ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರತಿವರ್ಷವೂ ಮಾರ್ಚ್ 8ರಂದು ಆಚರಿಸಲಾಗುತ್ತದೆ. ಈ ದಿನದಂದು ಜಾಗತಿಕವಾಗಿ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಾಧನೆಗಳನ್ನು ಸಂಭ್ರಮಿಸಲಾಗುತ್ತದೆ. ಅದರೊಡನೆ, ಲಿಂಗ ಸಮಾನತೆಯನ್ನು ಸಾಧಿಸಲು ಕರೆ ನೀಡಲಾಗುತ್ತದೆ.
ಈ ದಿನವನ್ನು ಇಪ್ಪತ್ತನೇ ಶತಮಾನದ ಆರಂಭದಲ್ಲಿ ಮಹಿಳೆಯರು ಉತ್ತಮ ಕೆಲಸದ ಸ್ಥಿತಿಗಾಗಿ ಮತದಾನದ ಹಕ್ಕಿಗಾಗಿ ನಡೆಸಿದ ಹೋರಾಟದ ಸ್ಮರಣೆಗಾಗಿ ಆಚರಿಸಲಾಗುತ್ತಿದೆ. ಮೊದಲ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು 1911ರಲ್ಲಿ ಆಚರಿಸಲಾಯಿತು. ಅಂದಿನಿಂದ ಮಹಿಳಾ ದಿನ ಜಾಗತಿಕವಾಗಿ ಮಹಿಳೆಯರನ್ನು ಗುರುತಿಸಿ ಸಂಭ್ರಮಿಸುವ ದಿನವಾಗಿದೆ.
ಇದನ್ನೂ ಓದಿ- International Women’s Day 2023: ಅಂತಾರಾಷ್ಟ್ರೀಯ ಮಹಿಳಾ ದಿನದಂದು ಈ ವಿಶೇಷ ಸಂದೇಶ ಕಳಿಸಿ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಇತಿಹಾಸದಲ್ಲಿ ಮತ್ತು ಆಧುನಿಕ ಸಮಾಜದಲ್ಲಿ ಮಹಿಳೆಯರ ಕೊಡುಗೆಗಳನ್ನು ಗುರುತಿಸುವ ಅವಕಾಶವೂ ಹೌದು. ಅದರೊಡನೆ ಇಂದಿಗೂ ಮುಂದುವರಿಯುತ್ತಿರುವ ಸಮಾನತೆಯ ಹೋರಾಟಕ್ಕೆ ಬೆಳಕು ಚೆಲ್ಲುವ ಅವಕಾಶವೂ ಹೌದು. ಮಹಿಳಾ ದಿನಾಚರಣೆ ಇಂದಿನ ತನಕ ಮಹಿಳೆಯರು ಸಾಧಿಸಿರುವ ಅಭಿವೃದ್ಧಿಯನ್ನು ಸ್ಮರಿಸುತ್ತಲೇ, ಜಗತ್ತಿನಾದ್ಯಂತ ಇನ್ನೂ ಆಗಬೇಕಾದ ಮಹಿಳಾ ಅಭಿವೃದ್ಧಿ, ಮಹಿಳೆಯರ ಹಕ್ಕುಗಳನ್ನು ಗೌರವಿಸುವ ಕುರಿತ ಜಾಗೃತಿಯನ್ನೂ ಮೂಡಿಸುತ್ತದೆ.
ಮೊದಲ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 19, 1911ರಂದು ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ, ಹಾಗೂ ಸ್ವಿಸರ್ಲ್ಯಾಂಡ್ಗಳಲ್ಲಿ ಆಚರಿಸಲಾಯಿತು. ಇದನ್ನು ಸೋಷಿಯಲಿಸ್ಟ್ ಪಾರ್ಟಿ ಆಫ್ ಅಮೆರಿಕಾ ಪಕ್ಷವು ಸಮಾನ ಹಕ್ಕುಗಳು, ಉತ್ತಮ ಕೆಲಸ ಮಾಡುವ ಪರಿಸ್ಥಿತಿ ಹಾಗೂ ಮಹಿಳಾ ಮತದಾನದ ಹಕ್ಕುಗಳಿಗಾಗಿ ಒತ್ತಾಯಿಸಲು ಆಯೋಜಿಸಿತು. 1975ರಲ್ಲಿ ವಿಶ್ವಸಂಸ್ಥೆ ಮಹಿಳಾ ದಿನಾಚರಣೆಯನ್ನು ಅಂಗೀಕರಿಸಿತು. ಬಳಿಕ ಈ ದಿನ ವಿಶ್ವಾದ್ಯಂತ ಆಚರಿಸುತ್ತಾ ಬರಲಾಗಿದೆ.
ಇದನ್ನೂ ಓದಿ- ಇಲ್ಲಿವರೆಗೂ ನಿಮ್ಗೆ ʼಮಹಿಳಾ ದಿನಾಚರಣೆʼ ಏಕೆ ಆಚರಿಸುತ್ತಾರೆ ಅಂತ ಗೊತ್ತಿಲ್ವಾ..! ಹಾಗಿದ್ರೆ ಓದಿ
2023ರ ಮಹಿಳಾ ದಿನಾಚರಣೆಯ ಥೀಮ್ ಏನು?
ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಡಿಜಿಟ್ ಆಲ್: ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ ಎಂಬ ಉದ್ದೇಶದಲ್ಲಿ ಆಯೋಜಿಸುವುದಾಗಿ ವಿಶ್ವಸಂಸ್ಥೆ ತಿಳಿಸಿದೆ. ಇದು ಲಿಂಗ ಸಮಾನತೆಯನ್ನು ಸಾಧಿಸಲು ತಂತ್ರಜ್ಞಾನದ ಬಳಕೆಯನ್ನು ಸೂಚಿಸುತ್ತದೆ. ಯುನೆಸ್ಕೋದ ಮಹಾನಿರ್ದೇಶಕರಾದ ಆಡ್ರೇ ಅಜೌಲೇ ಅವರು ಹೊಸ ತಲೆಮಾರಿನ ಯುವತಿಯರನ್ನು ಬದಲಾವಣೆಗಾಗಿ ಆಗ್ರಹಿಸುವುದಕ್ಕಾಗಿ, ಇತರರನ್ನು ಪ್ರೇರೇಪಿಸುವುದಕ್ಕಾಗಿ ಮತ್ತು ಅವರನ್ನು ಬದಲಾವಣೆಯೆಡೆಗೆ ಮುನ್ನಡೆಸುವುದಕ್ಕಾಗಿ ಶ್ಲಾಘಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.