ವಾಷಿಂಗ್ಟನ್: ಅಮೆರಿಕಾವು ಪಾಕಿಸ್ತಾನದೊಂದಿಗೆ ಹಣದ ಸಹಾಯವನ್ನು ಹೊರತುಪಡಿಸಿ ಉಳಿದೆಲ್ಲ ರೀತಿಯ ಆಯ್ಕೆಗಳನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದೆ.
ಇತ್ತೀಚಿಗೆ ಅಮೆರಿಕಾ ದೇಶವು ಪಾಕಿಸ್ತಾನವು ಭಯೋತ್ಪಾಧನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಫಲವಾದ ಹಿನ್ನಲೆಯಲ್ಲಿ 2 ಬಿಲಿಯನ್ ಡಾಲರ್ ಹಣ ಸಹಾಯವನ್ನು ಸ್ಥಗಿತಗೊಳಿಸಿದೆ.
ತಾಲಿಬಾನ್ ಮತ್ತು ಹಕ್ಕಾನಿ ನೆಟ್ವರ್ಕ್ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ಮತ್ತು ಅವರ ಸುರಕ್ಷಿತ ನೆಲೆಗಳನ್ನು ನಿರ್ಮೂಲನೆ ಮಾಡಲು ಪಾಕಿಸ್ತಾನ ವಿಫಲವಾದ ಹಿನ್ನಲೆಯಲ್ಲಿ ಯುಎಸ್ಡಿ 2 ಬಿಲಿಯನ್ ಭದ್ರತಾ ನೆರವನ್ನು ಸ್ಥಗಿತಗೊಳಿಸಿದೆ.
ಹೊಸ ವರ್ಷದ ದಿನದಂದು ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಭಯೋತ್ಪಾದನೆ ವಿಚಾರದ ಕುರಿತು ಮಾತನಾಡುತ್ತಾ ಪಾಕಿಸ್ತಾನವು ಇದುವರೆಗೆ ಅಮೆರಿಕಾಕ್ಕೆ ಸುಳ್ಳು ಮತ್ತು ವಂಚನೆಯನ್ನು ಬಿಟ್ಟು ಮತ್ತಿನ್ನೆನನ್ನು ನೀಡಿಲ್ಲ ಅಲ್ಲದೆ ಭಯೋತ್ಪಾದಕರಿಗೆ ಸುರಕ್ಷಿತ ಧಾಮವಾಗಿ ಮಾರ್ಪಟ್ಟಿದೆ. ಆ ಮೂಲಕ 15 ವರ್ಷಗಳಿಂದ 33 ಶತಕೋಟಿ ಡಾಲರ್ ನೆರವು ನೀಡಿದ್ದ ಅಮೇರಿಕಾದ ಡೊನಾಲ್ಡ್ ಟ್ರಂಪ್ ಇತ್ತೀಚಿಗೆ ಸ್ಥಗೀತಗೊಳಿಸಿದ್ದರು.