Bank-Post Office ವಹಿವಾಟಿನ ನಿಯಮಗಳಲ್ಲಿ ಬದಲಾವಣೆ, ನಿಮಗೂ ತಿಳಿದಿರಲಿ

Cash Deposit Rule: ಒಂದು ವೇಳೆ ನೀವೂ ಕೂಡ ದೊಡ್ಡ ದೊಡ್ಡ ವಹಿವಾಟುಗಳನ್ನು ನಡೆಸುತ್ತಿದ್ದರೆ, ಮೊದಲು ಈ ಸುದ್ದಿಯನ್ನೊಮ್ಮೆ ಓದಿ. ಏಕೆಂದರೆ, ಸರ್ಕಾರ ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ವಹಿವಾಟುಗಳ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಈ ಹೊಸ ಬದಲಾವಣೆ ಯಾವುವು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : May 13, 2022, 10:14 AM IST
  • ಪೋಸ್ಟ್ ಆಫೀಸ್-ಬ್ಯಾಂಕ್ ವಹಿವಾಟಿನ ನಿಯಮಗಳಲ್ಲಿ ಬದಲಾವಣೆ
  • ಹೊಸ ನಿಯಮ ಮೇ 26 ರಿಂದ ಜಾರಿಗೆ ಬರಲಿದೆ
  • ಈಗಾಗಲೇ ಸರ್ಕಾರ ಈ ನಿಯಮದ ಕುರಿತು ನೋಟಿಫೈ ಮಾಡಿದೆ
Bank-Post Office ವಹಿವಾಟಿನ ನಿಯಮಗಳಲ್ಲಿ ಬದಲಾವಣೆ, ನಿಮಗೂ ತಿಳಿದಿರಲಿ title=
Cash Deposit Rule

Cash Deposit New Rule: ಒಂದು ವೇಳೆ ನೀವೂ ಕೂಡ ದೊಡ್ಡ ದೊಡ್ಡ ವಹಿವಾಟುಗಳನ್ನು ನಡೆಸುತ್ತಿದ್ದರೆ, ಮೊದಲು ಈ ಸುದ್ದಿಯನ್ನೊಮ್ಮೆ ಓದಿ. ಏಕೆಂದರೆ, ಸರ್ಕಾರ ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ವಹಿವಾಟುಗಳ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಹೊಸ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಯಾವುದೇ ಒಂದು ಹಣಕಾಸು ವರ್ಷದಲ್ಲಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ 20 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ, ಪ್ಯಾನ್ ಮತ್ತು ಆಧಾರ್ ನೀಡುವುದು ಕಡ್ಡಾಯವಾಗಿರಲಿದೆ.

ಆದಾಯ ತೆರಿಗೆ (15ನೇ ತಿದ್ದುಪಡಿ) ನಿಯಮ, 2022ರ ಅಡಿ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸೆಸ್ (ಸಿಬಿಡಿಟಿ) ಈ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ಹೊಸ ನಿಯಮಗಳು ಮೇ 26, 2022 ರಿಂದ ಜಾರಿಗೆ ಬರಲಿವೆ. ಆದರೆ, ಈ ನಿಯಮವನ್ನು ಈಗಾಗಲೇ ನೋಟಿಫೈ ಮಾಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಈ ವಹಿವಾಟುಗಳಿಗೆ ಪ್ಯಾನ್-ಆಧಾರ್ ಅನಿವಾರ್ಯ
>> ಹೊಸ ನಿಯಮದ ಪ್ರಕಾರ, ಯಾವುದೇ ಓರ್ವ ವ್ಯಕ್ತಿ ಬ್ಯಾಂಕಿಂಗ್ ಕಂಪನಿ ಅಥವಾ ಕಾರ್ಪೊರೇಟಿವ್ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಒಂದು ಹಣಕಾಸು ವರ್ಷದಲ್ಲಿ, ಒಂದು ಅಥವಾ ಹೆಚ್ಚಿನ ಖಾತೆಗಳಲ್ಲಿ 20 ಲಕ್ಷ ರೂಪಾಯಿ ಹಣವನ್ನು ಠೇವಣಿ ಮಾಡಿದರೆ, ಅವರು ಪ್ಯಾನ್-ಆಧಾರ್ ಅನ್ನು ಸಲ್ಲಿಸಬೇಕಾಗಲಿದೆ.

>> ಒಂದು ಹಣಕಾಸು ವರ್ಷದಲ್ಲಿ ಬ್ಯಾಂಕಿಂಗ್ ಕಂಪನಿ ಅಥವಾ ಸಹಕಾರಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿರುವ ಯಾವುದೇ ಒಂದು ಅಥವಾ ಹೆಚ್ಚಿನ ಖಾತೆಗಳಿಂದ ರೂ 20 ಲಕ್ಷ ಹಿಂಪಡೆಯಲು ಸಹ ಪ್ಯಾನ್-ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿರಲಿದೆ.

>> ನೀವು ಬ್ಯಾಂಕಿಂಗ್ ಕಂಪನಿ, ಸಹಕಾರಿ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಚಾಲ್ತಿ ಖಾತೆ ಅಥವಾ ನಗದು ಕ್ರೆಡಿಟ್ ಖಾತೆಯನ್ನು ತೆರೆದರೂ ಪ್ಯಾನ್-ಆಧಾರ್ ನೀಡುವುದು ಅನಿವಾರ್ಯವಾಗಿರಲಿದೆ.

>> ಯಾರಾದರೂ ಚಾಲ್ತಿ ಖಾತೆಯನ್ನು ತೆರೆದರೆ, ಅದಕ್ಕೂ ಪ್ಯಾನ್ ಕಾರ್ಡ್ ಸಲ್ಲಿಕೆ ಕಡ್ಡಾಯವಾಗಿರಲಿದೆ. 

ಇದನ್ನೂ ಓದಿ-Gold Price Today: ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, ಬೆಳ್ಳಿ ಕೂಡಾ ದುಬಾರಿ

>> ಯಾರೊಬ್ಬರ ಬ್ಯಾಂಕ್ ಖಾತೆಯು ಈಗಾಗಲೇ ಪ್ಯಾನ್‌ನೊಂದಿಗೆ ಲಿಂಕ್ ಆಗಿದ್ದರೆ, ಅವರು ಹೆಚ್ಚಿನ ವಹಿವಾಟುಗಳಿಗಾಗಿ ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡಬೇಕಾಗಲಿದೆ.

ಇದನ್ನೂ ಓದಿ-ಗ್ರಾಹಕರಿಗೆ ಕೊಂಚ ರಿಲೀಫ್‌: ಇಲ್ಲಿದೆ ಇಂದಿನ ತರಕಾರಿ ಬೆಲೆ

ಹಣಕಾಸಿನ ವಹಿವಾಟಿನ ಮೇಲೆ ಸರ್ಕಾರದ ತೀವ್ರ ನಿಗಾ
ಈ ಹೆಜ್ಜೆಯನ್ನಿಡುವ ಮೂಲಕ ಸರ್ಕಾರ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಟ್ಯಾಕ್ಸ್ ಪರಧಿಗೆ ತರಲು ಯತ್ನಿಸುತ್ತಿದೆ. ದೊಡ್ಡ ಪ್ರಮಾಣದ ಹಣಕಾಸಿನ ವಹಿವಾಟು ನಡೆಸುವ ಕೆಲವರ ಬಳಿ ಪ್ಯಾನ್ ಕಾರ್ಡ್ ಕೂಡ ಇಲ್ಲ ಹಾಗೂ ಅವರು ಐಟಿಆರ್ ಕೂಡ ಸಲ್ಲಿಸುವುದಿಲ್ಲ. ಹೀಗಿರುವಾಗ ಇಂತಹ ವಹಿವಾಟುಗಳ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಸುಲಭವಾಗಿ ವಹಿವಾಟುಗಳನ್ನು ಗುರುತಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News