ಇಂದಿನಿಂದ ಮೋದಿ ಸರ್ಕಾರ ಆರಂಭಿಸಿದೆ ಈ ಅದ್ಬುತ ಯೋಜನೆ, ತಿಂಗಳಿಗೆ 10,000 ಗಳಿಕೆ ಮಾಡುವ ಸುವರ್ಣಾವಕಾಶ!

Central Government Scheme: ಇಂದಿನಿಂದ ನಿಮ್ಮ ಬಳಿ ಕೋಟ್ಯಾಂತರ ಹಣಗಳಿಕೆ ಮಾಡುವ ಸುವರ್ಣಾವಕಾಶ ಸಿಕ್ಕಿದೆ. ಹೌದು, ಇಂದಿಂದಿಂದ ಮೋದಿ ಸರ್ಕಾರ 'ಮೇರಾ ಬಿಲ್ ಮೇರಾ ಅಧಿಕಾರ' ಹೆಸರಿನ ಯೋಜನೆಯನ್ನು ಆರಂಭಿಸಿದ್ದು, ಈ ಯೋಜನೆಯ ಅಡಿ ನಿಮಗೆ ಸರ್ಕಾರದಿಂದ ಕೋಟ್ಯಾಂತರ ರೂ. ಬಹುಮಾನ ನೀಡಲಾಗುತ್ತಿದೆ (Business News In Kannada).   

Written by - Nitin Tabib | Last Updated : Sep 1, 2023, 06:33 PM IST
  • ಯೋಜನೆಯ ಕುರಿತು ಮಾತನಾಡಿರುವ ಮಲ್ಹೋತ್ರಾ, 'ಜಿಎಸ್‌ಟಿಯಿಂದ ನಾಗರಿಕರು, ಗ್ರಾಹಕರು ಮತ್ತು ಸರ್ಕಾರಗಳಿಗೆ ಲಾಭವಾಗಿದೆ.
  • ಆದಾಯವು ಪ್ರತಿ ತಿಂಗಳು ಹೆಚ್ಚುತ್ತಿದೆ ಮತ್ತು ಜಿಎಸ್‌ಟಿ ಅಡಿಯಲ್ಲಿ ತೆರಿಗೆ ದರಗಳು ಕಡಿಮೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿವೆ.
  • ಇಂದು ಸರಾಸರಿ ಜಿಎಸ್‌ಟಿ ದರವು ಶೇ. 12ರಷ್ಟಿದೆ, ಆದರೆ ಅದನ್ನು ಪರಿಚಯಿಸುವ ಸಮಯದಲ್ಲಿ ಅದು ಶೇ. 15 ರಷ್ಟು ಇರಬಹುದೆಂದು ನಿರೀಕ್ಷಿಸಲಾಗಿತ್ತು ಎಂದು ಅವರು ಹೇಳಿದ್ದಾರೆ
ಇಂದಿನಿಂದ ಮೋದಿ ಸರ್ಕಾರ ಆರಂಭಿಸಿದೆ ಈ ಅದ್ಬುತ ಯೋಜನೆ, ತಿಂಗಳಿಗೆ 10,000 ಗಳಿಕೆ ಮಾಡುವ ಸುವರ್ಣಾವಕಾಶ! title=

ನವದೆಹಲಿ: ಕೇಂದ್ರ ಸರ್ಕಾರದಿಂದ ಒಂದು ಮಹತ್ವದ ಯೋಜನೆಯನ್ನು ಪ್ರಾರಂಭಿಸಲಾಗಿದೆ, ಇದರಲ್ಲಿ ನಿಮಗೆ ಕೋಟ್ಯಂತರ ರೂಪಾಯಿ ಗೆಲ್ಲುವ ಅವಕಾಶವಿದೆ. ಈ ಯೋಜನೆಯ ಹೆಸರು 'ಮೇರಾ ಬಿಲ್, ಮೇರಾ ಅಧಿಕಾರ'. ಇಂದು ಸರ್ಕಾರವು 6 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆಯನ್ನು ಆರಂಭಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಶಸ್ತಿ ಮೊತ್ತಕ್ಕಾಗಿ 30 ಕೋಟಿ ರೂ.ಗಳ ನಿಧಿಯನ್ನು ಸರ್ಕಾರ ಸಿದ್ಧಪಡಿಸಿದೆ.

50 ಸಾವಿರಕ್ಕೂ ಹೆಚ್ಚು ಮಂದಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ
ಈ ಕುರಿತು ಮಾತನಾಡಿರುವ ಹರ್ಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ, ಈ ಯೋಜನೆಗಾಗಿ ಮೊಬೈಲ್ ಆ್ಯಪ್ ಅನ್ನು ಇದುವರೆಗೆ 50,000 ಕ್ಕೂ ಹೆಚ್ಚು ಜನರು ಡೌನ್‌ಲೋಡ್ ಮಾಡಿದ್ದಾರೆ ಎಂದಿದ್ದಾರೆ.

ಲಕ್ಕಿ ಡ್ರಾ ಮೂಲಕ ಆಯ್ಕೆ
ಆರು ರಾಜ್ಯಗಳಲ್ಲಿ ಪ್ರಾಯೋಗಿಕ ಯೋಜನೆಯಾಗಿ 'ಮೇರಾ ಬಿಲ್, ಮೇರಾ ಅಧಿಕಾರ್' ಜಿಎಸ್‌ಟಿ ಲಕ್ಕಿ ಡ್ರಾ ಆರಂಭಿಸಲಾಗುತ್ತಿದ್ದು, ಬಹುಮಾನದ ಮೊತ್ತದಲ್ಲಿ ಕೇಂದ್ರ ಮತ್ತು ರಾಜ್ಯಗಳು ಸಮಾನವಾಗಿ ಕೊಡುಗೆ ನೀಡಲಿವೆ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ನಾಗರಿಕರು ಮತ್ತು ಗ್ರಾಹಕರು ಪ್ರಯೋಜನ ಪಡೆಯಲಿದ್ದಾರೆ
ಯೋಜನೆಯ ಕುರಿತು ಮಾತನಾಡಿರುವ ಮಲ್ಹೋತ್ರಾ, 'ಜಿಎಸ್‌ಟಿಯಿಂದ ನಾಗರಿಕರು, ಗ್ರಾಹಕರು ಮತ್ತು ಸರ್ಕಾರಗಳಿಗೆ ಲಾಭವಾಗಿದೆ. ಆದಾಯವು ಪ್ರತಿ ತಿಂಗಳು ಹೆಚ್ಚುತ್ತಿದೆ ಮತ್ತು ಜಿಎಸ್‌ಟಿ ಅಡಿಯಲ್ಲಿ ತೆರಿಗೆ ದರಗಳು ಕಡಿಮೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿವೆ. ಇಂದು ಸರಾಸರಿ ಜಿಎಸ್‌ಟಿ ದರವು ಶೇ. 12ರಷ್ಟಿದೆ, ಆದರೆ ಅದನ್ನು ಪರಿಚಯಿಸುವ ಸಮಯದಲ್ಲಿ ಅದು ಶೇ. 15 ರಷ್ಟು ಇರಬಹುದೆಂದು ನಿರೀಕ್ಷಿಸಲಾಗಿತ್ತು ಎಂದು ಅವರು ಹೇಳಿದ್ದಾರೆ

ಈ ರಾಜ್ಯಗಳಲ್ಲಿ ಯೋಜನೆ ಆರಂಭಿಸಲಾಗಿದೆ 
ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರತಿ ತಿಂಗಳು ಸರಾಸರಿ ಜಿಎಸ್‌ಟಿ ಸಂಗ್ರಹ 1.60 ಲಕ್ಷ ಕೋಟಿ ರೂ.ಗಲಾಗಿದೆ. ಅಸ್ಸಾಂ, ಗುಜರಾತ್, ಹರಿಯಾಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ದಾದ್ರಾ ನಗರ್ ಹವೇಲಿ ಮತ್ತು ದಮನ್-ದಿಯುಗಳಲ್ಲಿ 'ಮೇರಾ ಬಿಲ್, ಮೇರಾ ಅಧಿಕಾರ್' ಯೋಜನೆಯನ್ನು ಸೆಪ್ಟೆಂಬರ್ 1 ರಿಂದ ಪ್ರಾಯೋಗಿಕವಾಗಿ ಸರ್ಕಾರವು ಶುಕ್ರವಾರ ಪ್ರಾರಂಭಿಸಿದೆ.

ಇದನ್ನೂ ಓದಿ-ಈ ಚಿನ್ನದಂತಹ ಬೇಸಾಯ ಆರಂಭಿಸಿ ನೀವೂ ಕೂಡ ಕೋಟ್ಯಾಧಿಪತಿಯಾಗಬಹುದು!

ಪ್ರತಿ ತಿಂಗಳು 810 ಲಕ್ಕಿ ಡ್ರಾಗಳು ನಡೆಯಲಿವೆ.
ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 810 ಲಕ್ಕಿ ಡ್ರಾಗಳು ನಡೆಯಲಿವೆ ಎಂಬುದು ಇಲ್ಲಿ ಗಮನಾರ್ಹ. ಪ್ರತಿ ತ್ರೈಮಾಸಿಕದಲ್ಲಿ ಎರಡು ಬಂಪರ್ ಲಕ್ಕಿ ಡ್ರಾಗಳು ಇರಲಿವೆ.

ಇದನ್ನೂ ಓದಿ-ಪತ್ನಿಯ ಹೆಸರಿನಲ್ಲಿ ಈ ಖಾತೆ ತೆರೆದು ತಿಂಗಳಿಗೆ ₹47,066 ಸಂಪಾದಿಸಿ, ಜೊತೆಗೆ ಒಟ್ಟಿಗೆ 1,05,89,741 ಪಡೆಯಿರಿ!

800 ಜನರಿಗೆ 10,000 ರೂ
ಗ್ರಾಹಕರು ತಮ್ಮ ಜಿಎಸ್‌ಟಿ ಬಿಲ್‌ಗಳನ್ನು ಅಪ್ಲಿಕೇಶನ್ ಮೂಲಕ ಅಪ್‌ಲೋಡ್ ಮಾಡುವ ಮೂಲಕ ಈ ಯೋಜನೆಗೆ ಶಾಮೀಲಾಗಬಹುದು ಮತ್ತು ಲಕ್ಕಿ ಡ್ರಾ ಮೂಲಕ ಬಹುಮಾನಗಳನ್ನು ಗೆಲ್ಲಬಹುದು. ಮಾಸಿಕ ಡ್ರಾದಲ್ಲಿ 800 ಜನರಿಗೆ 10 ಸಾವಿರ ರೂ. ಹಾಗೂ 10 ಜನರಿಗೆ 10 ಲಕ್ಷ ರೂ. ಬಹುಮಾನ ನೀಡಲಾಗುವುದು. ಪ್ರತಿ ತ್ರೈಮಾಸಿಕದಲ್ಲಿ 1 ಕೋಟಿ ರೂ.ಗಳ ಬಂಪರ್ ಡ್ರಾ ಆಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News