Coronavirus 4th Wave: ಕೊರೊನಾ ನಾಲ್ಕನೇ ಅಲೆಗೆ ಈ ದೇಶ ತತ್ತರ, ನಿತ್ಯ 20 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿ

Fourth Wave Of Coronavirus - ಭಾರತದಲ್ಲಿ ಕೋರೋನಾ ವೈರಸ್ ನ (Coronavirus) ನಾಲ್ಕನೆಯ ಅಲೆಯ ಅಪಾಯ ಎದುರಾಗಿರುವ ಸಂಗತಿ ನಿಮಗೆಲ್ಲರಿಗೂ ತಿಳಿದೇ ಇದೆ. ಹೀಗಿರುವಾಗ ನ್ಯೂಜಿಲ್ಯಾಂಡ್ ದೇಶದಲ್ಲಿ ಒಂದೇ ದಿನದಲ್ಲಿ 20 ಸಾವಿರ ಕೊರೊನಾವೈರಸ್(Covid-19) ಪ್ರಕರಣಗಳು ಪತ್ತೆಯಾಗಿರುವುದು ಇಡೀ ವಿಶ್ವದಲ್ಲಿಯೇ ಭೀತಿಯ ವಾತಾವರಣ ಮತ್ತೊಮ್ಮೆ ಸೃಷ್ಟಿಯಾಗಿದೆ.   

Written by - Nitin Tabib | Last Updated : Mar 23, 2022, 02:15 PM IST

    ನ್ಯೂಜಿಲ್ಯಾಂಡ್ ನಲ್ಲಿ ಕೊರೊನಾ ವೈರಸ್ ನ ನಾಲ್ಕನೇ ಅಲೆಯ ಅಬ್ಬರ

  • ಒಂದೇ ದಿನದಲ್ಲಿ 20 ಸಾವಿರ ಹೊಸ ಪ್ರಕರಣಗಳು ಪತ್ತೆ
  • ಕಮ್ಯೂನಿಟಿ ಸ್ಪ್ರೆಡ್ ನಿಂದ ಪ್ರಕರಣಗಳು ಹೆಚ್ಚಾಗುವ ಭೀತಿ
Coronavirus 4th Wave: ಕೊರೊನಾ ನಾಲ್ಕನೇ ಅಲೆಗೆ ಈ ದೇಶ ತತ್ತರ, ನಿತ್ಯ 20 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿ title=
Fourth Wave Of Coronavirus

ನವದೆಹಲಿ: Fourth Wave Of Coronavirus - ಭಾರತದಲ್ಲಿ ಕೋವಿಡ್ -19 ರ ನಾಲ್ಕನೇ ಅಲೆಯ ಬೆದರಿಕೆ ನಿರಂತರವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನ್ಯೂಜಿಲೆಂಡ್ ದೇಶದಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ನ್ಯೂಜಿಲೆಂಡ್ ನಲ್ಲಿ ಮಂಗಳವಾರ (ಮಾರ್ಚ್ 22, 2022) ಕರೋನವೈರಸ್‌ನ 20,907 ಹೊಸ ಪ್ರಕರಣಗಳನ್ನು ವರದಿಯಾಗಿವೆ. ದೇಶದಲ್ಲಿ ಕೊರೊನಾ ವೈರಸ್‌ನಿಂದ 15 ಜನರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 199 ಕ್ಕೆ ತಲುಪಿದೆ.

ನ್ಯೂಜಿಲ್ಯಾಂಡ್ ನ ಅತಿ ದೊಡ್ಡ ಪಟ್ಟಣದಲ್ಲಿ ಅತಿ ಹೆಚ್ಚು ಪ್ರಕರಣಗಳು
ನ್ಯೂಜಿಲೆಂಡ್‌ನ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, 4,291 ಹೊಸ ಸಮುದಾಯ ಸೋಂಕು ಪ್ರಕರಣಗಳು (Community Cases) ದೇಶದ ಅತಿದೊಡ್ಡ ನಗರವಾಗಿರುವ ಆಕ್ಲೆಂಡ್‌ ನಿಂದ ವರದಿಯಾಗಿವೆ ಎನ್ನಲಾಗಿದೆ. ಕ್ಯಾಂಟರ್ಬರಿಯಲ್ಲಿ 3,488 ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಉಳಿದ ಪ್ರಕರಣಗಳನ್ನು ಗುರುತಿಸಲಾಗಿದೆ ಎನ್ನಲಾಗಿದೆ. ನ್ಯೂಜಿಲೆಂಡ್ ಗಡಿಯಲ್ಲಿ 34 ಹೊಸ ಸೋಂಕುಗಳು ಕಂಡುಬಂದಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ-Corona Vaccine For Children: Novovax ಕರೋನಾ ಲಸಿಕೆಗೆ DCGI ಅನುಮೋದನೆ

ಆಸ್ಪತ್ರೆಗಳಲ್ಲಿನ ಪರಿಸ್ಥಿತಿ ಹೇಗಿದೆ?
ಪ್ರಸ್ತುತ ನ್ಯೂಜಿಲೆಂಡ್ ಆಸ್ಪತ್ರೆಗಳಲ್ಲಿ 1,016 ಕೋವಿಡ್-19 ರೋಗಿಗಳಿದ್ದಾರೆ, ಇದರಲ್ಲಿ 25 ಜನರು ಐಸಿಯು ಅಥವಾ ಹೈ ಡಿಪೆಂಡೆನ್ಸಿ ಯುನಿಟ್ ಗಳಲ್ಲಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳಿಂದಾಗಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ.

ಇದನ್ನೂ ಓದಿ-ಕೇವಲ ಈ ಒಂದು ವಸ್ತುವನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡ ಶೀಘ್ರ ನಿಯಂತ್ರಣಕ್ಕೆ ಬರುತ್ತದೆ

15 ರೋಗಿಗಳಲ್ಲಿ ಓರ್ವ ರೋಗಿಯ ಸಾವು
ನ್ಯೂಜಿಲೆಂಡ್ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಕೋವಿಡ್ -19 ನಿಂದ ಒಟ್ಟು 15 ಜನ ಮರಣಹೊಂದಿದ್ದಾರೆ ಎನ್ನಲಾಗಿದೆ, ಇದು ದೇಶದಲ್ಲಿನ ಒಟ್ಟು ಸಾವಿನ ಸಂಖ್ಯೆಯನ್ನು 199 ಕ್ಕೆ ಏರಿಸಿದೆ. ಸಾಂಕ್ರಾಮಿಕ ರೋಗದ ಹಾವಳಿ ಆರಂಭವಾದಾಗಿನಿಂದ ನ್ಯೂಜಿಲೆಂಡ್  ನಿಂದ ಇದುವರೆಗೆ 5,17,495 ಕರೋನವೈರಸ್ ಪ್ರಕರಣಗಳು ವರದಿಯಾಗಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News