Imran Khan On Afghanistan Crisis - ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಮರಳಿದ ಬಳಿಕ ಲಕ್ಷಾಂತರ ಜನರು ದೇಶ ತೊರೆಯುವ ಸ್ಥಿತಿ ಬಂದೊದಗಿದೆ. ಆದರೆ, ಅತ್ತ ತಾಲಿಬಾನ್ ಖಾನ್ (Taliban Khan) ಎಂದೇ ಕರೆಯಲ್ಪಡುವ ಇಮ್ರಾನ್ ಖಾನ್ (Imran Khan) ಮತ್ತೊಮ್ಮೆ ತನ್ನ ಅಪಾಯಕಾರಿ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದಿರುವುದನ್ನು Pakistan PM ಇಮ್ರಾನ್ ಖಾನ್ (Imran Khan On Afghanistan Crisis) ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ ತಾಲಿಬಾನ್ ಮರಳುವಿಕೆಯನ್ನು ಅವರು 'ದಾಸ್ಯತ್ವದ ಬಲೆಯಿಂದ ಮುಕ್ತಿ' ಎಂದು ಬಣ್ಣಿಸಿದ್ದಾರೆ. ಮಹಿಳೆಯರು, ಯುವಕರು ಹಾಗೂ ಆಧುನಿಕ ವಿಚಾರಗಳನ್ನು ಅನುಸರಿಸುವ ಜನರಿಗೆ ವಿರುದ್ಧವಾಗಿರುವ ತಾಲಿಬಾನ್ ನ ಈ ಕ್ರಮವನ್ನು ಚೀನಾ ಹಾಗೂ ಇರಾನ್ ಕೂಡ ಸ್ವಾಗತಿಸಿವೆ. ಒಂದೆಡೆ,' ತಾಲಿಬಾನ್ (Taliban) ಆಳ್ವಿಕೆ ಶಾಶ್ವತ' ಎಂದು ಚೀನಾ ಭರವಸೆ ವ್ಯಕ್ತಪಡಿಸಿದ್ದರೆ, ಇನ್ನೊಂದೆಡೆ 'ಅಮೆರಿಕದ ಸೋಲು ಶಾಶ್ವತ ಶಾಂತಿಯ ಭರವಸೆ ನೀಡಿದೆ' ಎಂದು ಇರಾನ್ ಹೇಳಿದೆ.
ಇಂಗ್ಲಿಷ್ ಮಾಧ್ಯಮ ಶಿಕ್ಷಣ ಮತ್ತು ಕೆಲಸದ ಭಾಷೆಯ ಬಗ್ಗೆ ಮಾತನಾಡಿರುವ ಇಮ್ರಾನ್ ಖಾನ್, 'ನೀವು ಯಾವಾಗ ಬೇರೆಯವರ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದೀರೋ ಆಗ ನೀವು ಮಾನಸಿಕವಾಗಿ ಗುಲಾಮರಾಗಿದ್ದೀರಿ. ಇದು ನಿಜಾರ್ಥದಲ್ಲಿ ಗುಲಾಮಗಿರಿಗಿಂತ ಕೆಟ್ಟದಾಗಿದೆ ಎಂಬುದನ್ನು ನೆನಪಿಡಿ. ಸಾಂಸ್ಕೃತಿಕ ಗುಲಾಮಗಿರಿಯ ಸರಪಳಿಗಳನ್ನು ಮುರಿಯುವುದು ಸುಲಭವಲ್ಲ. ಪ್ರಸ್ತುತ ಅಫ್ಘಾನಿಸ್ತಾನದಲ್ಲಿ (Afghanistan) ನಡೆಯುತ್ತಿರುವುದು ಗುಲಾಮಗಿರಿಯ ಸರಪಳಿಯನ್ನು ಮುರಿದಂತೆ' ಎಂದು ಇಮ್ರಾನ್ ಹೇಳಿದ್ದಾರೆ. ತಾಲಿಬಾನ್ ಭಾನುವಾರವೇ ಕಾಬೂಲ್ ನಗರವನ್ನು ವಶಪಡಿಸಿಕೊಂಡಿದೆ ಮತ್ತು ಯುಎಸ್ ಬೆಂಬಲಿತ ಸರ್ಕಾರದ ಅಧ್ಯಕ್ಷ ಅಶ್ರಫ್ ಘನಿ (Ashraf Ghani) ದೇಶದಿಂದ ಪಲಾಯನಗೈದಿದ್ದಾರೆ. ಈ ಹಿನ್ನೆಲೆ ದೇಶವನ್ನು ತೊರೆಯಲು ಬಯಸುತ್ತಿರುವ ಜನರು ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುತಿದ್ದು, ವಿಮಾನವೇರಲು ನೂಕುನುಗ್ಗಲು ಉಂಟಾಗಿದೆ.
ಇದನ್ನೂ ಓದಿ-ಭೀಕರ ದೃಶ್ಯ: ವಿಮಾನದ ಟೈರ್ ಮೇಲೆ ಹತ್ತಿದ್ದ ಅಫ್ಘಾನ್ ಪ್ರಜೆಗಳು ಕೆಳಗೆಬಿದ್ದು ಸಾವು..!
ತಾಲಿಬಾನ್ ಎಲ್ಲರನ್ನೋಳಗೊಂಡ ಸರ್ಕಾರ ರಚಿಸುವ ಭರವಸೆ ವ್ಯಕ್ತಪಡಿಸಿದ ಚೀನಾ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಮರಳಿದ ಬಳಿಕ, ಅಮೆರಿಕ, ಬ್ರಿಟನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ತಮ್ಮ ರಾಯಭಾರ ಕಚೇರಿಗಳನ್ನು ಮುಚ್ಚಿವೆ ಮತ್ತು ತಮ್ಮ ದೇಶದ ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಯಿಸಿಕೊಳ್ಳುತ್ತಿವೆ. ಇದೇ ವೇಳೆ ಇರಾನ್, ಚೀನಾ, ರಷ್ಯಾ ಮತ್ತು ಪಾಕಿಸ್ತಾನದಂತಹ ಕೆಲ ದೇಶಗಳು ತಮ್ಮ ರಾಯಭಾರ ಕಛೇರಿಗಳು ಆಫ್ಘಾನಿಸ್ತಾನದಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಲಿವೆ ಎಂದಿವೆ. ಇದಲ್ಲದೇ, ತಾಲಿಬಾನ್ ಸರ್ಕಾರವನ್ನು ತಾವು ಗುರುತಿಸುವ ಮುನ್ಸೂಚನೆಗಳು ನೀಡಿವೆ. ತಾಲಿಬಾನ್ ಜೊತೆ ನಿಕಟವಾಗಿ ಕೆಲಸ ಮಾಡಲು ಚೀನಾ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದೆ ಮತ್ತು ತಾಲಿಬಾನ್ ಆಫ್ಘಾನಿಸ್ತಾನದಲ್ಲಿ ಎಲ್ಲರನ್ನೋಳಗೊಂಡ ಸರ್ಕಾರ ನೀಡಲಿದೆ ಎಂಬ ಭರವಸೆ ಅದು ವ್ಯಕ್ತಪಡಿಸಿದೆ. "ತಾಲಿಬಾನ್ ತನ್ನ ಭರವಸೆಯನ್ನು ಈಡೇರಿಸುತ್ತದೆ ಮತ್ತು ದೇಶದಲ್ಲಿ ಮುಕ್ತ ಮತ್ತು ಅಂತರ್ಗತ ಸರ್ಕಾರವನ್ನು ರಚಿಸುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಚೀನಾ ಸೋಮವಾರ ಹೇಳಿದೆ.
ಇರಾನ್, ರಷ್ಯಾ, ಚೀನಾ ಹಾಗೂ ಪಾಕಿಸ್ತಾನದ ಸಂತಸಕ್ಕೆ ಕಾರಣ ಏನು?
ಇರಾನ್ (Iran), ರಷ್ಯಾ (Russia) ಮತ್ತು ಚೀನಾ (China) ಹಲವು ವಿಷಯಗಳಲ್ಲಿ ಯುಎಸ್ ಜೊತೆ ಭಿನ್ನಾಭಿಪ್ರಾಯ ಹೊಂದಿವೆ. ಇಂತಹ ಪರಿಸ್ಥಿತಿಯಲ್ಲಿ, ಈ ಮೂರು ದೇಶಗಳು ಅಫ್ಘಾನಿಸ್ತಾನದಿಂದ ಅಮೆರಿಕದ ಸೈನ್ಯವನ್ನು ಹಿಂತೆಗೆದುಕೊಳ್ಳುವುದನ್ನು ತಮ್ಮ ಪ್ರಭಾವವನ್ನು ಹೆಚ್ಚಿಸುವ ಅವಕಾಶವಾಗಿ ನೋಡುತ್ತಿವೆ. ರಷ್ಯಾ ಈಗಾಗಲೇ ತಾಲಿಬಾನ್ ಜೊತೆ ಮಾತನಾಡಲು ಆರಂಭಿಸಿದೆ. ತಾಲಿಬಾನ್‌ಗಳು ಕಾಬೂಲ್‌ನಲ್ಲಿ ಎಲ್ಲಾ ವಿದೇಶಿ ಕಚೇರಿಗಳಿಗೆ ರಕ್ಷಣೆ ನೀಡುವ ಮೂಲಕ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಮುಂದುವರೆಯುವ ಭರವಸೆಯನ್ನು ತಾಲಿಬಾನ್ ಕಾಯ್ದುಕೊಳ್ಳಬೇಕಾಗಿದೆ ಎಂದು ಹೇಳಿದೆ.
ಇದನ್ನೂ ಓದಿ-Viral Video: ಅಫ್ಘಾನ್ ತೊರೆಯಲು ಕಾಬೂಲ್ ಏರ್‌ಪೋರ್ಟ್‌ನತ್ತ ಜನಜಾತ್ರೆ, ವಿಮಾನವೇರಲು ನೂಕುನುಗ್ಗಲು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ