ಬೆಂಗಳೂರು: ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳಿಂದ ಹಿರಿಯ ನಾಗರಿಕರಿಗೆ ಅನೇಕ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದೀಗ ಆಗಸ್ಟ್ ತಿಂಗಳಿನಲ್ಲಿ ಹಿರಿಯ ನಾಗರಿಕರಿಗೆ ಮತ್ತೊಂದು ಗುಡ್ ನ್ಯೂಸ್ ಬಂದಿದೆ. ಅನೇಕ ಬ್ಯಾಂಕ್ಗಳು ಆಗಸ್ಟ್ನಲ್ಲಿ ಬಡ್ಡಿದರಗಳನ್ನು ಪರಿಷ್ಕರಿಸಿವೆ (Business News In Kannada). ಇದಾದ ಬಳಿಕ ಹಿರಿಯ ನಾಗರಿಕರು 9% ಬಡ್ಡಿಯ ಲಾಭವನ್ನು ಪಡೆಯಲಿದ್ದಾರೆ. ಯಾವ ಬ್ಯಾಂಕ್ ನಿಮಗೆ ಯಾವ ದರದಲ್ಲಿ ಬಡ್ಡಿಯನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಆಕ್ಸಿಸ್ ಬ್ಯಾಂಕ್ ಎಫ್ಡಿ ಬಡ್ಡಿದರಗಳು
ಆಕ್ಸಿಸ್ ಬ್ಯಾಂಕ್ 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಠೇವಣಿಗಳ ಮೇಲೆ 3.5% ರಿಂದ 8.05% ದರದಲ್ಲಿ ಹಿರಿಯ ನಾಗರಿಕರಿಗೆ FD ಗಳ ಮೇಲೆ ಬಡ್ಡಿಯನ್ನು ನೀಡುತ್ತಿದೆ. ಈ ದರಗಳು 14 ಆಗಸ್ಟ್ 2023 ರಿಂದ ಜಾರಿಗೆ ಬಂದಿವೆ. ಸಾಮಾನ್ಯ ಗ್ರಾಹಕರಿಗೆ, ಬ್ಯಾಂಕ್ 3.5% ರಿಂದ 7.3% ದರದಲ್ಲಿ FD ಗಳ ಮೇಲೆ ಬಡ್ಡಿಯನ್ನು ನೀಡುತ್ತಿದೆ. ಈ ಬಡ್ಡಿ ದರಗಳು ರೂ 2 ಕೋಟಿಗಿಂತ ಕಡಿಮೆ ಇರುವ ಎಫ್ಡಿಗಳಿಗೆ ಅನ್ವಯಿಸುತ್ತವೆ.
ಫೆಡರಲ್ ಬ್ಯಾಂಕ್ FD ದರಗಳು
ಫೆಡರಲ್ ಬ್ಯಾಂಕ್ ಪ್ರಕಾರ, ಹಿರಿಯ ನಾಗರಿಕರು 13 ತಿಂಗಳ ಅವಧಿಯ FD ಗಳ ಮೇಲೆ 8.07% ದರದಲ್ಲಿ ಬಡ್ಡಿಯನ್ನು ಪಡೆಯುತ್ತಿದ್ದಾರೆ. ಇದೇ ವೇಳೆ, ಸಾಮಾನ್ಯ ನಾಗರಿಕರು 7.30% ದರದಲ್ಲಿ ಬಡ್ಡಿಯ ಲಾಭವನ್ನು ಪಡೆಯುತ್ತಿದ್ದಾರೆ. ಈ ದರಗಳು 15 ಆಗಸ್ಟ್ 2023 ರಿಂದ ಜಾರಿಗೆ ಬರಲಿವೆ.
ಇದನ್ನೂ ಓದಿ-ಸ್ಟೇಟ್ ಬ್ಯಾಂಕ್ ಈ ವಿಶೇಷ ಯೋಜನೆಯಲ್ಲಿ ಗ್ರಾಹಕರಿಗೆ ನೀಡುತ್ತಿದೆ ಜಬರ್ದಸ್ತ್ ಲಾಭ, ನೀವು ಹೂಡಿಕೆ ಮಾಡಿದ್ರಾ?
ಕೆನರಾ ಬ್ಯಾಂಕ್ FD ದರಗಳು
ಕೆನರಾ ಬ್ಯಾಂಕ್ ಹಿರಿಯ ನಾಗರಿಕರಿಗೆ ಬ್ಯಾಂಕ್ FD ಗಳ ಮೇಲೆ 4% ರಿಂದ 7.75% ಬಡ್ಡಿಯನ್ನು ನೀಡುತ್ತಿದೆ. ಈ ದರಗಳು ಆಗಸ್ಟ್ 12, 2023 ರಿಂದ ಜಾರಿಗೆ ಬಂದಿವೆ . ಇದಲ್ಲದೆ, ಬ್ಯಾಂಕ್ 444 ದಿನಗಳ ಅವಧಿಗೆ 5.35% ರಿಂದ 7.90% ರಷ್ಟು ಬಡ್ಡಿಯನ್ನು ನೀಡುತ್ತಿದೆ. ಇದಲ್ಲದೆ, ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 4% ರಿಂದ 7.25% ವರೆಗಿನ ಬಡ್ಡಿಯ ಲಾಭವನ್ನು ನೀಡುತ್ತಿದೆ.
ಇದನ್ನೂ ಓದಿ-ಶೀಘ್ರದಲ್ಲಿಯೇ ಸರ್ಕಾರಿ ನೌಕರರಿಗೆ ಸಿಗಲಿದೆ ಈ ಗುಡ್ ನ್ಯೂಸ್, ತುಟ್ಟಿಭತ್ಯೆಯಲ್ಲಿ ಬಂಬಾಟ್ ಹೆಚ್ಚಳ ಸಾಧ್ಯತೆ!
ಸೂರ್ಯೋದಯ SFB
ಸೂರ್ಯೋದಯ SFB ಹಿರಿಯ ನಾಗರಿಕರಿಗೆ 4.50% ರಿಂದ 9.10% ವರೆಗಿನ ಬಡ್ಡಿದರದ ಲಾಭವನ್ನು 7 ದಿನಗಳಿಂದ 10 ವರ್ಷಗಳ ಅವಧಿಯ ಮುಕ್ತಾಯದೊಂದಿಗೆ FD ಎಫ್ಡಿಗಳ ಮೇಲೆ ನೀಡುತ್ತಿದೆ. ಇದೇ ವೇಳೆ, ಈ ಬ್ಯಾಂಕ್ ಸಾಮಾನ್ಯ ಜನರಿಗೆ 4% ರಿಂದ 8.60% ವರೆಗಿನ ಬಡ್ಡಿಯ ಲಾಭವನ್ನು ನೀಡುತ್ತಿದೆ. ಈ ದರಗಳು ಆಗಸ್ಟ್ 7 ರಿಂದ ಜಾರಿಗೆ ಬಂದಿವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.