Viral News: ಮದುವೆ ಎಂದರೆ ಕೇವಲ ಹುಡುಗ-ಹುಡುಗಿಯ ಸಂಬಂಧ ಬೆಸೆಯುವ ಸಮಾರಂಭವಲ್ಲ. ಮದುವೆ ಎಂಬುದು ಎರಡು ಕುಟುಂಬಗಳನ್ನು ಒಂದುಗೂಡಿಸುವ ಸಂಭ್ರಮಾಚರಣೆ. ಹಾಗಾಗಿ, ಮದುವೆಗಾಗಿ ಕೇವಲ ಎರಡು ಮನಸುಗಳು ಬೆರೆತರಷ್ಟೇ ಸಾಲದು ಎರಡು ಕುಟುಂಬಗಳ ನಡುವೆಯೂ ಹೊಂದಾಣಿಕೆ ಬಹಳ ಮುಖ್ಯವಾಗುತ್ತದೆ. ಇಲ್ಲವಾದರೆ, ಆ ಸಂಬಂಧ ದೀರ್ಘಕಾಲ ಉಳಿಯುವುದಿಲ್ಲ. ಮದುವೆಯಲ್ಲಿ ಸಣ್ಣ-ಪುಟ್ಟ ಜಗಳಗಳು, ಮನಸ್ಥಾಪಗಳು ಇದ್ದದ್ದೇ. ಆದರಿಲ್ಲಿ 'ಕೋಳಿ ಜಗಳಕ್ಕೆ ಮದುವೆಯೇ ಕ್ಯಾನ್ಸಲ್' ಆಗಿದೆ.
ಹೌದು, ತನ್ನ ಸ್ನೇಹಿತರಿಗೆ ಚಿಕನ್ ಊಟ ಸಿಕ್ಕಿಲ್ಲ ಎಂಬ ಕಾರಣಕ್ಕೆ ಮದುಮಗ ತನ್ನ ಮದುವೆಯನ್ನೇ ಮುರಿದಿರುವ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ಬಿಹಾರ ಮೂಲದ ಮಾರ್ವಾಡಿ ಕುಟುಂಬದ ವಧುವನ್ನು ಕೈ ಹಿಡಿಯಲು ಸಜ್ಜಾಗಿದ್ದ ತೆಲಂಗಾಣದ ವರ ಮದುವೆಗೂ ಮೊದಲು ಆಯೋಜಿಸಲಾಗಿದ್ದ ವಿವಾಹ ಪೂರ್ವ ಸಮಾರಂಭದಲ್ಲಿ ತನ್ನ ಫ್ರೆಂಡ್ಸ್ಗೆ ನಾನ್ವೆಜ್ ಊಟ ಸಿಕ್ಕಿಲ್ಲ ಎಂಬ ಸಣ್ಣ ಕಾರಣಕ್ಕೆ ತನಗೆ ಮದುವೆಯೇ ಬೇಡ, ತಾನು ತಾಳಿ ಕಟ್ಟುವುದಿಲ್ಲ ಎಂದು ಮದುವೆ ಮುರಿದಿದ್ದಾನೆ.
ಇದನ್ನೂ ಓದಿ- Bride Groom Video : ಈ ಪ್ರಿ ವೆಡ್ಡಿಂಗ್ ಫೋಟೋ ಶೂಟ್ Video ನೋಡಿದ್ರೆ ಶಾಕ್ ಆಗ್ತೀರಾ!
ವಾಸ್ತವವಾಗಿ, ವಧು ಮನೆಯವರು ಮಾರ್ವಾಡಿ ಕುಟುಂಬದವರಾಗಿದ್ದು ಅವರು ಶುದ್ಧ ಸಸ್ಯಾಹಾರಿಗಳು. ಈ ಕಾರಣಕ್ಕಾಗಿಯೇ ಅವರು ಮದುವೆಗೂ ಮುನ್ನ ಆಯೋಜಿಸಲಾಗಿದ್ದ ವೆಡ್ಡಿಂಗ್ ಪಾರ್ಟಿಯಲ್ಲಿ ಬಗೆಬಗೆಯ ವಿಶೇಷವಾದ ಸಸ್ಯಾಹಾರಿ ಖಾದ್ಯಗಳು, ಸಿಹಿತಿನಿಸುಗಳನ್ನು ಮಾಡಿಸಿದ್ದರು. ಆದರೆ, ಪಾರ್ಟಿಗೆ ಬಂದ ವರನ ಸ್ನೇಹಿತರು ತಮಗೆ ಊಟದಲ್ಲಿ ನಾನ್ವೆಜ್ ಸಿಗದ ಕಾರಣ ನಮಗೆ ನಾನ್ವೆಜ್ ಬೇಕೇ ಬೇಕು ಎಂದು ವಧುವಿನ ಮನೆಯವರ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ. ಮಾತ್ರವಲ್ಲ, ಚಿಕನ್ ಇಲ್ಲದ ಊಟ ಬೇಡವೇ ಬೇಡ ಎಂದು ಹೊರನಡೆದಿದ್ದಾರೆ.
ಇದನ್ನೂ ಓದಿ- Viral Video : ಇಳಿವಯಸ್ಸಲ್ಲೂ ಭರ್ಜರಿ ಸ್ಟೆಪ್ಸ್ ಹಾಕಿದ ಅಜ್ಜಿ, ಏನ್ ಎನರ್ಜಿ ಗುರು!
ತನ್ನ ಮದುವೆ ಪಾರ್ಟಿಗೆ ಬಂಧಿದ್ದ ಸ್ನೇಹಿತರು ಚಿಕನ್ (ನಾನ್ವೆಜ್) ಸಿಗದ ಕಾರಣ ಊಟ ಮಾಡದೆಯೇ ಹಾಗೆಯೇ ಹೋಗಿದ್ದನ್ನು ಕಂಡ ವರ ಮತ್ತವನ ಮನೆಯವರು ವಧುವಿನ ಮನೆಯವರ ಬಳಿ ಈ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದಕ್ಕೆ ಇಳಿದಿದ್ದಾರೆ. ವಾಗ್ವಾದ ತಾರಕಕ್ಕೇರಿ ವರ ನಾನು ತಾಳಿಯೇ ಕಟ್ಟಲ್ಲ, ಈ ಮದುವೆಯೇ ಬೇಡ ಎಂದಿದ್ದಾನೆ. ಕೋಳಿ ಜಗಳದಿಂದಾಗಿ ಮದುವೆಯೇ ಮುರಿದುಬಿದ್ದಿದ್ದು, ವಧುವಿನ ಕಡೆಯವರು ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.