Shocking video: 210 ಕೆಜಿ ಭಾರ ಎತ್ತುವಾಗ ಕುತ್ತಿಗೆ ಮುರಿದು ಫಿಟ್ನೆಸ್ ಟ್ರೈನರ್ ಸಾವು!

Bodybuilder Justyn Vicky dies: ಬಾಡಿಬಿಲ್ಡಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದ ವಿಕಿಗೆ ಬಾಲಿಯ ಪ್ಯಾರಡೈಸ್ ಜಿಮ್ ಗೌರವ ನಮನ ಸಲ್ಲಿಸಿದೆ. ‘ವಿಕಿ ಕೇವಲ ಒಬ್ಬ ಬಾಡಿಬಿಲ್ಡರ್ ಮಾತ್ರವಲ್ಲ, ಸ್ಪೂರ್ತಿಯ ಚಿಲುಮೆ’ ಎಂದು ಸಂತಾಪ ಸೂಚಿಸಿದೆ.

Written by - Puttaraj K Alur | Last Updated : Jul 23, 2023, 11:32 PM IST
  • ಜಿಮ್‍ನಲ್ಲಿ 210 ಕೆಜಿ ಭಾರ ಎತ್ತಲು ಹೋಗಿ ಕುತ್ತಿಗೆ ಮುರಿದು ಯುವ ಫಿಟ್‍ನೆಸ್ ಟ್ರೈನರ್ ಸಾವು
  • ಬಾಡಿಬಿಲ್ಡಿಂಗ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದ ಜಸ್ಟಿನ್ ವಿಕಿ (33) ಸಾವು
  • ಬಾರ್ಬೆಲ್ ಸಮತೋಲನ ತಪ್ಪಿ ಕುತ್ತಿಗೆ ಮೇಲೆ ಬಿದ್ದ ಪರಿಣಾಮ ಮೆದುಳಿನ ನರಗಳಿಗೂ ಹಾನಿ
Shocking video: 210 ಕೆಜಿ ಭಾರ ಎತ್ತುವಾಗ ಕುತ್ತಿಗೆ ಮುರಿದು ಫಿಟ್ನೆಸ್ ಟ್ರೈನರ್ ಸಾವು! title=
ಫಿಟ್ನೆಸ್ ಟ್ರೈನರ್ ಸಾವು

ನವದೆಹಲಿ: ಜಿಮ್‍ನಲ್ಲಿ 210 ಕೆಜಿ ಭಾರ ಎತ್ತಲು ಹೋಗಿ ಕುತ್ತಿಗೆ ಮುರಿದು ಯುವ ಫಿಟ್‍ನೆಸ್ ಟ್ರೈನರ್ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಬಾಡಿಬಿಲ್ಡಿಂಗ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದ ಜಸ್ಟಿನ್ ವಿಕಿ (33) ಸಾವನ್ನಪ್ಪಿರವು ಫಿಟ್‍ನೆಸ್ ಟ್ರೈನರ್.

ಜಿಮ್‍ನಲ್ಲಿ ಜಸ್ಟಿನ್ ವಿಕಿ ಭಾರ ಎತ್ತಲು ಪ್ರಯತ್ನಿಸುತ್ತಿದ್ದ ವೇಳೆ ಬಾರ್ಬೆಲ್ ಸಮತೋಲನ ತಪ್ಪಿ ಅವರ ಕುತ್ತಿಗೆ ಮೇಲೆ ಬಿದ್ದಿದೆ. ಪರಿಣಾಮ ಅವರು ಕುತ್ತಿಗೆ ಮುರಿದಿದೆ. ಅವರ ಮೆದುಳಿಗೆ ಸಂಪರ್ಕಿಸುವ ನರಗಳಿಗೂ ಹಾನಿಯುಂಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.  

ಇದನ್ನೂ ಓದಿ: Viral News: ಕುಡಿದ ಮತ್ತಿನಲ್ಲಿ ಚುಂಬಿಸಿದ ಪತಿಯ ನಾಲಿಗೆ ಕತ್ತರಿಸಿದ ಪತ್ನಿ!

ಜಸ್ಟನ್ ವಿಕಿ ವೇಟ್‌ಲಿಫ್ಟಿಂಗ್ ವೇಳೆ ನೆರವು ನೀಡಲು ನೇಮಕಗೊಂಡ ವ್ಯಕ್ತಿಯು ಸಹ ತನ್ನ ಸಮತೋಲನ ಕಳೆದುಕೊಂಡಿದ್ದರು. 210 ಕೆಜಿ ಭಾರವಾಗಿದ್ದರಿಂದ ಅಲ್ಲಿದ್ದವರಿಗೆ ಏನೂ ಮಾಡಲು ಸಾಧ್ಯವಾಗಿಲ್ಲ. ಭಾರ ಎತ್ತಿಕೊಂಡು ಕುಳಿತ ವಿಕಿಗೆ ಮತ್ತೆ ಮೇಲೆ ಏಳಲು ಸಾಧ್ಯವಾಗಿಲ್ಲ.  

ಕತ್ತಿನ ಮೇಲೆ ಬಾರ್ಬೆಲ್ ಭಾರ ಬೀಳುತ್ತಿದ್ದಂತೆಯೇ ವಿಕಿ ಅದನ್ನು ಹಿಂದಕ್ಕೆ ಸರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಭಾರದ ಒತ್ತಡಕ್ಕೆ ಕತ್ತು ಮುರಿದಿದೆ. ಈ ವೇಳೆ ಅವರ ಸಹಾಯಕನಿಗೆ ಏನು ಮಾಡಬೇಕೆಂಬುದೇ ಗೊತ್ತಾಗಿಲ್ಲ.  

ಇದನ್ನೂ ಓದಿ: Viral News: ಊರಿನ ಕರೆಂಟ್ ತೆಗೆದಿದ್ದು ಹುಡುಗಿ, ಹೊಡೆತ ತಿಂದಿದ್ದು ಹುಡುಗ!

ಬಾಡಿಬಿಲ್ಡಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದ ವಿಕಿಗೆ ಬಾಲಿಯ ಪ್ಯಾರಡೈಸ್ ಜಿಮ್ ಗೌರವ ನಮನ ಸಲ್ಲಿಸಿದೆ. ‘ವಿಕಿ ಕೇವಲ ಒಬ್ಬ ಬಾಡಿಬಿಲ್ಡರ್ ಮಾತ್ರವಲ್ಲ, ಸ್ಪೂರ್ತಿಯ ಚಿಲುಮೆ’ ಎಂದು ಸಂತಾಪ ಸೂಚಿಸಿದೆ. ವಿಕಿ ಬಾರ್ಬೆಲ್ ಎತ್ತುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News