Transgender Dad: ವಿಶ್ವಾದ್ಯಂತ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಲೆ ಇರುತ್ತವೆ. ಆದರೆ ಅವುಗಳಲ್ಲಿನ ಕೆಲವೇ ಕೆಲವು ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಅಂತಹುತೆ ಒಂದು ಘಟನೆ ಇದೀಗ ಸಾಮಾಜಿಯ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಘಟನೆಯಲ್ಲಿ ತಂದೆ ತನ್ನ ಮಗಳಿಗೆ ಜನ್ಮ ನೀಡಿದ್ದಾರೆ ಎನ್ನಲಾಗುತ್ತಿದೆ. ಕೇಳಿ ಶಾಕ್ ಆಯ್ತಲ್ಲ? ಇದು ಹೇಗೆ ಸಾಧ್ಯ? ಓರ್ವ ತಂದೆ ಮಗಳಿಗೆ ಹೇಗೆ ಜನ್ಮ ಕೊಡಲು ಸಾಧ್ಯ ಎಂಬ ಪ್ರಶ್ನೆ ನಿಮಗೂ ಕಾಡುತ್ತಿರಬಹುದು. ಹಾಗಾದರೆ ಕೇಳಿ ಈ ಘಟನೆ ನಿಜಕ್ಕೂ ಸಂಭವಿಸಿದೆ. 27 ವಯಸ್ಸಿನ ಸೆಲೆಬ್ ಬೋಲ್ಡನ್ ಈ ಸಾಧನೆಯನ್ನು ಮಾಡಿದ್ದಾರೆ.
ಇಲ್ಲಿದೆ ಕಾರಣ ...
ನ್ಯೂಯಾರ್ಕ್ ಪೋಸ್ಟ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಸೈಲೇಬ್ ಬೋಲ್ಡನ್ ಓರ್ವ ಟ್ರಾನ್ಸ್ ಜೆಂಡರ್ ಪುರುಷರಾಗಿದ್ದಾರೆ. ಮೊದಲು ಅವರು ಓರ್ವ ಮಹಿಳೆಯಾಗಿ ತನ್ನ ಜೀವನ ಕಳೆಯುತ್ತಿದ್ದರು. ಆದರೆ ಇದೀಗ ಪುರುಷನಾಗಲು ಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ಶರೀರ ಬಹುತೇಕ ಪುರುಷರ ಶರೀರವಾಗಿ ಮಾರ್ಪಟ್ಟಿದೆ. ಆದರೆ ತಮ್ಮ ಪತ್ನಿ ತಾಯಿಯಾಗಲು ಸಾಧ್ಯವಿಲ್ಲ ಎಂಬ ಸಂಗತಿ ಸೈಲೆಬ್ ಗೆ ತಿಳಿದಾಗ, ತನ್ನ ಚಿಕಿತ್ಸೆಯನ್ನು ಅವರು ಅರ್ಧಕ್ಕೆ ನಿಲ್ಲಿಸಿದ್ದಾರೆ. ಅಂದರೆ ಅವರು ತನ್ನ ಟ್ರಾನ್ಸಿಷನ್ ಜರ್ನಿಗೆ ಬ್ರೇಕ್ ಹಾಕಿದ್ದಾರೆ. ನಂತರ ಸೈಲೆಬ್ ಕೆಲ ಸಮಯದ ಬಳಿಕ ಗರ್ಭಧರಿಸಿದ್ದಾರೆ ಮತ್ತು ಅವರು ಒಂದು ಸುಂದರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಇಲಾಸಾ ರಾಯೇ ಅಂತಾ ಹೆಸರಿಟ್ಟಿದ್ದಾರೆ. ಈ ಕುರಿತು ಮಾತನಾಡುವ ಸೈಲೆಬ್ 'ನಾನು ಇತರ ಟ್ರಾನ್ಸ್ ಜನರಿಗೆ ಒಂದು ಮಗುವನ್ನು ಕ್ಯಾರಿ ಮಾಡುವುದು ತಪ್ಪಲ್ಲ ಎಂದು ಹೇಳಬಯಸುತ್ತೇನೆ' ಎಂದಿದ್ದಾರೆ.
ಇದನ್ನೂ ಓದಿ-ಒಂದು ಕೋಟಿ ಗಳಿಕೆ, ಊಟ-ತಿಂಡಿ-ವಾಸ್ತವ್ಯ ಉಚಿತ, ಅಷ್ಟಕ್ಕೂ ಈ ಸುಂದರಿ ಮಾಡುವ ಕೆಲಸ ಏನು ಗೊತ್ತಾ?
ಪತ್ನಿಗೆ ಮೂರು ಬಾರಿ ಅಬಾರ್ಶನ್ ಆಗಿದೆ
ವರದಿಗಳ ಪ್ರಕಾರ, ಈ ಸಂಪೂರ್ಣ ಕುಟುಂಬ ಇಂಗ್ಲೆಂಡ್ ನ ಕೇಂಬ್ರಿಡ್ಜ್ ನಿಂದ ಬಂದಿದೆ. ನಿಯಾಮ್ ಮೂರು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆ. 23 ಮತ್ತು 27ನೇ ವಾರದಲ್ಲಿ ಆಕೆ ಅವಳಿ ಮಕ್ಕಳಿಗೆ ಜನ್ಮ ನೀಡಿದರೂ, ಮಕ್ಕಳು ಹುಟ್ಟುವಾಗ ಜೀವಂತವಾಗಿರಲಿಲ್ಲ. ಅಂಡಾಣುಗಳು ಆರೋಗ್ಯಕರವಾಗಿಲ್ಲ ಮತ್ತು ಈ ಕಾರಣದಿಂದ ಅವು ಫಲವತ್ತತೆಯನ್ನು ಹೊಂದಿಲ್ಲ ಎಂದು ವೈದ್ಯರು ಹೇಳಿದ್ದರು, ಆ ಸಂದರ್ಭದಲ್ಲಿ ಸೈಲೆಬ್ ತನ್ನ ಚಿಕಿತ್ಸೆಯನ್ನು ಆರಂಭಿಸಿದ್ದರು ಮತ್ತು ಟೆಸ್ಟೋಸ್ಟೀರಾನ್ ಇಂಜೆಕ್ಷನ್ ಹಾಕಿಸಿಕೊಳ್ಳುವುದನ್ನು ನಿಲ್ಲಿಸಿದ್ದರು. ಆದರೆ, ಈ ನಿರ್ಧಾರ ತಮ್ಮ ಪಾಲಿಗೆ ತುಂಬಾ ಕಷ್ಟಕರವಾಗಿತ್ತು ಎಂದು ಸೆಲೆಬ್ ಹೇಳಿದ್ದಾರೆ.
ಇದನ್ನೂ ಓದಿ-ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಇದ್ದಕ್ಕಿದ್ದಂತೆ ಮೂರ್ತಿಯಾದ ಯುವತಿ! ವಿಡಿಯೋ ನೋಡಿ..
ಅನುಭವ ಹೇಗಿತ್ತು?
ಮಗುವಿಗೆ ಜನ್ಮನೀಡುವ ತನ್ನ ಅನುಭವದ ಕುರಿತು ಮಾತನಾಡಿರುವ ಸೈಲೆಬ್, ಪ್ರವಾಸ ತುಂಬಾ ಭಯಾನಕ ಮತ್ತು ನೋವು ನೀಡುವ ಪಯಣವಿತ್ತು ಎನ್ನುತ್ತಾರೆ. ಲಿಂಗ ಪರಿವರ್ತನೆಯಾಗುವುದು ಅವರಿಗೆ ತಿಳಿದಿತ್ತು ಮತ್ತು ನಿಯಾಮ್ ಗೂ ಕೂಡ ಅದೇ ಬೇಕಿತ್ತು. ಹೀಗಾಗಿ ಜನವರಿ 2022 ರಲ್ಲಿ ಚುಚ್ಚುಮದ್ದು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು. ಅದಕ್ಕೂ ಮುನ್ನ ಕಳೆದ 27 ತಿಂಗಳಿನಿಂದ ಅವರು ಚುಚ್ಚುಮದ್ದು ಹಾಕಿಸಿಕೊಳ್ಳುತ್ತಿದ್ದರು. ಇದಾದ ಬಳಿಕ ಪತಿ-ಪತ್ನಿ ಇಬ್ಬರು ಸೇರಿಕೊಂಡು ಸ್ಪರ್ಮ್ ಡೋನರ್ ಸಂಪರ್ಕಿಸಿ ಆರು ತಿಂಗಳ ಬಳಿಕ ಗರ್ಭಧರಿಸಿದರು ಎಂದು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.