Viral video of peacock breathing fire: ನವಿಲು ನಮ್ಮ ರಾಷ್ಟ್ರಪಕ್ಷಿ, ಸಾಮಾನ್ಯವಾಗಿ ತನ್ನ ಸುಂದರಿ ಮೈ ಬನ್ಣದಿಂದ ತನ್ನ ನಾಟ್ಯದಿಂದ ಎಲ್ಲರನ್ನು ಬೆಗಾಗಿಸುವ ನವಿಲು, ಬಾಯಲಿ ಬೆಂಕಿ ಉಗುಳುವುದನ್ನು ನೀವು ಎಂದಾದರು ನೋಡಿದ್ದೀರಾ? ಇಲ್ಲವಾದಲ್ಲಿ ಈ ವಿಡಿಯೋ ನೋಡಿ ನೀವು ಕೂಡ ಶಾಕ್ ಆಗ್ತೀರ!
ಪ್ರಪಂಚದ ಅತ್ಯಂತ ಅದ್ಭುತ ಜೀವಿಗಳಲ್ಲಿ ಒಂದೆಂದು ಸಾಮಾನ್ಯವಾಗಿ ಪ್ರಶಂಸಿಸಲ್ಪಡುವ ನವಿಲುಗಳು ತಮ್ಮ ರೋಮಾಂಚಕ ಪುಕ್ಕಗಳು ಮತ್ತು ಭವ್ಯವಾದ ಸೌಂದರ್ಯಕ್ಕಾಗಿ ಅಚ್ಚುಮೆಚ್ಚಿನವುಗಳಾಗಿವೆ. 1963 ರಲ್ಲಿ, ನವಿಲನ್ನು ಭಾರತದ ರಾಷ್ಟ್ರೀಯ ಪಕ್ಷಿ ಎಂದು ಘೋಷಿಸಲಾಯಿತು.
ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು
ಈ ಪಕ್ಷಿಗಳ ಹೊಳಪು, ಫ್ಯಾನ್ ತರಹದ ನೀಲಿ ಗರಿಗಳು ಮತ್ತು ಪ್ರಭಾವಶಾಲಿ ಗಾತ್ರದೊಂದಿಗೆ, ಈ ಪಕ್ಷಿಗಳು ನಿಜವಾಗಿಯೂ ನೋಡುಗರನ್ನು ಬೆರಗಾಗಿಸುತ್ತಿರುತ್ತದೆ. ಆದರೆ, ಇತ್ತೀಚಿಗೆ ವೈರಲ್ ಆದ ವಿಡಿಯೋವೊಂದರಲ್ಲಿ ನವಿಲೊಂದು ಬೆಂಕಿಯನ್ನು ಉಗುಳುತ್ತಿರುವಂತೆ ಕಂಡು ಬಂದಿದೆ.
ಮೂಲ ವೀಡಿಯೊವನ್ನು ವಾರ್ಡ್ ಕೇನ್ (@wardkane) ಎಂಬ Instagram ಬಳಕೆದಾರರಿಂದ ಪೋಸ್ಟ್ ಮಾಡಲಾಗಿದೆ, ನವಿಲು ಉಸಿರಾಡುತ್ತಿರುವ ಈ ವಿಭಿನ್ನ ವಿಡಿಯೋವನ್ನು ಇತ್ತೀಚೆಗೆ ಸೆರೆಹಿಡಿಯಲಾಗಿದ್ದು, ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
ಇನ್ನೂ ಈ ವಿಡಿಯೋವನ್ನು ಪೋಸ್ಟ್ ಮಡಿರುವ ಬಳಕೆದಾರರು, " ಈ ನವಿಲು ಬೆಂಕಿಯನ್ನು ಉಗುಳುತ್ತಿದ್ದು, ಎಲ್ಲೋ ಪೌರಾಣಿಕ ಅತ್ಯಂತ ವಿಭಿನ್ನವಾದ ಜೀವಿಯಂತೆ ಕಾಣುತ್ತಿದೆ"ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕಾಮನ ಬಿಲ್ಲನ್ನು ಹೋಲುವಂತಿದೆ ಈ ಹಾವು! ಸ್ವರ್ಗದಿಂದ ಧರೆಗಿಳಿದಂತಿದೆ ಧೈತ್ಯ ಹೆಬ್ಬಾವು
ಈ ವಿಡಿಯೋ ಶೇರ್ ಆದ ಕೆಲವೇ ನಿಮಿಷಗಳಲ್ಲಿಯೇ ಸಿಕ್ಕಾಪಟ್ಟೆ ವೈರಲ್ ಆಗಿದ್ದು ತ್ವರಿತವಾಗಿ 1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ, ಇನ್ನೂ ಈ ವಿಡಯೋ ನೋಡಿ ಅಚ್ಚರಿಗೊಂಡಿರುವ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಅದ್ಭುತವಾದ ದೃಶ್ಯವನ್ನು ತಾವು ಕಣ್ತುಂಬಿಕೊಳ್ಳುವುದಷ್ಟೆ ಅಲ್ಲದೆ ಆತ್ಮೀಯರೊಂದಿಗೆ ಶೇರ್ ಕೂಡ ಮಾಡಿಕೊಳ್ಳುತ್ತಿದ್ದಾರೆ.
ಮೊದಲ ನೋಟಕ್ಕೆ ನವಿಲು ಬೆಂಕಿಯನ್ನು ಬಾಯಿಂದ ಉಸಿರಾಡಿದಂತೆ ಕಾಣಿಸಿದರೂ, ಡ್ರ್ಯಾಗನ್‌ಗಳಂತಹ ಪೌರಾಣಿಕ ಜೀವಿಗಳನ್ನು ಈ ವಿಡಿಯೋ ನೆನಪಿಸುತ್ತದೆ. ಆದಾಗ್ಯೂ, ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಈ ವಿಡಿಐೋದ ಹಿಂದಿನ ಅಸಲಿಯತ್ತು ಹೊರ ಬರುತ್ತದೆ.
ನವಿಲು ಉಸಿರಾಡುವ ಸಮಯಕ್ಕೆ ಸೂಕ್ತವಾಗಿ ಸೂರ್ಯನ ಕಿರಣಗಳು ಆವಿಯ ಮೇಲೆ ಬೀಳುತ್ತದೆ, ಈ ಸೂರ್ಯನ ಕಿರಣದ ಅದ್ಭುತವಾದ ಸಂಯೋಜನೆ ನವಿಲು ತನ್ನ ಬಾಯಿಂದ ಬೆಂಕಿಯನ್ನು ಉಗುಳಿದಂತೆ ಘೋಚರಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.