ಮನಿಲಾ: ಫಿಲಿಪೈನ್ಸ್ ನ ಮಿರಿಯಮ್ ಕಾಲೇಜಿನ ಶಾಂತಿ ಶಿಕ್ಷಣ ಕೇಂದ್ರದಲ್ಲಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಭಾನುವಾರ ಅನಾವರಣಗೊಳಿಸಿದರು.
Honoured to unveil Mahatma Gandhi's bust in the Philippines – the land of the brave Jose Rizal. I thank Miriam College for giving a place of respect to Mahatma Gandhi in its campus #Gandhi150 pic.twitter.com/TwS6G3TIuS
— President of India (@rashtrapatibhvn) October 20, 2019
ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೋವಿಂದ್, "ಮಹಾತ್ಮ ಗಾಂಧಿಯವರ ಈ ಪ್ರತಿಮೆ ಭಾರತದ ಜನರು ನಿಮಗೆ ನೀಡಿದ ಉಡುಗೊರೆ. ಎಲ್ಲಾ ಜನರು, ಎಲ್ಲಾ ಸಂಸ್ಕೃತಿ ಮತ್ತು ಎಲ್ಲಾ ಸಮಾಜಗಳಿಗೆ ಸೇರಿದವರಾದ ಮಹಾತ್ಮ ಗಾಂಧಿ ಶಾಂತಿ, ಅಹಿಂಸೆ ಮತ್ತು ಸಾಮರಸ್ಯವನ್ನು ನಂಬಿದ್ದರು. ನಮ್ಮ ಸುಸ್ಥಿರ ಅಭಿವೃದ್ಧಿಯ ಹಾದಿಯಲ್ಲಿ ಅವರು ನಮಗೆ ಮಾರ್ಗದರ್ಶಕರಾಗಿದ್ದಾರೆ ಎಂದು ನುಡಿದರು.
ಮುಂದುವರೆದು ಮಾತನಾಡಿದ ಅವರು, "ಜೋಸ್ ರಿಜಾಲ್ ಅವರ ಭೂಮಿಯಾಗಿರುವ ಫಿಲಿಪೈನ್ಸ್ನಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೇ ಅನಾವರಣಗೊಳಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಮಹಾತ್ಮ ಗಾಂಧಿ ಮತ್ತು ಜೋಸ್ ರಿಜಾಲ್ ಇಬ್ಬರೂ ಶಾಂತಿ ಮತ್ತು ಅಹಿಂಸೆಯ ಶಕ್ತಿಯನ್ನು ನಂಬಿದ್ದರು. ನಿಮ್ಮ ರಾಷ್ಟ್ರೀಯ ನಾಯಕನ ಹೆಸರಿನ ನವದೆಹಲಿಯ ಅವೆನ್ಯೂ ನಮಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡುತ್ತಿದೆ" ಎಂದು ಕೋವಿಂದ್ ನುಡಿದರು.
Both Mahatma Gandhi and Jose Rizal believed in the power of peace and non-violence. The avenue in New Delhi named after Philippines’ national hero continues to inspire and motivate us
— President of India (@rashtrapatibhvn) October 20, 2019
ಪ್ರಸ್ತುತ ಐದು ದಿನಗಳ ಫಿಲಿಫೈನ್ಸ್ ಪ್ರವಾಸದಲ್ಲಿರುವ ರಾಷ್ಟ್ರಪತಿ ಕೋವಿಂದ್, ಭದ್ರತೆ, ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸಂಸ್ಕೃತಿಯನ್ನು ಒಳಗೊಂಡ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.