ಎಟಿಎಫ್ ದರದಲ್ಲಿ ದಾಖಲೆ ಹೆಚ್ಚಳ; ವಿಮಾನ ಪ್ರಯಾಣ ಇನ್ನು ಬಲು ದುಬಾರಿ

ವಿಮಾನ ಇಂಧನ ಬೆಲೆಯಲ್ಲಿ ದಾಖಲೆಯ ಏರಿಕೆಯ ನಂತರ, ವಿಮಾನ ಯಾನ ದರಗಳು ಬಲು ದುಬಾರಿಯಾಗಲಿವೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಸ್ಪೈಸ್‌ಜೆಟ್ ಅಧ್ಯಕ್ಷ  ಅಜಯ್ ಸಿಂಗ್, ನಿರ್ವಹಣಾ ವೆಚ್ಚವನ್ನು ನಿಭಾಯಿಸಲು   ವಿಮಾನ ದರವನ್ನು ಶೇಕಡಾ 10 ರಿಂದ 15 ರಷ್ಟು ಹೆಚ್ಚಿಸುವುದು ಅಗತ್ಯ ಎಂದಿದ್ದಾರೆ. 

Written by - Ranjitha R K | Last Updated : Jun 16, 2022, 03:13 PM IST
  • ಬಲು ದುಬಾರಿಯಾಗಲಿದೆ ವಿಮಾನಯಾನ
  • 15 ಪ್ರತಿಶತದಷ್ಟು ದರ ಹೆಚ್ಚಳ
  • ಎಟಿಎಫ್ ಬೆಲೆ 120 ಪ್ರತಿಶತಕ್ಕಿಂತ ಹೆಚ್ಚು
ಎಟಿಎಫ್ ದರದಲ್ಲಿ ದಾಖಲೆ ಹೆಚ್ಚಳ; ವಿಮಾನ ಪ್ರಯಾಣ ಇನ್ನು ಬಲು ದುಬಾರಿ title=
Air Fare Price hike (file photo)

ಬೆಂಗಳೂರು : ನಿರಂತರವಾಗಿ ಏರುತ್ತಿರುವ ವಿಮಾನ ಇಂಧನ ವೆಚ್ಚ ಮತ್ತು ರೂಪಾಯಿಯ ಅಪಮೌಲ್ಯದೊಂದಿಗೆ, ವಿಮಾನ ಪ್ರಯಾಣ ದರಗಳು ದುಬಾರಿಯಾಗಲಿವೆ. ಪ್ರಸ್ತುತ, ವಿಮಾನ ಯಾನ ದರವನ್ನು ಹೆಚ್ಚಿಸುವುದನ್ನು  ಬಿಟ್ಟರೆ ದೇಶೀಯ ವಿಮಾನಯಾನ ಸಂಸ್ಥೆಗಳ ಬಳಿ ಯಾವುದೇ ಪರ್ಯಾಯ ಮಾರ್ಗ ಇಲ್ಲ ಎನ್ನಲಾಗಿದೆ.  

15 ಪ್ರತಿಶತದಷ್ಟು ದರ ಹೆಚ್ಚಳ : 
ನಿರ್ವಹಣಾ ವೆಚ್ಚವನ್ನು ನಿಭಾಯಿಸಲು ಕನಿಷ್ಠ 10 ರಿಂದ 15 ಪ್ರತಿಶತದಷ್ಟು ವಿಮಾನ ದರವನ್ನು ಹೆಚ್ಚಿಸುವುದು ಅಗತ್ಯ ಎಂದು ಸ್ಪೈಸ್‌ಜೆಟ್ ಏರ್‌ಲೈನ್ ಅಧ್ಯಕ್ಷ ಮತ್ತು ಎಂಡಿ ಅಜಯ್ ಸಿಂಗ್ ಹೇಳಿದ್ದಾರೆ. ಕರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ 2020 ರಲ್ಲಿ ವಿಧಿಸಲಾದ ಎರಡು ತಿಂಗಳ ಲಾಕ್‌ಡೌನ್ ನಂತರ, ಮೇ 25, 2020 ರಂದು ವಿಮಾನ ಸೇವೆಗಳನ್ನು ಪುನರಾ ರಂಭಿಸಿದ ನಂತರ, ಸರ್ಕಾರವು ಹಾರಾಟದ ಅವಧಿಯನ್ನು ಅವಲಂಬಿಸಿ ದೇಶೀಯ ವಿಮಾನ ದರದ ಮಿತಿಯನ್ನು ನಿಗದಿಪಡಿಸಿದೆ.

ಇದನ್ನೂ ಓದಿ : ಕರ್ನಾಟಕ ಸೇರಿದಂತೆ ಈ ರಾಜ್ಯಗಳಲ್ಲಿ ಎದುರಾಗಿದೆ ಪೆಟ್ರೋಲ್ ಡಿಸೇಲ್ ಕೊರತೆ..!

ಎಟಿಎಫ್ ಬೆಲೆ 120 ಪ್ರತಿಶತಕ್ಕಿಂತ ಹೆಚ್ಚು  : 
ಇದಲ್ಲದೆ, ಈ ವರ್ಷ ಫೆಬ್ರವರಿ 24 ರಂದು ಪ್ರಾರಂಭವಾದ ರಷ್ಯಾ ಮತ್ತು ಉಕ್ರೇನ್ ಯುದ್ಧದ ನಂತರ ಇಂಧನ ಬೆಲೆಗಳು ನಿರಂತರವಾಗಿ ಹೆಚ್ಚಳ ಕಂಡಿವೆ. 'ಜೂನ್ 2021 ರಿಂದ, ವಿಮಾನ ಇಂಧನದ ಬೆಲೆ 120 ಪ್ರತಿಶತಕ್ಕಿಂತ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳಬೇಕು ಎಂದು ಅಜಯ್ ಸಿಂಗ್  ಹೇಳಿದ್ದಾರೆ. ಡಾಲರ್ ಎದುರು ಭಾರತೀಯ ಕರೆನ್ಸಿ ದುರ್ಬಲಗೊಂಡಿರುವುದು ಕೂಡಾ ವಿಮಾನಯಾನ ಸಂಸ್ಥೆಗಳ ಮೇಲೆ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ.

ದಾಖಲೆಯ ಮಟ್ಟಕ್ಕೆ ತಲುಪಿದ ವಿಮಾನ ಇಂಧನ ಬೆಲೆ :
ಎಟಿಎಫ್ ಬೆಲೆ ಒಂದೇ ಬಾರಿಗೆ 16% ದಷ್ಟು ಹೆಚ್ಚಾಗಿದೆ. ಈ ಹೆಚ್ಚಳದೊಂದಿಗೆ ಎಟಿಎಫ್ ಬೆಲೆಗಳು ದಾಖಲೆಯ ಮಟ್ಟ ತಲುಪಿವೆ. ಎಟಿಎಫ್ ದರಗಳು ಪ್ರತಿ ಕಿಲೋಲೀಟರ್‌ಗೆ ದರಗಳು ಪ್ರತಿ ಕಿಲೋಲೀಟರ್‌ಗೆ 19757.13 ಏರಿಕೆಯೊಂದಿಗೆ 141232.87ರೂ.ಗೆ ತಲುಪಿದೆ. ಏವಿಯೇಷನ್ ​​ಟರ್ಬೈನ್ ಇಂಧನ ಬೆಲೆಗಳನ್ನು ಪ್ರತಿ ತಿಂಗಳ 1 ಮತ್ತು 16 ರಂದು ನವೀಕರಿಸಲಾಗುತ್ತದೆ. ಜೂನ್ 1 ರಿಂದ, ಎಟಿಎಫ್ ಬೆಲೆಗಳಲ್ಲಿ 16.2 ಪ್ರತಿಶತದಷ್ಟು ಜಿಗಿತ ಕಂಡುಬಂದಿದೆ.

ಇದನ್ನೂ ಓದಿ : Gold Price Today : ಭರ್ಜರಿ ಇಳಿಕೆ ಕಂಡ ಬಂಗಾರದ ಬೆಲೆ, ಬೆಳ್ಳಿ ಬೆಲೆ ಕೊಂಚ ಏರಿಕೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News