ಮುಳ್ಳುಹಂದಿ ನುಂಗಿದ ಈ ದೈತ್ಯ ಹಾವು ಏನಾಯಿತು ನೋಡಿ ! ಇಲ್ಲಿದೆ ವಿಡಿಯೋ

ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳು ನಮಗೆ ಅನೇಕ ಸಂದೇಶಗಳನ್ನು ರವಾನಿಸುತ್ತವೆ. ಉಪಯುಕ್ತ ಮಾಹಿತಿಯೊಂದಿಗೆ ಮನರಂಜನೆ ನೀಡುವ ಮಾರ್ಗವಾಗಿಯೂ ಕಾರ್ಯ ನಿರ್ವಹಿಸುತ್ತದೆ.   

Written by - Ranjitha R K | Last Updated : May 16, 2023, 03:48 PM IST
  • ಇಂಟರ್ನೆಟ್ ಒಂದು ಪ್ರತ್ಯೇಕ ಪ್ರಪಂಚವಾಗಿ ಕಾರ್ಯನಿರ್ವಹಿಸುತ್ತದೆ.
  • ಕೆಲವು ವಿಷಯಗಳು ನಾನಾ ರೀತಿಯ ಪಾಠ ವನ್ನು ಕಲಿಸುತ್ತವೆ.
  • ಅಂತರ್ಜಾಲದಲ್ಲಿ ಹಾವುಗಳಿಗೆ ಸಂಬಂಧಿಸಿದ ಹೆಚ್ಚು ವಿಡಿಯೋಗಳು ಕಾಣಸಿಗುತ್ತದೆ.
ಮುಳ್ಳುಹಂದಿ ನುಂಗಿದ ಈ ದೈತ್ಯ ಹಾವು ಏನಾಯಿತು ನೋಡಿ  !  ಇಲ್ಲಿದೆ ವಿಡಿಯೋ  title=

ಬೆಂಗಳೂರು : ಇಂದಿನ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳು ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿವೆ. ಇಂಟರ್ನೆಟ್ ಒಂದು ಪ್ರತ್ಯೇಕ ಪ್ರಪಂಚವಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಕಂಡು ಬರುವ ಕೆಲವು ವಿಷಯಗಳು ನಾನಾ ರೀತಿಯ ಪಾಠ ವನ್ನು ಕಲಿಸುತ್ತವೆ. ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳು ನಮಗೆ ಅನೇಕ ಸಂದೇಶಗಳನ್ನು ರವಾನಿಸುತ್ತವೆ. ಉಪಯುಕ್ತ ಮಾಹಿತಿಯೊಂದಿಗೆ ಮನರಂಜನೆ ನೀಡುವ ಮಾರ್ಗವಾಗಿಯೂ ಕಾರ್ಯ ನಿರ್ವಹಿಸುತ್ತದೆ. 

ಅಂತರ್ಜಾಲದಲ್ಲಿ ಹಾವುಗಳಿಗೆ ಸಂಬಂಧಿಸಿದ ಹೆಚ್ಚು ವಿಡಿಯೋಗಳು ಕಾಣಸಿಗುತ್ತದೆ. ಯಾವಾಗಲೂ ಹಾವಿನ ವೀಡಿಯೊಗಳಿಗೆ ಅಭಿಮಾನಿ ಬಳಗವೂ ಹೆಚ್ಚು. ಮನುಷ್ಯರನ್ನು ಹೆಚ್ಚು ಆಕರ್ಷಿಸಿದ ಜೀವಿಗಳಲ್ಲಿ ಹಾವುಗಳಿಗೆ ಪ್ರಮುಖ ಸ್ಥಾನವಿದೆ. ಕೆಲವು ಸಂಪ್ರದಾಯಗಳಲ್ಲಿ, ಹಾವನ್ನು ದೇವರು ಎಂದು ಪೂಜಿಸಲಾಗುತ್ತದೆ. ಇವುಗಳ ಬಗ್ಗೆ ಅನೇಕ ಕಥೆಗಳು ಮತ್ತು ಜಾನಪದಗಳಿವೆ. ಈ ವಿಷಯಗಳ ಬಗ್ಗೆ ನಮಗೆ ಇನ್ನೂ ಕುತೂಹಲ ಮೂಡುವುದು ಸಹಜ. ಸಾಮಾಜಿಕ ಜಾಲತಾಣಗಳಲ್ಲಿ ಹಾವುಗಳ ಹಲವು ವಿಡಿಯೋಗಳು ಹರಿದಾಡುತ್ತಿವೆ.

ಇದನ್ನೂ ಓದಿ Video: ಸಾಕಿದ ಹಾವನ್ನು ಮತ್ತೊಬ್ಬನ ಮೇಲೆ ದಾಳಿ ಮಾಡಲು ಬಳಿಸಿದ ಭೂಪ..!

ಇತ್ತೀಚೆಗೆ ಹಾವಿನ ವಿಡಿಯೋವೊಂದು ಶೇರ್ ಆಗಿದ್ದು, ವೈರಲ್ ಆಗಿದೆ. ಆದರೆ ಸಾಮಾನ್ಯವಾಗಿ ಹಂಚಿಕೊಳ್ಳುವ ವೀಡಿಯೊಗಳಿಗಿಂತ ಇದು ತುಂಬಾ ಭಿನ್ನವಾಗಿದೆ. ಮುಳ್ಳುಹಂದಿಯನ್ನು ತಿಂದು ನರಳಾಡುವ ಹಾವನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಪ್ರಕೃತಿಯ ಸೃಷ್ಟಿಯಲ್ಲಿ, ಎಲ್ಲಾ ಜೀವಿಗಳು ಆತ್ಮರಕ್ಷಣೆಯೊಂದಿಗೆ ರಚಿಸಲ್ಪಟ್ಟಿವೆ. ಉದಾಹರಣೆಗೆ, ಹಾವುಗಳನ್ನು ವಿಷದಿಂದ ರಚಿಸಲಾಗಿದೆ. ಸಿಂಹ, ಹುಲಿ ಮತ್ತು ಚಿರತೆಗಳಂತಹ ಬೇಟೆಯಾಡುವ ಪ್ರಾಣಿಗಳು ಬಲವಾದ ದೇಹ, ಚೂಪಾದ ಉಗುರುಗಳು ಮತ್ತು ಬೇಟೆಯಾಡಲು ಸೂಕ್ತವಾದ ಹಲ್ಲುಗಳನ್ನು ಹೊಂದಿರುತ್ತವೆ. ತಮ್ಮ ವಿಶೇಷ ದೇಹ ರಚನೆ ಮತ್ತು ವಿಶೇಷ ಗುಣಲಕ್ಷಣಗಳೊಂದಿಗೆ, ಆಯಾ ಪ್ರಾಣಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಮೂಲಕ ಬದುಕುತ್ತವೆ.

ಇದನ್ನೂ ಓದಿ : Viral News: ತಂಗಿ ಜೊತೆ ಹಾರ ಬದಲಾಯಿಸಿಕೊಂಡು ಅಕ್ಕನಿಗೆ ತಾಳಿ ಕಟ್ಟಿದ ಭೂಪ!

ಮುಳ್ಳುಹಂದಿ ನೋಡಲು ಚಿಕ್ಕ ಪ್ರಾಣಿಯಾಗಿದ್ದರೂ, ಅದನ್ನು ಬೇಟೆಯಾಡುವುದು ತುಂಬಾ ಕಷ್ಟ. ಬೇಟೆಗಾರರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ಮುಳ್ಳುಹಂದಿಯನ್ನು ಬೇಟೆಯಾಡುವುದು  ಕಷ್ಟವಾಗುತ್ತದೆ. ಈ ವೈರಲ್ ವೀಡಿಯೊದಲ್ಲಿ ನೀವು ಮುಳ್ಳುಹಂದಿಯನ್ನು ಯಶಸ್ವಿಯಾಗಿ ಬೇಟೆಯಾಡಿರುವ  ಭೀಕರ ಹಾವನ್ನು ನೋಡಬಹುದು. ಆದರೆ ವೀಡಿಯೋದಲ್ಲಿ ಹಾವು ಅಜೀರ್ಣದಿಂದ ಬಳಲುತ್ತಿರುವುದನ್ನು ಕೂಡಾ ಕಾಣಬಹುದು. ಹಾವಿನ ಮೈ ತುಂಬಾ ಮುಳ್ಳುಗಳನ್ನೂ ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹಾವು ಮತ್ತು ಮುಳ್ಳುಹಂದಿ ವೀಡಿಯೊವನ್ನು ಇಲ್ಲಿ ವೀಕ್ಷಿಸಿ: 

 

ಇದನ್ನೂ ಓದಿ : Interesting Facts: ಬೀರ್ ಗೆ ಸಂಬಂಧಿಸಿದ ಈ ಸ್ವಾರಸ್ಯಕರ ಸಂಗತಿಗಳು ನಿಮಗೆ ತಿಳಿದಿವೆಯೇ?

ಇಂಥಹ ದೃಶ್ಯಗಳು ಅತ್ಯಂತ ಅಪರೂಪ. ಇವು ಸುಲಭವಾಗಿ ಸಿಗುವುದಿಲ್ಲ. ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಇದನ್ನು ಸಾಕಷ್ಟು ಜನ ವೀಕ್ಷಿಸಿದ್ದು ಲೈಕ್ ಕೂಡಾ ಮಾಡಿದ್ದಾರೆ. 

(ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. ಜೀ ಕನ್ನಡ ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News