ನವದೆಹಲಿ: ಆಧಾರ್ ಕಾರ್ಡ್ ಪ್ರತಿಯೊಬ್ಬರಿಗೂ ಅಗತ್ಯವಾದ ದಾಖಲೆಯಾಗಿದೆ. ಸರ್ಕಾರಿ ಯೋಜನೆಗಳಿಂದ ಹಿಡಿದು ಹಣಕಾಸು ಸೇವೆಗಳವರೆಗೆ ಇದೀಗ ಎಲ್ಲೆಡೆಯೂ ಆಧಾರ್ ಕಾರ್ಡ್ ಅಗತ್ಯವಿದೆ. ನಮ್ಮ ಬ್ಯಾಂಕ್ ಖಾತೆ, ವಿದ್ಯುತ್ ಬಿಲ್ಗಳು, ಗ್ಯಾಸ್ ಸಂಪರ್ಕಗಳು ಹೀಗೆ ಅನೇಕವುಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ. ಹೀಗಾಗಿ ನಾವು ಆಧಾರ್ ಕಾರ್ಡ್ ನಿಂದ ಸಿಗುವ ಸೌಲಭ್ಯಗಳನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ.
ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ(UIDAI)ದ ಹೊಸ ಮಾರ್ಗಸೂಚಿಗಳ ಪ್ರಕಾರ, ಆಧಾರ್ ಕಾರ್ಡ್ ಡೌನ್ಲೋಡ್ ಮಾಡಲು ಇನ್ನು ಮುಂದೆ ನೋಂದಾಯಿತ ಮೊಬೈಲ್ ಸಂಖ್ಯೆ(Mobile Number) ಹೊಂದಿರುವುದು ಕಡ್ಡಾಯವಲ್ಲ. ಹೌದು, ಈ ಹಿಂದೆ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಲು ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿಕೊಳ್ಳುವುದು ಕಡ್ಡಾಯವಾಗಿತ್ತು. ಆದರೆ ಈಗ ಅದು ಅಗತ್ಯವಿಲ್ಲ. ಯಾರೂ ಬೇಕಾದರೂ, ಯಾವಾಗ ಬೇಕಾದರೂ ಅತ್ಯಂತ ಸುಲಭವಾಗಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಕೇವಲ 24 ಗಂಟೆಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗೆ ಸುಮಾರು 1 ಲಕ್ಷ ಬುಕಿಂಗ್ ಬೇಡಿಕೆ..!
ಯುಐಡಿಎಐ ವೆಬ್ಸೈಟ್ uidai.gov.in ಗೆ ಲಾಗಿನ್ ಆಗುವ ಮೂಲಕ 12 ಅಂಕಿಯ ಸಂಖ್ಯೆಯನ್ನು ಹೊಂದಿರುವ ವಿಶಿಷ್ಟ ಗುರುತಿನ ಆಧಾರ್ ಕಾರ್ಡ್(Aadhaar Card) ಅನ್ನು ಸುಲಭವಾಗಿ ಡೌನ್ಲೋಡ್ ಮಾಡಬಹುದಾಗಿದೆ. ಇತ್ತೀಚೆಗೆ ಈ ಬಗ್ಗೆ ಟ್ವೀಟ್ ಮಾಡಿದ್ದ ಯುಐಡಿಎಐ ತಮ್ಮ ಸೇವೆಗಳನ್ನು ಮತ್ತಷ್ಟು ಸುಲಭಗೊಳಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿತ್ತು. ಯಾರೇ ಆಗಲಿ ತಮ್ಮ ಸ್ಮಾರ್ಟ್ಫೋನ್(SmartPhone)ನಲ್ಲಿ ಅತ್ಯಂತ ಸುಲಭವಾಗಿ ಡೌನ್ಲೋಡ್ ಆಧಾರ್, ಸ್ಟೇಟಸ್ ಚೆಕ್, ಆರ್ಡರ್ ಆಧಾರ್ ರಿಪ್ರಿಂಟ್ ಮತ್ತು ಆಧಾರ್ ಕೇಂದ್ರವನ್ನು ಪತ್ತೆ ಮಾಡುವುದು ಸೇರಿ ಒಟ್ಟು 35 ಸೇವೆಗಳನ್ನು ಪಡೆದುಕೊಳ್ಳಬಹುದೆಂದು ತಿಳಿಸಿತ್ತು.
ಇದನ್ನೂ ಓದಿ: Amazonನೊಂದಿಗೆ ದಿನಕ್ಕೆ ಕೇವಲ 4 ಗಂಟೆ ಕೆಲಸ ಮಾಡಿ ತಿಂಗಳಿಗೆ 60 ಸಾವಿರ ಸಂಪಾದಿಸಿ, ಹೇಗೆ ಅಂತಿರಾ?
ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ ಇಲ್ಲಿದೆ:
- ಮೊದಲು ಯುಐಡಿಎಐ ವೆಬ್ಸೈಟ್ಗೆ ಭೇಟಿ ನೀಡಿ.
- ಮುಖಪುಟದಲ್ಲಿ ‘ನನ್ನ ಆಧಾರ್’ ಆಯ್ಕೆಯಡಿ ‘ಆರ್ಡರ್ ಆಧಾರ್ ರಿಪ್ರಿಂಟ್’ ಆಪ್ಶನ್ ಕ್ಲಿಕ್ ಮಾಡಿ.
- 12 ಅಂಕಿಯ ಆಧಾರ್ ಸಂಖ್ಯೆ ಅಥವಾ 16 ಅಂಕಿಯ ವಿಐಡಿ ಸಂಖ್ಯೆಯನ್ನು ಭರ್ತಿ ಮಾಡಿ.
- ಭದ್ರತಾ ಕೋಡ್ ಸೆಟ್ ಮಾಡಿ.
- ಈಗ ‘My Mobile number is not registered’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ಆಧಾರ್ ಸಂಖ್ಯೆಯಲ್ಲಿ ನೋಂದಾಯಿಸದ ಪರ್ಯಾಯ ಮೊಬೈಲ್ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಈಗ ಕೇಳಲಾಗುತ್ತದೆ.
- ಪರ್ಯಾಯ ಮೊಬೈಲ್ ಸಂಖ್ಯೆಯ ವಿವರಗಳನ್ನು ನಮೂದಿಸಿ.
-‘ಸೆಂಡ್ ಒಟಿಪಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
-‘ನಿಯಮಗಳು ಮತ್ತು ಷರತ್ತುಗಳು’ ಆಯ್ಕೆಯ ಪಟ್ಟಿಯನ್ನು ಪರಿಶೀಲಿಸಿ.
- ‘ಸಲ್ಲಿಸು’ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಮ್ಮ ಒಟಿಪಿ ಒದಗಿಸಿ.
- ಈಗ ಕಂಪ್ಯೂಟರ್ ಪರದೆಯಲ್ಲಿ ‘ಪ್ರಿವ್ಯೂವ್ ಆಧಾರ್ ಲೆಟರ್’ ಕಾಣಿಸುತ್ತದೆ. .
- ಇ-ಆಧಾರ್ ಡೌನ್ಲೋಡ್ ಮಾಡಲು ಹಣ ಪಾವತಿಸಿ.
- ಈಗ ನೀವು ಇ-ಆಧಾರ್ನ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.