram ನಲ್ಲಿ, shebuildsrobots.org ಹೆಸರಿನ ವೆಬ್ಸೈಟ್ನ ಸಂಸ್ಥಾಪಕರೂ ಆಗಿರುವ ಕ್ರಿಸ್ಟಿನಾ ಅರ್ನ್ಸ್ಟ್ ಅವರು ತಮ್ಮ "ರೊಬೊಟಿಕ್ ಮೆಡುಸಾ ಉಡುಗೆ" ಯ ಒಂದು ಸಣ್ಣ ವೀಡಿಯೊವನ್ನು ಹಂಚಿಕೊಂಡಿದ್ದು, ಈ ವಿಡಿಯೋ ಇಲ್ಲಿಯವರೆಗೆ 3 ಮಿಲಿಯನ್ ಗೂ ಹೆಚ್ಚಿನ ವೀಕ್ಷಣೆ ಕಂಡಿದ್ದು ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ- 2029ರ ವೇಳೆಗೆ AI ಮನುಷ್ಯರಿಗಿಂತ ಸ್ಮಾರ್ಟ್ ಆಗಲಿದೆ : ಎಲೋನ್ ಮಸ್ಕ್
"ವಿಶ್ವದ ಮೊದಲ AI ಉಡುಗೆ" ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕ್ರಿಸ್ಟಿನಾ ಅರ್ನ್ಸ್ಟ್ ಅವರಿಗೆ ಭಾರೀ ಮನ್ನಣೆ ವ್ಯಕ್ತವಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.