Car Export: ವಿದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿವೆ ಭಾರತದಲ್ಲಿ ತಯಾರಾದ ಈ 10 ಕಾರುಗಳು

ಬ್ರೆಝಾ ನಂತರ ಕಿಯಾ ಸೆಲ್ಟೋಸ್ 2ನೇ ಸ್ಥಾನದಲ್ಲಿದ್ದು, ಆಗಸ್ಟ್ 2021ರಲ್ಲಿ 2,626 ಯುನಿಟ್‌ಗಳಿಗೆ ಹೋಲಿಸಿದರೆ ಕಳೆದ ತಿಂಗಳು 4,827 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಇದು ಅದರ ರಫ್ತಿನಲ್ಲಿ ವರ್ಷದಿಂದ ವರ್ಷಕ್ಕೆ ಶೇ.83.82ರಷ್ಟು ಬೆಳವಣಿಗೆ ತೋರಿಸಿದೆ.

Written by - Puttaraj K Alur | Last Updated : Sep 25, 2022, 07:43 AM IST
  • ವಿದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಭಾರತದಲ್ಲಿ ತಯಾರಿಸಿದ ಕಾರುಗಳು
  • ರಫ್ತು ಮಾಡಲಾದ ಟಾಪ್-10 ಕಾರುಗಳ ಪೈಕಿ ಮಾರುತಿ ಸುಜುಕಿಯ 4 ಮಾದರಿಗಳಿವೆ
  • ವಿದೇಶಕ್ಕೆ ಹೆಚ್ಚು ರಫ್ತು ಆದ ಕಾರುಗಳ ಪಟ್ಟಿಯಲ್ಲಿ ಬ್ರೆಝಾಗೆ ಅಗ್ರಸ್ಥಾನ
Car Export: ವಿದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿವೆ ಭಾರತದಲ್ಲಿ ತಯಾರಾದ ಈ 10 ಕಾರುಗಳು title=
Cars Export In August 2022

ನವದೆಹಲಿ: ಆಗಸ್ಟ್ 2022ರಲ್ಲಿ ಭಾರತದಿಂದ ಕಾರು ರಫ್ತುಗಳ ಪ್ರಮಾಣ ಶೇ.6.91(YoY)ರಷ್ಟು ಅಂದರೆ 54,733 ಯುನಿಟ್‌ಗಳಿಗೆ ಏರಿಕೆಯಾಗಿದೆ. ಇದು ಆಗಸ್ಟ್ 2021ರಲ್ಲಿ ರಫ್ತು ಮಾಡಿದ 51,196 ಯುನಿಟ್‌ಗಳಿಗಿಂತ ಹೆಚ್ಚಾಗಿದೆ. ಅದೇ ರೀತಿ ಜುಲೈ 2022ರಲ್ಲಿ 54,073 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಇದಕ್ಕೆ ಹೋಲಿಸಿದರೆ ಆಗಸ್ಟ್ 2022ರಲ್ಲಿ ರಫ್ತುಗಳಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ.

ರಫ್ತು ಮಾಡಲಾದ ಟಾಪ್-10 ಕಾರುಗಳ ಪೈಕಿ ಮಾರುತಿ ಸುಜುಕಿಯ 4 ಮಾದರಿಗಳಿವೆ. ಬ್ರೆಝಾ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದು, ಆಗಸ್ಟ್ 2022ರಲ್ಲಿ ಇದರ ಒಟ್ಟು 6,267 ಯೂನಿಟ್‌ಗಳನ್ನು ರಫ್ತು ಮಾಡಲಾಗಿದೆ. ಆಗಸ್ಟ್ 2021ಕ್ಕೆ ಹೋಲಿಸಿದರೆ ಇದು 2,452 ಯುನಿಟ್‌ಗಳು ಅಂದರೆ ಶೇ.155.59ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: 7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ : ಬಡ್ತಿಗೆ ಸಂಬಂಧಿಸಿದಂತೆ ಹೊಸ ನಿಯಮ!

ಕಿಯಾ ಸೆಲ್ಟೋಸ್ ಬ್ರೆಝಾ ನಂತರ 2ನೇ ಸ್ಥಾನದಲ್ಲಿದ್ದು, ಆಗಸ್ಟ್ 2021ರಲ್ಲಿ ಇದರ ಒಟ್ಟು 2,626 ಯುನಿಟ್‌ಗಳು ಮಾರಾಟವಾಗಿತ್ತು. ಇದಕ್ಕೆ  ಹೋಲಿಸಿದರೆ ಕಳೆದ ತಿಂಗಳು ಈ ಕಾರುಗಳ 4,827 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಇದು ರಫ್ತಿನಲ್ಲಿ ವರ್ಷದಿಂದ ವರ್ಷಕ್ಕೆ ಶೇ.83.82ರಷ್ಟು ಬೆಳವಣಿಗೆ ತೋರಿಸಿದೆ. ಇವುಗಳ ಹೊರತಾಗಿ ನಿಸ್ಸಾನ್ ಸನ್ನಿ ಸಹ ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿದೆ. ಭಾರತದಿಂದ ಅತಿಹೆಚ್ಚು ರಫ್ತು ಮಾಡಲಾದ ಕಾರುಗಳಲ್ಲಿ ಇದು 3ನೇ ಸ್ಥಾನದಲ್ಲಿದೆ. ಆಗಸ್ಟ್ 2022ರಲ್ಲಿ ನಿಸ್ಸಾನ್ ಸನ್ನಿಯ 4,646 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಇದಕ್ಕೆ ಹೋಲಿಸಿದರೆ ಆಗಸ್ಟ್ 2021ರಲ್ಲಿ 510 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಇದರಲ್ಲಿ ಶೇ.810.98ರಷ್ಟು ಏರಿಕೆಯಾಗಿದೆ.

ಹುಂಡೈ ವೆರ್ನಾ 4ನೇ ಸ್ಥಾನದಲ್ಲಿದ್ದು, ಆಗಸ್ಟ್ 2022ರಲ್ಲಿ ಇದರ 4,094 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಇದಕ್ಕೆ ಹೋಲಿಸಿದರೆ ಆಗಸ್ಟ್ 2021ರಲ್ಲಿ ಇದರ 3,761 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಅಂದರೆ ಇದರ ರಫ್ತುಗಳು ವಾರ್ಷಿಕ ಆಧಾರದ ಮೇಲೆ ಶೇ.8.85ರಷ್ಟು ಹೆಚ್ಚಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್ 5ನೇ ಸ್ಥಾನದಲ್ಲಿದ್ದು, ಇದರ ರಫ್ತು ಆಗಸ್ಟ್ 2021ರಲ್ಲಿ 3,051 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಇದಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ.2.03ರಷ್ಟು ಅಂದರೆ 3,113 ಯುನಿಟ್‌ಗಳಿಗೂ ಹೆಚ್ಚು ರಫ್ತು ಮಾಡಲಾಗಿದೆ. ಇದರ ನಂತರ ಹ್ಯುಂಡೈ ಗ್ರಾಂಡ್ i10 6ನೇ ಸ್ಥಾನದಲ್ಲಿದ್ದು, ಆಗಸ್ಟ್ 2022ರಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ 2,896 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ.

ಇದನ್ನೂ ಓದಿ: UPA ಸರ್ಕಾರದ ಅವಧಿಯಲ್ಲಿ ಭಾರತದ ಆರ್ಥಿಕತೆಗೆ ಬ್ರೇಕ್ ಬಿದ್ದಿತ್ತು, ಇನ್ಫೋಸಿಸ್ ಸಹಸಂಸ್ಥಾಪಕರು ಹೇಳಿದ್ದೇನು?

ಮಾರುತಿ ಬಲೆನೊ 7ನೇ ಸ್ಥಾನದಲ್ಲಿದ್ದು, ಇದರ ರಫ್ತುಗಳು ವರ್ಷದಿಂದ ವರ್ಷಕ್ಕೆ ಶೇ.28.63ರಷ್ಟು ಕಡಿಮೆಯಾಗಿದೆ. ಇದು ಆಗಸ್ಟ್ 2021ರಲ್ಲಿ 4,000 ಯುನಿಟ್‌ಗಳಿಂದ 2,855 ಯುನಿಟ್‌ಗಳಿಗೆ ಇಳಿದಿದೆ. 2022ರ ಜುಲೈನಲ್ಲಿ ಕಂಪನಿಯು 2,144 ಬಲೆನೊ ಯುನಿಟ್‌ಗಳನ್ನು ರಫ್ತು ಮಾಡಿರುವುದರಿಂದ ಇದು ತಿಂಗಳ ಆಧಾರದ ಮೇಲೆ ಕಡಿಮೆಯಾಗಿದೆ. ಕಿಯಾ ಸಾನೆಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು, ಆಗಸ್ಟ್ 2022ರಲ್ಲಿ,2,715 ಯುನಿಟ್ ಸೋನೆಟ್ ಅನ್ನು ರಫ್ತು ಮಾಡಲಾಗಿದೆ. ನಂತರ ಮಾರುತಿ ಡಿಜೈರ್ 2,406 ಯುನಿಟ್‌ಗಳ ರಫ್ತಿನೊಂದಿಗೆ 9ನೇ ಸ್ಥಾನದಲ್ಲಿದ್ದರೆ, ಹ್ಯುಂಡೈ ಕ್ರೆಟಾ 1,994 ಯುನಿಟ್ ರಫ್ತುಗಳೊಂದಿಗೆ 10ನೇ ಸ್ಥಾನದಲ್ಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News