Adani stocks : ಅದಾನಿ ಷೇರುಗಳಿಂದ 2 ದಿನದಲ್ಲಿ ₹3,100 ಕೋಟಿ ಲಾಭ ಪಡೆದ ಎನ್‌ಆರ್‌ಐ!

ಸ್ಟಾರ್ ಎನ್‌ಆರ್‌ಐ ಹೂಡಿಕೆದಾರ ರಾಜೀವ್ ಜೈನ್ ಒಡೆತನದ GQG ಪಾಲುದಾರರ 15,446 ಕೋಟಿ ರೂ.ಗಳ ಬೋಲ್ಡ್ ಬೆಟ್ ಅದಾನಿ ಷೇರುಗಳಿಂದ ಬರೀ ಎರಡು ದಿನಗಳಲ್ಲಿ ಶೇ.20% ರಷ್ಟು 3,100 ಕೋಟಿ ರೂ. ಲಾಭ ಗಳಿಸಿದ್ದಾರೆ.

Written by - Channabasava A Kashinakunti | Last Updated : Mar 5, 2023, 11:11 PM IST
  • ಸ್ಟಾರ್ ಎನ್‌ಆರ್‌ಐ ಹೂಡಿಕೆದಾರ ರಾಜೀವ್ ಜೈನ್
  • ಅದಾನಿ ಷೇರುಗಳಿಂದ ಬರೀ 2 ದಿನಗಳಲ್ಲಿ ಶೇ.20% ರಷ್ಟುಲಾಭ
  • ಜೈನ್ ಹೂಡಿಕೆಯ ಮಾರುಕಟ್ಟೆ ಮೌಲ್ಯವು 18,548 ಕೋಟಿ ರೂ.
Adani stocks : ಅದಾನಿ ಷೇರುಗಳಿಂದ 2 ದಿನದಲ್ಲಿ ₹3,100 ಕೋಟಿ ಲಾಭ ಪಡೆದ ಎನ್‌ಆರ್‌ಐ! title=

ನವದೆಹಲಿ : ಸ್ಟಾರ್ ಎನ್‌ಆರ್‌ಐ ಹೂಡಿಕೆದಾರ ರಾಜೀವ್ ಜೈನ್ ಒಡೆತನದ GQG ಪಾಲುದಾರರ 15,446 ಕೋಟಿ ರೂ.ಗಳ ಬೋಲ್ಡ್ ಬೆಟ್ ಅದಾನಿ ಷೇರುಗಳಿಂದ ಬರೀ ಎರಡು ದಿನಗಳಲ್ಲಿ ಶೇ.20% ರಷ್ಟು 3,100 ಕೋಟಿ ರೂ. ಲಾಭ ಗಳಿಸಿದ್ದಾರೆ.

ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ, ಅದಾನಿ ಗ್ರೀನ್ ಎನರ್ಜಿ, ಮತ್ತು ಅದಾನಿ ಟ್ರಾನ್ಸ್‌ಮಿಷನ್ - 4 ಅದಾನಿ ಷೇರುಗಳಲ್ಲಿ ಜೈನ್ ಹೂಡಿಕೆಯ ಮಾರುಕಟ್ಟೆ ಮೌಲ್ಯವು 18,548 ಕೋಟಿ ರೂ.ಗೆ ಏರಿದೆ. ಇದು 3,102 ಕೋಟಿ ರೂ.ಆಗಿದೆ. 

ಇದನ್ನೂ ಓದಿ : LIC ಈ ಪಾಲಿಸಿಯಲ್ಲಿ 833 ರೂ. ಹೂಡಿಕೆ ಮಾಡಿ, 1 ಕೋಟಿ ಲಾಭ ಪಡೆಯಿರಿ!

ಹಿಂಡೆನ್‌ಬರ್ಗ್ ರಿಸರ್ಚ್‌ನ ಸ್ಪೋಟಕ ವರದಿಯಿಂದ ನೆಲ ಕಚ್ಚಿದ್ದ ಅದಾನಿ ಸ್ಟಾಕ್‌ಗಳಲ್ಲಿ ಈಗ ಭಾರಿ ಏರಿಕೆ ಕಂಡಿದೆ, $92 ಶತಕೋಟಿ ನಿಧಿ GQG ಪಾಲುದಾರರು ಈ ಕಂಪನಿಗಳಿಗೆ ದೀರ್ಘಾವಧಿಯ ಬೆಳವಣಿಗೆಯ ನಿರೀಕ್ಷೆಗಳು ಗಣನೀಯವಾಗಿವೆ ಎಂದು ಬಿಲಿಯನೇರ್ ಗೌತಮ್ ಅದಾನಿ ಒಡೆತನದ ನಾಲ್ಕು ಕಂಪನಿಗಳಲ್ಲಿ ಷೇರುಗಳನ್ನು ಖರೀದಿಸಿದ್ದಾರೆ.

ಬ್ಲಾಕ್ ಡೀಲ್‌ನಲ್ಲಿ ಜೈನ್ ಗುರುವಾರ 1,410.86 ರೂ.ಗೆ ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳನ್ನು ಖರೀದಿಸಿದರು. ಅಂದಿನಿಂದ, ಸ್ಟಾಕ್ ಬೆಲೆಯು 33% ರಷ್ಟು ಏರಿಕೆಯಾಗಿದೆ, ಇದು ನಿಫ್ಟಿ ಸ್ಟಾಕ್ನಲ್ಲಿ 1,813 ಕೋಟಿ ರೂ. ಇದೆ.

ಅದೇ ರೀತಿ ಅದಾನಿ ಪೋರ್ಟ್ಸ್ ನಿಂದ 596.2 ರೂ.ಗೆ, ಅದಾನಿ ಗ್ರೀನ್ ಎನರ್ಜಿಯನ್ನು 504.6 ರೂ.ಗೆ ಮತ್ತು ಅದಾನಿ ಟ್ರಾನ್ಸ್‌ಮಿಷನ್ ಅನ್ನು 668.4 ರೂ.ಗೆ ಖರೀದಿಸಿದ್ದಾರೆ.

ಆದಾಗ್ಯೂ, ಆಸ್ಟ್ರೇಲಿಯಾದಲ್ಲಿ ಪಟ್ಟಿ ಮಾಡಲಾದ GQG ಪಾಲುದಾರರ ಷೇರುಗಳು, ಹಿಂಡೆನ್‌ಬರ್ಗ್‌ನಿಂದ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಅಕೌಂಟಿಂಗ್ ವಂಚನೆಯ ಆರೋಪ ಹೊತ್ತಿರುವ ಅದಾನಿ ಕಂಪನಿಗಳಲ್ಲಿನ ಹೂಡಿಕೆಯ ನಂತರ ಶುಕ್ರವಾರ ಶೇ.3 ರಸ್ತು ನಷ್ಟು ಕಡಿಮೆಯಾಗಿದೆ.

ಒಪ್ಪಂದದಲ್ಲಿ, ವಿಮಾನ ನಿಲ್ದಾಣದ ಸಂಘಟಿತ ಕಂಪನಿಯ ಪ್ರವರ್ತಕ ಘಟಕದ ಎಸ್‌ಬಿ ಅದಾನಿ ಫ್ಯಾಮಿಲಿ ಟ್ರಸ್ಟ್ ತನ್ನ ಪಾಲಿನ ಒಂದು ಭಾಗವನ್ನು ನಗದನ್ನು ಉತ್ಪಾದಿಸಲು ಮಾರಾಟ ಮಾಡಿತು, ಇದು ತನ್ನ ಚೇತರಿಕೆಗೆ ಪುಷ್ಟಿ ನೀಡಿದಂತಿದೆ. 

ಜೈನ್ ಹೇಳುವ ಪ್ರಕಾರ, ಸ್ಟಾಕ್ ಕುಸಿತವು ಆಕರ್ಷಕ ಬೆಲೆಯಲ್ಲಿ "ಅದ್ಭುತ ಆಸ್ತಿಗಳನ್ನು" ಸ್ನ್ಯಾಪ್ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.

ಅದಾನಿ ಕಂಪನಿಗಳ ಒಡೆತನದ ವಿಮಾನ ನಿಲ್ದಾಣ, ಬಂದರು ಮತ್ತು ಇಂಧನ ಸ್ವತ್ತುಗಳು "ಅದ್ಭುತ," ಮತ್ತು ಉತ್ತಮ ಬೆಲೆಗೆ ಲಭ್ಯವಿದೆ. ಆಸ್ಟ್ರೇಲಿಯನ್ ಫೈನಾನ್ಶಿಯಲ್ ರಿವ್ಯೂಗೆ ತಮ್ಮ ತಂಡವು ಐದು ವರ್ಷಗಳಿಂದ ಅದಾನಿ ಕಂಪನಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ಲೆಕ್ಕಾಚಾರದಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

"ಹಿಂಡೆನ್‌ಬರ್ಗ್ ಅವರ ದೃಷ್ಟಿಕೋನವನ್ನು ನಾವು ಒಪ್ಪುವುದಿಲ್ಲ, ಆದರೆ ಅದು ಮಾರುಕಟ್ಟೆಯನ್ನು ಹಾಳು ಮಾಡುತ್ತದೆ" ಎಂದು ಜೈನ್ ಹೇಳಿದ್ದಾರೆ.

ಇದನ್ನೂ ಓದಿ : Gold Hallmarking : ಚಿನ್ನಾಭರಣ ಪ್ರಿಯರ ಗಮನಕ್ಕೆ : ಖರೀದಿ ನಿಯಮದಲ್ಲಿ ಬದಲಾವಣೆ, ಸರ್ಕಾರದಿಂದ ಹೊಸ ಆದೇಶ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News