ನಾಸಾ: ಪಾರ್ಕರ್ ಸೋಲಾರ್ ಪ್ರೋಬ್ ನೌಕೆ ಯಶಸ್ವಿ ಉಡಾವಣೆ

ಈ ಸೌರಾಧ್ಯಯನ ಯೋಜನೆಗೆ ಅಮೆರಿಕ ಸರ್ಕಾರ ಅಂದಾಜು 10 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದೆ.

Last Updated : Aug 12, 2018, 06:09 PM IST
ನಾಸಾ: ಪಾರ್ಕರ್ ಸೋಲಾರ್ ಪ್ರೋಬ್ ನೌಕೆ ಯಶಸ್ವಿ ಉಡಾವಣೆ title=

ವಾಷಿಂಗ್ಟನ್: ಸೌರಮಂಡಲದ ಉಗಮಕ್ಕೆ ಕಾರಣವಾದ ಸೂರ್ಯನ ಅಧ್ಯಯನಕ್ಕೆ ಮುಂದಾಗಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಇಂದು ಸೂರ್ಯನ ಸಮೀಪಕ್ಕೆ ಸಾಗುವ ಪಾರ್ಕರ್ ಸೋಲಾರ್ ಪ್ರೋಬ್ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. 

ಅಮೇರಿಕಾದ ಕೇಪ್‌ ಕೆನವೆರಲ್‌ನಿಂದ ಭಾನುವಾರ ಪಾರ್ಕರ್‌ ಸೋಲಾರ್‌ ಪ್ರೋಬ್‌ ಅನ್ನು ಹೊತ್ತ ಡೆಲ್ಟಾ-4 ಬೃಹತ್‌ ರಾಕೆಟ್‌ ನಭಕ್ಕೆ ಜಿಗಿದಿದೆ. ಇದು ಸೌರಮಂಡಲ ಮತ್ತು ಭೂಮಿಯ ಉಗಮಕ್ಕೆ ಕಾರಣವಾದ ಸಾಕಷ್ಟು ಅಂಶಗಳ ಬಗ್ಗೆ ಅಧ್ಯಯನ ನಡೆಸಲಿದೆ. ಈ ಮೂಲಕ 7 ವರ್ಷಗಳ ಕಾಲ ಸೂರ್ಯನಲ್ಲಿರುವ ವಾತಾವರಣ, ಭೂಮಿಯ ವಾತಾವರಣದ ಮೇಲೆ ಅದರ ಪ್ರಭಾವದ ಕುರಿತಾಗಿ ಹಲವು ಮಹತ್ವದ ಸಂಗತಿಗಳನ್ನು ನಾಸಾ ಕಂಡುಕೊಳ್ಳಲಿದೆ. ಈ ಸೌರಾಧ್ಯಯನ ಯೋಜನೆಗೆ ಅಮೆರಿಕ ಸರ್ಕಾರ ಅಂದಾಜು 10 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದೆ. ಸೂರ್ಯ ಸಮೀಪಿಸುತ್ತಿದ್ದಂತೆ ನೌಕೆ  ಗಂಟೆಗೆ 7 ಲಕ್ಷ ಕಿ.ಮೀ ವೇಗದಲ್ಲಿ ಚಲಿಸಲಿದೆ.

635 ಕೆ.ಜಿ. ತೂಕದ ಸಣ್ಣ ಕಾರ್ ಗಾತ್ರದ ಈ ನೌಕೆ ಸೂರ್ಯನಿಂದ ಸುಮಾರು 4 ಮಿಲಿಯನ್ ಮೈಲು ದೂರದ ಅದರ ಪ್ರಭಾವಲಯದಲ್ಲಿ ನೇರವಾಗಿ ಹಾರಾಟ ನಡೆಸಲಿದೆ. 'ಅಸಂಖ್ಯಾತ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳ ಸತತ ಎಂಟು ವರ್ಷದ ಶ್ರಮದ ಫಲ ಕೊನೆಗೂ ಈಡೇರುತ್ತಿದೆ' ಎಂದು ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಯೋಜನೆಯ ವಿಜ್ಞಾನಿ ಆಡಂ ಜಬೊ ಹೇಳಿದ್ದಾರೆ.

Trending News