ಇಸ್ಲಾಮಾಬಾದ್: Pakistan News Anchor Viral Video - ಒಂದೆಡೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Pakistan PM Imran Khan) ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ (Tabliban) ಆಡಳಿತವನ್ನು ನಿರಂತರವಾಗಿ ಸಮರ್ಥಿಸುತಿದ್ದು, ತಾಲಿಬಾನ್ ಗೆ ಸಮಯ ನೀಡಲು ಇಡೀ ವಿಶ್ವ ಸಮುದಾಯವನ್ನೇ ಕೋರುತ್ತಿದ್ದಾರೆ. ಇದೇ ಪಾಕಿಸ್ತಾನದ ಮಾಧ್ಯಮಗಳು (Pakistani Media) ಕೂಡ ತಾನೇನು ಇದಕ್ಕೆ ಹಿಂದೆ ಇಲ್ಲ ಎಂಬಂತೆ ವರ್ತಿಸಲಾರಂಭಿಸಿವೆ. ಇದಕ್ಕಾಗಿ ಮಾಧ್ಯಮಗಳು ತಾಲಿಬಾನ್ ಸರ್ಕಾರಕ್ಕಾಗಿ ಪ್ರಚಾರ ಯಂತ್ರದ ಕೆಲಸವನ್ನೂ ಆರಂಭಿಸಿದ್ದಾರೆ. ಶುಕ್ರವಾರ, ಪಾಕಿಸ್ತಾನಿ ಸುದ್ದಿ ವಾಹಿನಿಯೊಂದರ ( TV News Anchor Viral Video) ಸುದ್ದಿ ನಿರೂಪಕಿ ಈ ಹಿನ್ನೆಲೆ ತನ್ನ ಮಿತಿಯನ್ನೇ ದಾಟಿದ್ದಾಳೆ. ಹಿಜಾಬ್ ಅನ್ನು ಬೆಂಬಲಿಸಲು ಅವು ಲೈವ್ ಕ್ಯಾಮರಾ ಮುಂದೆ ತನ್ನ ಹಿಜಾಬ್ ಧರಿಸಿ ತೋರಿಸಿದ್ದು, ಅದನ್ನು ಧರಿಸುವುದರಿಂದ ಆಲೋಚನೆ ಬದಲಾಗುವುದಿಲ್ಲ ಎಂದು ಹೇಳಿದ್ದಾಳೆ.
Good on you girl for putting this man in his place. Unbelievable that a man of Pervez Hoodbhoy’s stature can make such outrageous comments against those wearing hijab. He needs treatment. #Pervezhoodbhoy pic.twitter.com/IpumFUGCYq
— Lubna U Rifat (@lubnaurifat) September 16, 2021
ಇದನ್ನೂ ಓದಿ-ಇಲ್ಲಿ ಟ್ರಕ್ ಚಾಲಕರೂ ಪಡೆಯುತ್ತಾರೆ 72 ಲಕ್ಷಕ್ಕಿಂತ ಹೆಚ್ಚು ಸಂಬಳ, 2 ದಿನ ರಜೆ ಮತ್ತು ಬೋನಸ್
ಏನಿದು ಸಂಪೂರ್ಣ ಪ್ರಕರಣ?
ಸಮಾ ಟಿವಿ ಚಾನೆಲ್ ಸುದ್ದಿ ನಿರೂಪಕಿಯಾ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ. ಈ ಲೈವ್ ಡಿಬೇಟ್ ನಲ್ಲಿ ಪಾಕಿಸ್ತಾನದ ಪ್ರೊಫೆಸರ್ ಪರವೇಜ್ ಹುಡಭೋಯ್ ಕೂಡ ಉಪಸ್ಥಿತರಿದ್ದರು. ಈ ಡಿಬೇಟ್ ನಲ್ಲಿ ಇದೀಗ ಪಾಕಿಸ್ತಾನದ ವಿವಿಗಳಲ್ಲಿಯೂ ಕೂಡ ಯುವತಿಯರಿಗೆ ಹಿಜಾಬ್ ಧರಿಸಲು ಹೇಳಲಾಗುತ್ತಿದೆ ಎನ್ನಲಾಗಿದೆ. ಈ ಉತ್ತರದಿಂದ ಸಿಡಿಮಿಡಿಗೊಂಡ ನಿರೂಪಕಿ, ಹಿಜಾಬ್ ಅನ್ನು ಬೆಂಬಲಿಸಲು ಆರಂಭಿಸಿದ್ದಾಳೆ. ಇದಾದ ಬಳಿಕ ಆಕೆ ಹಿಜಾಬ್ ಕೂಡ ಪ್ರದಶಿಸಿದ್ದಾಳೆ.
ಇದನ್ನೂ ಓದಿ- COVID-19 Vaccine: Sputnik Light ಸಿಂಗಲ್ ಡೋಸ್ ವ್ಯಾಕ್ಸಿನ್ ಗೆ ಭಾರತದಲ್ಲಿ ಮೂರನೇ ಹಂತದ ಟ್ರಯಲ್ ಗೆ ಅನುಮತಿ ನೀಡಿದ DCGI
ಪ್ರೊ. ಹುಡಭೋಯ್ ಹೇಳಿದ್ದಾದರೂ ಏನು?
ಕಾಯದೆ ಆಜಂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಪರವೇಜ್ ಹುಡ್ಬ್ಯೋಯ್, "ನಾನು 1979ರಿಂದ ಪಾಠ ಹೇಳಿಕೊಡಲು ಆರಂಭಿಸಿದ್ದೇನೆ. 47 ವರ್ಷಗಳ ಹಿಂದೆ ಓರ್ವ ಯುವತಿಯೂ ಕೂಡ ನಿಮಗೆ ಬುರ್ಖಾದಲ್ಲಿ ಕಾಣಿಸುತ್ತಿರಲಿಲ್ಲ . ಇಂದು ಯಾವುದೇ ಒಂದು ಯುವತಿ ಕ್ಲಾಸ್ ನಲ್ಲಿ ಕುಳಿತುಕೊಳ್ಳುತ್ತಲೇ ಮತ್ತು ಆಕೆ ಬುರ್ಕಾ ಧರಿಸುತ್ತಾಳೆ ಅವಳ ಚಟುವಟಿಕೆ ಭಾರಿ ಕಡಿಮೆಯಾಗುತ್ತದೆ. ಅಷ್ಟೇ ಯಾಕೆ ವಿದ್ಯಾರ್ಥಿನಿ ಕ್ಲಾಸ್ ನಲ್ಲಿ ಇದ್ದಾಳೆಯೋ ಅಥವಾ ಇಲ್ಲವೋ ಎಂಬುದು ತಿಳಿಯುವುದ ಇಲ್ಲ" ಎಂದಿದ್ದರು.
ಇದನ್ನೂ ಓದಿ-Viral News: ಸ್ಮಶಾನದಲ್ಲಿ ಅಸ್ಥಿಪಂಜರಗಳೊಂದಿಗೆ ಕುಣಿಯುತ್ತಿರುವ ಮಹಿಳೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.