ಸಿಯೋಲ್: ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್ನಲ್ಲಿ ಶನಿವಾರ ತಡರಾತ್ರಿ ನಡೆದ ಹ್ಯಾಲೋವೀನ್ ಆಚರಣೆಯ ವೇಳೆ ದೊಡ್ಡ ದುರಂತವೇ ಸಂಭವಿಸಿದೆ. ಕಾಲ್ತುಳಿತಕ್ಕೆ 146 ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸಾವನ್ನಪ್ಪಿದವರ ಪೈಕಿ ಬಹುತೇಕರು ಹೃದಯ ಸ್ತಂಭನಕಕ್ಕೆ ಒಳಗಾಗಿದ್ದಾರೆ. ಈ ಹ್ಯಾಲೋವೀನ್ ಪಾರ್ಟಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಇಟಾವಾನ್ ಲೆಸ್ಸರ್ ಜಿಲ್ಲೆಯ ಕಿರಿದಾದ ರಸ್ತೆಯಲ್ಲಿ ಬೃಹತ್ ಜನಸಮೂಹ ಜಮಾಯಿಸಿದ ನಂತರ ಕಾಲ್ತುಳಿತ ಆಗಿ ಈ ಘಟನೆ ಸಂಭವಿಸಿದೆ. COVID-19 ನಿರ್ಬಂಧ ತೆರವುಗೊಳಿಸಿದ ಬಳಿಕ ಇದು ದೇಶದಲ್ಲಿ ನಡೆದ ಅತಿದೊಡ್ಡ ಹಬ್ಬವೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಯ ‘ಇಂಡಿಯಾ ಫಸ್ಟ್’ ವಿದೇಶಾಂಗ ನೀತಿ ಶ್ಲಾಘಿಸಿದ ಪುಟಿನ್
ವರದಿಗಳ ಪ್ರಕಾರ ಘಟನಾ ಸ್ಥಳದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ಹೃದಯ ಸ್ತಂಭನದಿಂದ ಬಳಲುತ್ತಿರುವ ಸುಮಾರು 50 ಜನರಿಗೆ ಸಿಪಿಆರ್ ನೀಡಲಾಗಿದೆ. ಉಸಿರಾಟದ ತೊಂದರೆ ಇರುವವರಿಂದ 81 ಕರೆಗಳು ಬಂದಿವೆ ಎಂದು ತುರ್ತು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್ ಯೋಲ್ ಅವರು ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಉತ್ಸವದ ಸ್ಥಳಗಳ ಭದ್ರತೆ ಪರಿಶೀಲಿಸುವಂತೆ ತಿಳಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಯು ಚುರುಕುಗೊಂಡಿದೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಏಜೆನ್ಸಿಯ ಅಧಿಕಾರಿ ಚೋಯ್ ಚಿಯೋನ್-ಸಿಕ್ ಹೇಳಿದ್ದಾರೆ.
ಇದನ್ನೂ ಓದಿ: Relationships:ಎಂಟು ಪುರುಷರ ಜೊತೆಗೆ ಸಂಬಂಧ ಬೆಳೆಸಿ 11 ಮಕ್ಕಳು, 30 ಮಕ್ಕಳ ಪ್ಲ್ಯಾನಿಂಗ್
Absolute scenes of chaos in Itaewon right now as the Halloween night has turned into a major safety hazard with at least several party-goers being carried into ambulances. pic.twitter.com/JqVpbYiFrv
— Hyunsu Yim (@hyunsuinseoul) October 29, 2022
ಹ್ಯಾಲೋವೀನ್ ಹಬ್ಬ ಎಂದರೇನು?
ಹ್ಯಾಲೋವೀನ್ ಹಬ್ಬವನ್ನು ಪ್ರಪಂಚದ ಅನೇಕ ನಗರಗಳಲ್ಲಿ ಆಚರಿಸಲಾಗುತ್ತದೆ. ವಿಶೇಷವಾಗಿ ಈ ಹಬ್ಬಗಳನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಆಚರಿಸಲಾಗುತ್ತದೆ. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಹ್ಯಾಲೋವೀನ್ ಹಬ್ಬ ಆಚರಿಸಲಾಗುತ್ತದೆ ಎಂಬ ನಂಬಿಕೆ ಇದೆ. ಈ ವಿಶೇಷ ದಿನಂದು ಜನರು ವಿವಿಧ ರೀತಿಯ ಮುಖವಾಡಗಳು ಮತ್ತು ರಾಕ್ಷಸರ ರೀತಿ ಮೇಕಪ್ ಹಾಕಿಕೊಂಡು ಭಯಾನಕ ಬಟ್ಟೆ ಧರಿಸಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ