ನವದೆಹಲಿ: ಆಫ್ಘಾನಿಸ್ತಾನದ ನಂಗರ್ ಹಾರ್ ಪ್ರದೇಶದಲ್ಲಿ ಅಮೆರಿಕಾದ ವಾಯುಸೇನೆಯ ಡ್ರೋನ್ ದಾಳಿಯಿಂದ ಸುಮಾರು 15 ಇಸ್ಲಾಮಿಕ್ ಸ್ಟೇಟ್ ಗೆ ಸೇರಿದ ಉಗ್ರರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಆಫ್ಘಾನಿಸ್ತಾನದ ಖಾಮಾ ಪ್ರೆಸ್ ಈ ಕುರಿತಾಗಿ ವರದಿ ಮಾಡಿದ್ದು. ಅಮೆರಿಕಾವು ಅಚಿನ್ ಜಿಲ್ಲೆಯ ಬಂದರ್ ಪ್ರದೇಶದಲ್ಲಿ ಈ ವಾಯು ದಾಳಿಯನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಸುಮಾರು 15 ಉಗ್ರಗಾಮಿಗಳು ಮೃತಪಟ್ಟಿದ್ದಾರೆ. ಅಲ್ಲದೆ ಉಗ್ರರ ಎಲ್ಲ ಶಸ್ತ್ರಾಸ್ತ್ರಗಳನ್ನು ಈ ಡ್ರೋನ್ ದಾಳಿಯಿಂದ ನಾಶಪಡಿಸಲಾಗಿದೆ ತಿಳಿದುಬಂದಿದೆ. ಅದೇ ರೀತಿ ಹಸ್ಕಾ ಮೀನಾ ಎನ್ನುವ ಇನ್ನೊಂದು ಕಾರ್ಯಾಚರಣೆಯಲ್ಲಿ ಇಬ್ಬರು ಇಸ್ಲಾಮಿಕ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇಲ್ಲಿಯವರೆಗೂ ಯಾವುದೇ ಉಗ್ರಗಾಮಿ ಸಂಘಟನೆಯು ಈ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.
ಇದೆ ವಾರದಲ್ಲಿ ಈ ಪ್ರದೇಶದಲ್ಲಿ ಮೂರು ತಾಲಿಬಾನ್ ಉಗ್ರರನ್ನು ಅಮೆರಿಕಾದ ವಾಯುಸೇನೆ ಡ್ರೋನ್ ದಾಳಿ ಮೂಲಕ ಕೊಳ್ಳಲಾಗಿತ್ತು ಎಂದು ಖಾಮಾ ಸುದ್ದಿಸಂಸ್ಥೆ ಹೇಳಿದೆ.