ಇಸ್ಲಾಮಾಬಾದ್: ಪಾಕಿಸ್ತಾನದ ಸರ್ಹಾದ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಸ್ಸಿಸಿಐ) ಇತ್ತೀಚೆಗೆ ಅಜರ್ಬೈಜಾನ್‌ನಲ್ಲಿ ತನ್ನ ಆರ್ಥಿಕ ಉತ್ತೇಜನಕ್ಕಾಗಿ ಹೂಡಿಕೆ ಶೃಂಗಸಭೆಯನ್ನು ಆಯೋಜಿಸಿತ್ತು, ಅಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಈ ಕಾರ್ಯಕ್ರಮದಲ್ಲಿ ಬೆಲ್ಲಿ ನೃತ್ಯಗಾರರು ಪ್ರದರ್ಶನ ಏರ್ಪಡಿಸಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
When General Doctrine Chief Economist tries to lure investors into the Pakistan Investment Promotion Conference in Baku, Azerbaijan with belly dancers.... pic.twitter.com/OUoV85wmnV
— Gul Bukhari (@GulBukhari) September 7, 2019
ಸೆಪ್ಟೆಂಬರ್ 4 ರಿಂದ 8 ರವರೆಗೆ ಬಾಕುವಿನಲ್ಲಿ ಖೈಬರ್ ಪಖ್ತುನ್ಖ್ವಾ ಹೂಡಿಕೆ ಅವಕಾಶಗಳ ಸಮಾವೇಶ ಎಂಬ ಶೀರ್ಷಿಕೆಯಲ್ಲಿ ಶೃಂಗಸಭೆಯನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಆಯೋಜಕರು ಬೆಲ್ಲಿ ಡ್ಯಾನ್ಸ್ ಪ್ರದರ್ಶನಕ್ಕೆ ಅವಕಾಶ ನೀಡಿದ್ದಾರೆ. ಈ ವಿಡಿಯೋವನ್ನು ಪಾಕಿಸ್ತಾನದ ಗುಲ್ ಬುಖಾರಿ ಎನ್ನುವ ಪತ್ರಕರ್ತರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ನಲ್ಲಿ ಅವರು ಬೆಲ್ಲಿ ನರ್ತಕಿಯರು ಹೂಡಿಕೆದಾರರನ್ನು ಡ್ಯಾನ್ಸ್ ಮೂಲಕ ಆಮಿಷ ಒಡ್ಡಲು ಪ್ರಯತ್ನಿಸಿದಾಗ ಎಂದು ಬರೆದುಕೊಂಡಿದ್ದಾರೆ. ಯಾವಾಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತೋ ಆಗ ಅವರು ತಕ್ಷಣ ಪ್ರತಿಕ್ರಿಯೆ ನೀಡಿ 'ನಯಾ ಪಾಕಿಸ್ತಾನದ ಮಾರ್ಗ' ಎಂದು ಬಣ್ಣಿಸಿದ್ದಾರೆ. ಇನ್ನೊಬ್ಬ ಟ್ವಿಟ್ಟರ್ ಬಳಕೆದಾರ ಪಾಕಿಸ್ತಾನ ಔಟ್ ಆಫ್ ಬಾಕ್ಸ್ ಮೂಲಕ ಆರ್ಥಿಕತೆಯನ್ನು ಸರಿ ಪಡಿಸಲು ಮುಂದಾಗಿದೆ ಎಂದು ಬರೆದುಕೊಂಡಿದ್ದಾರೆ.