Viral News: ಕಂಠಪೂರ್ತಿ ಕುಡಿದು ದೃಷ್ಟಿ ಕಳೆದುಕೊಂಡ ಕುಡುಕ!

Viral News: ನಿರಂತರವಾಗಿ ಗಂಟೆಗಟ್ಟಲೇ ಎಣ್ಣೆ ಕುಡಿದ ಪರಿಣಾಮ ಕಣ್ಣುಗಳ ಮೇಲೆ ವಿಪರೀತ ಒತ್ತಡ ಬಿದ್ದು, ರಕ್ತದ ಕೊರತೆ ಉಂಟಾಗಿದೆ. ಹೀಗಾಗಿ ಕಣ್ಣುಗಳು ಚಲನೆ ಕಳೆದುಕೊಂಡು, ಆ ವ್ಯಕ್ತಿ ದೃಷ್ಟಿಹೀನನಾಗಿದ್ದಾನೆ ಅಂತಾ ವೈದ್ಯರು ಹೇಳಿದ್ದಾರೆ.

Written by - Puttaraj K Alur | Last Updated : Feb 16, 2024, 06:26 PM IST
  • ಕಂಠಪೂರ್ತಿ ಕುಡಿದು ದೃಷ್ಟಿಯನ್ನೇ ಕಳೆದುಕೊಂಡ ವ್ಯಕ್ತಿ
  • ಚೀನಾದ ತೈವಾನ್‌ನಲ್ಲಿ ನಡೆದಿರುವ ಆಘಾತಕಾರಿ ಘಟನೆ
  • ಗಂಟೆಗಟ್ಟಲೇ ಎಣ್ಣೆ ಕುಡಿದ ಪರಿಣಾಮ ದೃಷ್ಟಿಹೀನ
Viral News: ಕಂಠಪೂರ್ತಿ ಕುಡಿದು ದೃಷ್ಟಿ ಕಳೆದುಕೊಂಡ ಕುಡುಕ!  title=
ಕಂಠಪೂರ್ತಿ ಕುಡಿದು ದೃಷ್ಟಿ ಕಳೆದುಕೊಂಡ!

ನವದೆಹಲಿ: ಇದು ಕುಡುಕರಿಗೆ ವಾರ್ನಿಂಗ್‌ ನೀಡುವ ಸುದ್ದಿ. ಕಂಠಪೂರ್ತಿ ಕುಡಿದು ತೂರಾಡುತ್ತಾ ಮನೆಗೆ ಬರುವ ಕುಡುಕರು ಕಡ್ಡಾಯವಾಗಿ ಈ ಸುದ್ದಿ ಓದಲೇಬೇಕು. ನಾನು ಎಷ್ಟು ಬೇಕಾದ್ರೂ ಡ್ರಿಂಗ್ಸ್‌ ಮಾಡ್ತೀನಿ ಅನ್ನೋ ಕುಡುಕರು ಇನ್ಮುಂದೆ ಹಾಗೆ ಮಾಡುವಂತಿಲ್ಲ. ಯಾಕೆಂದ್ರೆ ಕಂಠಪೂರ್ತಿ ಕುಡಿದು ವ್ಯಕ್ತಿಯೊಬ್ಬ ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ.

ಹೌದು, ಈ ಸುದ್ದಿಯನ್ನು ನೀವು ನಂಬಲೇಬೇಕು! ವ್ಯಕ್ತಿಯೊಬ್ಬ ಬಾರ್‌ನಲ್ಲಿ ಗಂಟೆಗಟ್ಟಲೇ ಕುಳಿತು ಕಂಠಪೂರ್ತಿ ಮದ್ಯ ಸೇವಿಸಿದ್ದಾನೆ. ಬಳಿಕ ಹೊಟ್ಟೆ ಕೆಳಗೆ ಮಾಡಿಕೊಂಡು ಮಲಗಿ ಬೆಳಗ್ಗೆ ಏಳುವಷ್ಟರಲ್ಲಿ ತನ್ನ ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ! 

ಇದನ್ನೂ ಓದಿ: ಪರಸ್ಪರ ಕೈ ಹಿಡಿದುಕೊಂಡೇ ಕೊನೆಯುಸಿರೆಳೆದ ಡಚ್ ಮಾಜಿ ಪ್ರಧಾನಿ ಹಾಗೂ ಪತ್ನಿ

ಈ ಆಘಾತಕಾರಿ ಘಟನೆ ನಡೆದಿರುವುದು ಚೀನಾದ ತೈವಾನ್‌ನಲ್ಲಿ. ಕಂಠಪೂರ್ತಿ ಕುಡಿದು ಹೊಟ್ಟೆ ಕೆಳಗೆ ಮಾಡಿಕೊಂಡ ಮಲಗಿದ್ದ 44 ವರ್ಷದ ವ್ಯಕ್ತಿಯೊಬ್ಬ ಕಣ್ಣಿನ ಬಾಧೆ ತಾಳಲಾರದೆ ನೇತ್ರ ತಜ್ಞರನ್ನು ಸಂದರ್ಶಿಸಿದ್ದಾನೆ.

ನಿರಂತರವಾಗಿ ಗಂಟೆಗಟ್ಟಲೇ ಎಣ್ಣೆ ಕುಡಿದ ಪರಿಣಾಮ ಕಣ್ಣುಗಳ ಮೇಲೆ ವಿಪರೀತ ಒತ್ತಡ ಬಿದ್ದು, ರಕ್ತದ ಕೊರತೆ ಉಂಟಾಗಿದೆ. ಹೀಗಾಗಿ ಕಣ್ಣುಗಳು ಚಲನೆ ಕಳೆದುಕೊಂಡು, ಆ ವ್ಯಕ್ತಿ ದೃಷ್ಟಿಹೀನನಾಗಿದ್ದಾನೆ ಅಂತಾ ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: Maglev Train: ವಿಶ್ವದ ಅತಿ ವೇಗದ ರೈಲು..! ಗಂಟೆಗೆ 623 ಕಿ.ಮೀ..!

ಈ ಸುದ್ದಿ ಓದಿದ ಮೇಲೆ ಕಂಠಪೂರ್ತಿ ಕುಡಿಯುವ ವ್ಯಕ್ತಿಗಳು ಎಣ್ಣೆ ಕುಡಿಯಬೇಕಾದರೆ ೧೦ ಸಾರಿ ಯೋಚಿಸಬೇಕು. ಇಲ್ಲಾ ಅಂದ್ರೆ ಕುಡಿತದ ಚಟಕ್ಕೆ ದಾಸರಾಗಿ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
 

Trending News