ಯಡಿಯೂರಪ್ಪನವರು ಆಮಿಷ ಒಡ್ಡಿರುವ ಆಡಿಯೋ ಬಿಡುಗಡೆಗೊಳಿಸಿದ ಕಾಂಗ್ರೆಸ್

     

Last Updated : May 19, 2018, 01:56 PM IST
ಯಡಿಯೂರಪ್ಪನವರು ಆಮಿಷ ಒಡ್ಡಿರುವ ಆಡಿಯೋ ಬಿಡುಗಡೆಗೊಳಿಸಿದ ಕಾಂಗ್ರೆಸ್ title=

ಬೆಂಗಳೂರು:  ಮುಖ್ಯಮಂತ್ರಿ ಯಡಿಯೂರಪ್ಪನವರು ಕಾಂಗ್ರೆಸ್ ಶಾಸಕ ಬಿ ಸಿ ಪಾಟೀಲ್ ಅವರಿಗೆ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋವೊಂದನ್ನ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ.ಬಿಡುಗಡೆ ಮಾಡಿರುವ  ಆಡಿಯೋದ ಸಂಭಾಷಣೆ ಇಂತಿದೆ 

ಬಿಎಸ್ ವೈ ಆಪ್ತ (ಬಿ.ಸಿ. ಪಾಟೀಲರಿಗೆ): ಸಾರ್ ಒಂದುನಿಮಿಷ ಸಾಹೇಬರು ಮಾತನಾಡುತ್ತಾರೆ
ಬಿಎಸ್ ವೈ: ಹಲೋ…ಹಲೋ..
ಬಿ.ಸಿ.ಪಾಟೀಲ್: ಅಣ್ಣಾ ಕಂಗ್ರಾಜುಲೇಶನ್ … ಹೇಳಿ… ನಮಸ್ಕಾರ...
ಬಿಎಸ್ ವೈ: ಹಲೋ… ಹಲೋ…ಎಲ್ಲಿದ್ದೀಯಪ್ಪಾ…?
ಬಿ.ಸಿ. ಪಾಟೀಲ್: ಅಣ್ಣಾ ನಾವು ಕೊಚ್ಚಿನ್ ಗೆ ಹೋಗುತ್ತಿದ್ದೇವೆ…. ಕೊಚ್ಚಿನ್ ಗೆ ಹೋಗುತ್ತಿದ್ದೇವೆ…ಬಸ್ ನಲ್ಲಿದ್ದೇನೆ.
ಬಿಎಸ್ ವೈ: ಹೋಗಬಾರದಿತ್ತು..! ಬಾರಯ್ಯ ನೀನು…ನಿನಗೇನು ಹೆಲ್ಪ್ ಬೇಕೋ ಮಾಡುತ್ತೇನೆ! ಮಂತ್ರಿಯಾಗುವಂತೆ ಬಾ… ನಿನಗೇನು ಬೇಕೋ ಅದನ್ನು ಮಾಡುತ್ತೇನೆ. 
ಬಿ.ಸಿ. ಪಾಟೀಲ್: ಆಯಿತು ಅಣ್ಣಾ…ನೀವು ಮೊದಲೇ ಒಂದೂ ಚೂರು ಹೇಳಿದ್ದರೇ…
ಬಿ.ಎಸ್. ವೈ: ಟೈಮ್ ಕರೆಕ್ಟಾಗಿ ತಾನೇ ಹೇಳಬೇಕು!
ಬಿ.ಸಿ. ಪಾಟೀಲ್: ಹೌದು…
ಬಿ.ಎಸ್. ವೈ: ನೀನು ಹೋಗಬೇಡ… ಬಂದು ಬಿಡು…
ಬಿ.ಸಿ. ಪಾಟೀಲ್: ಬಸ್ ನಲ್ಲಿ ಇದೀವಿ ಈಗ..
ಬಿ.ಎಸ್. ವೈ: ಮನೆವ್ರು… ಏನಾದರು ಒಂದು ಕಾರಣ ಹೇಳಿಕೊಂಡು ವಾಪಾಸ್ ಬಾ!
ಬಿ.ಸಿ. ಪಾಟೀಲ್: ನನ್ನ ಪೊಸಿಶನ್ ಏನ್  ಅಂತಾ?
ಬಿ.ಎಸ್. ವೈ: ಯು ವಿಲ್ ಬಿಕಂ ದ   ಮಿನಿಸ್ಟರ್ ದಟ್ಸ್ ಆಲ್!
ಬಿ.ಸಿ. ಪಾಟೀಲ್: ಓ.ಕೆ. ಓ.ಕೆ. ಅಣ್ಣಾ… ನನ್ನ ಜತೆ ಇಬ್ಬರು ಮೂವರು ಇದ್ದಾರೆ!
ಬಿ.ಎಸ್. ವೈ: ನನ್ನ ಮೇಲೆ ವಿಶ್ವಾಸವಿದೆ ತಾನೇ…? ಕರೆದು ಕೊಂಡು ಬಾ…!
ಬಿ.ಸಿ. ಪಾಟೀಲ್ : ಖಂಡಿತ… ಖಂಡಿತ…!
ಬಿ.ಎಸ್. ವೈ: ಹಾಗಾದರೆ ಹೋಗ ಕೂಡದು ನೀನು ವಾಪಾಸ್ ಬಾ…!
ಬಿ.ಸಿ. ಪಾಟೀಲ್ : ಆಯ್ತಣ್ಣಾ…ಆಯ್ತಣ್ಣಾ…!
ಬಿ.ಎಸ್. ವೈ: ಒಂದು ಸಾರ್ತಿ ನೀನು ಕೊಚ್ಚಿನ್ ಗೆ ಹೋದರೆ ನೀನು ಸಿಗಲ್ಲ. ಅದು ಸಿಗದೇ ಇರುವ ವಿಷಯ
ಬಿ.ಸಿ. ಪಾಟೀಲ್: ಆಯ್ತಣ್ಣಾ… ಆಯ್ತಣ್ಣಾ…
ಬಿ.ಎಸ್. ವೈ: ಈಗೇನು ಮಾಡ್ತೀಯಾ… ಹೇಳು!
ಬಿ.ಸಿ. ಪಾಟೀಲ್: ತಾವು ಈಗ ಹೇಳಿದ್ದೀರಿ… ನಾನು ಐದು ನಿಮಿಷದಲ್ಲಿ ಹೇಳ್ತೀನೀ ಅಣ್ಣಾ…!
ಬಿ.ಎಸ್. ವೈ: ಶ್ರೀರಾಮುಲುಗೆ ಫೋನ್ ಮಾಡಿ ಹೇಳು…!
ಬಿ.ಸಿ. ಪಾಟೀಲ್: ಆಯ್ತಣ್ಣಾ… ಆಯ್ತಣ್ಣಾ….!!

Trending News