Boris Johnson: ವಿಶ್ವಾಸ ಮತಯಾಚನೆಯಲ್ಲಿ ಗೆದ್ದು, ಪ್ರಧಾನಿ ಪಟ್ಟ ಉಳಿಸಿಕೊಂಡ ಬೋರಿಸ್

Boris Johnson: 359 ಶಾಸಕರ ಪೈಕಿ 211 ಮತಗಳ ಬೆಂಬಲನ್ನು ಬೋರಿಸ್ ಜಾನ್ಸನ್ ಗೆದ್ದರು. ಆದರೆ ಅವರದ್ದೇ ಪಕ್ಷ ಕನ್ಸರ್‌ವೇಟಿವ್‌ ಪಾರ್ಟಿಯ 148 ಮಂದಿ ಸಂಸದರು ಬೋರಿಸ್‌ ವಿರುದ್ಧ ಮತ ಚಲಾಯಿಸಿದರು.

Written by - Chetana Devarmani | Last Updated : Jun 7, 2022, 11:56 AM IST
  • ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್
  • ವಿಶ್ವಾಸ ಮತಯಾಚನೆಯಲ್ಲಿ ಗೆದ್ದು ಬ್ರಿಟನ್ ಪಿಎಂ
  • 359 ಶಾಸಕರ ಪೈಕಿ 211 ಮತಗಳ ಬೆಂಬಲ
Boris Johnson: ವಿಶ್ವಾಸ ಮತಯಾಚನೆಯಲ್ಲಿ ಗೆದ್ದು, ಪ್ರಧಾನಿ ಪಟ್ಟ ಉಳಿಸಿಕೊಂಡ ಬೋರಿಸ್   title=
ಬೋರಿಸ್ ಜಾನ್ಸನ್

ಲಂಡನ್: ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಸೋಮವಾರ ಮಂಡಿಸಲಾದ ಅವಿಶ್ವಾಸ ನಿರ್ಣಯದಲ್ಲಿ ವಿಶ್ವಾಸಮತ ಗೆದ್ದು ಬೀಗಿದ್ದಾರೆ. ಈ ಮೂಲಕ ತಮ್ಮ ಪ್ರಧಾನ ಮಂತ್ರಿ ಪಟ್ಟವನ್ನು ಉಳಿಸಿಕೊಂಡಿದ್ದಾರೆ. 359 ಶಾಸಕರ ಪೈಕಿ 211 ಮತಗಳ ಬೆಂಬಲನ್ನು ಬೋರಿಸ್ ಜಾನ್ಸನ್ ಗೆದ್ದರು. ಆದರೆ ಅವರದ್ದೇ ಪಕ್ಷ ಕನ್ಸರ್‌ವೇಟಿವ್‌ ಪಾರ್ಟಿಯ 148 ಮಂದಿ ಸಂಸದರು ಬೋರಿಸ್‌ ವಿರುದ್ಧ ಮತ ಚಲಾಯಿಸಿದರು.

ಇದನ್ನೂ ಓದಿ: ಊಟ ಕೇಳಿದ್ದೆ ತಪ್ಪಾಯ್ತಾ? ಪುಟ್ಟ ಕಂದಮ್ಮನ ಕೈ ಸುಟ್ಟ ಪಾಪಿ ಮಲತಾಯಿ

ಕೊರೊನಾ ಲಾಕ್‌ಡೌನ್‌ ಇದ್ದರೂ ಪಾರ್ಟಿಗಳಲ್ಲಿ ಭಾಗವಹಿಸಿದ್ದು, ಕೋವಿಡ್‌ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲರಾಗಿದ್ದು ಪಕ್ಷದ ಘನತೆಗೆ ಸಾರ್ವಜನಿಕವಾಗಿ ಧಕ್ಕೆ ತಂದಿದೆ ಎಂದು ಸ್ವಪಕ್ಷೀಯರೇ ಬೋರಿಸ್‌ ಜಾನ್ಸನ್ ಅವರ ವಿರುದ್ಧ ಆರೋಪಿಸಿದ್ದರು. ಇದೇ ಕಾರಣಕ್ಕಾಗಿ ಬೋರಿಸ್‌ ರಾಜೀನಾಮೆಗೆ ಒತ್ತಾಯಿಸಲಾಗಿತ್ತು. ಆದರೆ ಇದೀಗ ಸೋಮವಾರ ಅವಿಶ್ವಾಸ ನಿರ್ಣಯದಲ್ಲಿ ವಿಶ್ವಾಸಮತ ಗೆದ್ದು ಪಿಎಂ ಜಾನ್ಸನ್ ಮತ್ತೆ ಕುರ್ಚಿ ಗಟ್ಟಿ ಮಾಡಿಕೊಂಡಿದ್ದಾರೆ. 

ಬೋರಿಸ್ ಜಾನ್ಸನ್ ಅವರು ಜೂನ್ 6 ರಂದು ಅವಿಶ್ವಾಸ ಮತವನ್ನು ಎದುರಿಸಿದರು. ಅವಿಶ್ವಾಸ ಮತದಿಂದ ಪಾರಾಗಲು ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಗೆ 180 ಕನ್ಸರ್ವೇಟಿವ್ ಸಂಸದರ ಬೆಂಬಲ ಬೇಕಿತ್ತು. ಬ್ರಿಟಿಷ್ ಸಂಸತ್ತು ಹೌಸ್ ಆಫ್ ಕಾಮನ್ಸ್ ಒಟ್ಟು 359 ಸಂಸದರ ಬಲವನ್ನು ಹೊಂದಿದೆ. ವಿಶ್ವಾಸ ಮತಯಾಚನೆ ವೇಳೆ 211 ಶಾಸಕರು  ಬೋರಿಸ್ ಜಾನ್ಸನ್ ಗೆ ಬೆಂಬ ಸೂಚಿಸಿದ್ದರು. 

2019ರಲ್ಲಿ ಚುನಾವಣೆಯಲ್ಲಿ ಭರ್ಜರಿ ವಿಜಯವನ್ನು ಗಳಿಸಿದ ಬೋರಿಸ್ ಜಾನ್ಸನ್, ಇದೀಗ ವಿಶ್ವಾಸಮತವನ್ನು ಗೆದ್ದಿದ್ದಾರೆ. 

ಇದನ್ನೂ ಓದಿ: ಮಕ್ಕಳ ಹಲ್ಲು-ಒಸಡುಗಳಿಗೆ ಹಾನಿಕಾರಕ ಆಹಾರಗಳಿವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News