ನವದೆಹಲಿ:ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಕುರಿತು ಒಂದೆಡೆ ಜನಜಾಗೃತಿ ಮೂಡಿಸಲಾಗುತ್ತಿದ್ದರೆ, ಇನ್ನೊಂದೆಡೆ ಪ್ರದೇಶಗಳನ್ನು ಸ್ವಚ್ಛವಾಗಿಡಲು ಆಯಾ ಪ್ರದೇಶಗಳ ಆಡಳಿತ ಮಂಡಳಿ ಹೆಚ್ಚಿನ ಪ್ರಯತ್ನಗಳನ್ನು ಸಹ ಮಾಡುತ್ತಿದೆ. ಕೊರೊನಾ ವೈರಸ್ ನಿಂದ ಪಾರಾಗಲು ರಸ್ತೆ ಮತ್ತು ಬೀದಿಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಯಾವುದೇ ಒಂದು ಪ್ರದೇಶದಲ್ಲಿ ಕೊರೊನಾ ವೈರಸ್ ಸೊಂಕಿತರು ಪತ್ತೆಯಾಗುತ್ತಾರೋ ಅಲ್ಲಿ ಇಡೀ ಪ್ರದೇಶವನ್ನು ಲಾಕ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗುತ್ತದೆ ಮತ್ತು ಕೊರೊನಾ ವೈರಸ್ ನಿಂದ ಪಾರಾಗಲು ಇದೆ ಒಂದು ಸರಿಯಾದ ದಾರಿಯಾಗಿದೆ ಎಂದು ನಾವು ಭಾವಿಸುತ್ತೇವೆ.
ಏಕೆಂದರೆ ಯಾವುದೇ ಒಂದು ಪ್ರದೇಶದಲ್ಲಿ ಸೋಂಕು ನಿವಾರಕವನ್ನು ಸಿಂಪಡಿಸಿದರೆ, ವೈರಸ್ ಸಂಪೂರ್ಣ ನಷ್ಟವಾಗುತ್ತದೆ ಎಂಬುದು ನಮ್ಮ ಅನಿಸಿಕೆ. ಆದರೆ, ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತು ಆಘಾತಕಾರಿ ಮಾಹಿತಿಯೊಂದು ಬಹಿರಂಗಪಡಿಸಿದೆ. ಹೌದು, ಯಾವುದೇ ಒಂದು ಸ್ಥಳದಲ್ಲಿ ಸೋಂಕು ನಿವಾರಕವನ್ನು ಸಿಂಪಡಿಸುವುದರಿಂದ ಕೊರೊನಾ ವೈರಸ್ ನಿವಾರಣೆಯಾಗುವುದಿಲ್ಲ. ತೆರೆದ ಸ್ಥಳಗಳಲ್ಲಿ ಸೋಂಕು ನಿವಾರಕವನ್ನು ಸಿಂಪಡಿಸುವುದರಿಂದ ಕೊರೊನಾ ವೈರಸ್ ಸಾಯುವುದಿಲ್ಲ ಮತ್ತು ಇದು ಆರೋಗ್ಯಕ್ಕೆ ಹಾನಿಕಾರಕ ಸಾಬೀತಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
WHO ನೀಡಿರುವ ಎಚ್ಚರಿಕೆಯ ಪ್ರಕಾರ ಬೀದಿಗಳಲ್ಲಿ ಹಾಗೂ ಮಾರುಕಟ್ಟೆಗಳಲ್ಲಿ ಕೀಟನಾಶಕ ಸಿಂಪಡಿಸುವುದರಿಂದ ಯಾವುದೇ ಲಾಭವಿಲ್ಲ. ಕೆಮಿಕಲ್ ಸ್ಪ್ರೇ ಸಿಂಪಡಿಸುವುದರಿಂದ ಎಲ್ಲ ಮೇಲ್ಮೈಗಳನ್ನು ಕೊರೊನಾ ಮುಕ್ತವಾಗಲಿವೆ ಎಂಬುದು ಕೇವಲ ಕಾಕತಾಳೀಯ. ಏಕೆಂದರೆ ವೈರಸ್ ಸಾವನ್ನಪ್ಪುವವರೆಗೆ ಮಾತ್ರ ಅದರ ಪರಿಣಾಮ ಇರುತ್ತದೆ. ಅಷ್ಟೇ ಅಲ್ಲ ಒಳಾಂಗಣಗಳಲ್ಲಿಯೂ ಕೂಡ ಡಿಸ್ ಇನ್ಫೆಕ್ಟೆಂಟ್ ಸಿಂಪಡನೆ ಕೂಡ ಅಷ್ಟೇ ಅಪಾಯಕಾರಿಯಾಗಿದೆ. ಇದಕ್ಕಾಗಿ ಬಟ್ಟೆ ಅಥವಾ ವೈಪರ್ ಸಹಾಯದಿಂದ ಸ್ವಚ್ಚತೆಯನ್ನು ನಡೆಸಬೇಕು.
ಇದೇ ವೇಳೆ ಮಾನವರ ಶರೀರದ ಮೇಲೂ ಕೂಡ ಕೀಟನಾಶಕ ಸಿಂಪಡನೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಈ ಸೋಂಕು ನಿವಾರಕಗಳ ತಯಾರಿಕೆಗೆ ಕ್ಲೋರಿನ್ ಹಾಗೂ ಇತರೆ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ರಾಸಾಯನಿಕಗಳು ತ್ವಚೆ ಹಾಗೂ ಕಣ್ಣಿಗೆ ಸಂಬಂಧಿಸಿದ ವ್ಯಾಧಿಗೆ ಕಾರಣವಾಗುತ್ತವೆ. ಅಷ್ಟೇ ಅಲ್ಲ ಇದರಿಂದ ಉಸಿರಾಟದ ತೊಂದರೆಗಳೂ ಕೂಡ ಉಂಟಾಗುವುದರ ಜೊತೆಗೆ ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಕೂಡ ಉದ್ಭವಿಸುತ್ತವೆ.
ತೆರೆದ ಪ್ರದೇಶಗಳಲ್ಲಿರುವ ಧೂಳು ಹಾಗೂ ಮಾಲಿನ್ಯದಿಂದ ಸೋಂಕು ನಿವಾರಕ ನಿಷ್ಕ್ರೀಯಗೊಳ್ಳುತ್ತದೆ ಹಾಗೂ ವೈರಸ್ ಮೇಲೆ ಇದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಹೀಗಾಗಿ ರಸ್ತೆ ಹಾಗೂ ಬೀದಿಗಳಲ್ಲಿ ಸೋಂಕು ನಿವಾರಕ ಸಿಂಪಡಿಸುವುದರಿಂದ ವೈರಸ್ ನಷ್ಟವಾಗುತ್ತದೆ ಎಂದು ಭಾವಿಸುವುದು ಶುದ್ಧ ತಪ್ಪು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.