ನವದೆಹಲಿ: ಯುಎಸ್ ಕ್ಯಾಪಿಟಲ್ ನಲ್ಲಿ ಬುಧವಾರ ಟ್ರಂಪ್ ಅವರ ನೂರಾರು ಬೆಂಬಲಿಗರಿಂದ ಉಂಟಾದ ಗಲಭೆ ನಂತರ ಹಿಂಸಾಚಾರವನ್ನು ಉಲ್ಲೇಖಿಸಿ ಪ್ರಚೋದಿಸುವ ಅಪಾಯದ ಹಿನ್ನಲೆಯಲ್ಲಿ ಟ್ವಿಟ್ಟರ್ ಶುಕ್ರವಾರ ಅವರ ಖಾತೆಯನ್ನು ಅಮಾನತುಗೊಳಿತ್ತು.
Donald Trump ಬೆಂಬಲಿಗರಿಂದ ವಾಷಿಂಗ್ಟನ್ ಡಿಸಿಯಲ್ಲಿ ಗಲಭೆ: 4 ಸಾವು
ಟ್ರಂಪ್ (Donald Trump) ರ ವೈಯಕ್ತಿಕ ಖಾತೆ ಮತ್ತು ಅವರ ಸುಮಾರು 90 ಮಿಲಿಯನ್ ಅನುಯಾಯಿಗಳಿಗೆ ಪ್ರವೇಶವನ್ನು ಟ್ವಿಟರ್ ಶುಕ್ರವಾರ ತಡರಾತ್ರಿ ಶಾಶ್ವತವಾಗಿ ಕಡಿತಗೊಳಿಸಿತು.ಇನ್ನೊಂದೆಡೆಗೆ ಯುಎಸ್ ಕ್ಯಾಪಿಟಲ್ ನಲ್ಲಿ ಉಂಟಾದ ಹಿಂಸಾಚಾರದಿಂದಾಗಿ ಪೊಲೀಸ್ ಅಧಿಕಾರಿ ಮತ್ತು ಇತರ ನಾಲ್ವರು ಸಾವನ್ನಪ್ಪಿದರು.
ಟ್ರಂಪ್ ಅವರ Facebook, Instagram ಖಾತೆ ಮೇಲಿನ ನಿಷೇಧ 2 ವಾರಗಳಿಗೆ ವಿಸ್ತರಣೆ
2016 ರಲ್ಲಿ ಅಧ್ಯಕ್ಷ ಸ್ಥಾನವನ್ನು ಗೆಲ್ಲಲು ಟ್ರಂಪ್ ಟ್ವಿಟ್ಟರ್ ಖಾತೆಯನ್ನು ಪರಿಣಾಮಕಾರಿಯಾಗಿ ಬಳಸಿದ್ದರು,ಇದು ಕಾಲಾಂತರದಲ್ಲಿ ಅವರ ಅಭಿಯಾನದ ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿತ್ತು ಆದ್ದರಿಂದ ಅವರು ತಮ್ಮ ರಾಜಕೀಯ ಉದ್ದೇಶಗಳಿಗೆ ಈ ಮಾಧ್ಯಮವನ್ನು ನಿರಂತರವಾಗಿ ಬಳಸುತ್ತಿದ್ದರು.
ಕೊನೆಗೂ ಸೋಲೊಪ್ಪಿಕೊಂಡ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಈಗ ತಮ್ಮ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ್ದರಿಂದಾಗಿ ಆಕ್ರೋಶ ವ್ಯಕ್ತಪಡಿಸಿರುವ ಟ್ರಂಪ್ 'ನಾವು ಸುಮ್ಮನಿರುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಮುಂದುವರೆದು ತಮ್ಮದೇ ಸ್ವಂತ ಸಾಮಾಜಿಕ ಮಾಧ್ಯಮದ ವೇದಿಕೆಯನ್ನು ಹುಟ್ಟುಹಾಕುವುದಾಗಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.