Good News: ಬ್ಯಾಂಕ್ ಗ್ರಾಹಕರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

Cooperative Banks Update: ಸಹಕಾರಿ ಬ್ಯಾಂಕ್ ಗಳಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿರುವ ಕೇಂದ್ರ ಸಹಕಾರ ಸಚಿವ ಅಮಿತ್ ಶಾ, ಸಹಕಾರಿ ಬ್ಯಾಂಕ್ ಗಳ ಗಾರ್ಹಕರಿಗೆ ಸರ್ಕಾರದ ಕಯಾನ ಯೋಜನೆಗಳ ಪ್ರಯೋಜನಗಳನ್ನು ತಲುಪಿಸಲು ಶೀಘ್ರದಲ್ಲಿಯೇ ಸಹಕಾರಿ ಬ್ಯಾಂಕ್ ಗಳನ್ನು ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ನೊಂದಿಗೆ ಸಂಪರ್ಕಿಸಲಾಗುವುದು ಎಂದು ಘೋಷಿಸಿದ್ದಾರೆ. ಅಂದರೆ, ಇದೀಗ ಸರ್ಕಾರದ ಎಲ್ಲಾ ಕಲ್ಯಾಣ ಯೊಜನೆಗಳ ಲಾಭ ಸಹಕಾರಿ ಬ್ಯಾಂಕ್ ಗ್ರಾಹಕರ ಖಾತೆಗಳಿಗೂ ಕೂಡ ನೇರ ವರ್ಗಾವಣೆಯಾಗಲಿದೆ.  

Written by - Nitin Tabib | Last Updated : Jul 1, 2022, 04:42 PM IST
  • ಇನ್ಮುಂದೆ ಸಹಕಾರಿ ಬ್ಯಾಂಕ್ ನ ಗ್ರಾಹಕರಿಗೂ ಕೂಡ ಸರ್ಕಾರದ ಎಲ್ಲಾ ಕಲ್ಯಾಣ ಯೋಜನೆಗಳ ಲಾಭ ಸಿಗಲಿದೆ.
  • ಇದಕ್ಕಾಗಿ, ಸಹಕಾರಿ ಬ್ಯಾಂಕ್‌ಗಳನ್ನು ನೇರ ಬ್ಯಾಂಕ್ ವರ್ಗಾವಣೆ (ಡಿಬಿಟಿ) ಯೊಂದಿಗೆ ಲಿಂಕ್ ಮಾಡಲಾಗುತ್ತಿದೆ.
Good News: ಬ್ಯಾಂಕ್ ಗ್ರಾಹಕರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ title=
Amit Shah Gives Good News For Bank Costumers

Cooperative Banks Update: ಇನ್ಮುಂದೆ ಸಹಕಾರಿ ಬ್ಯಾಂಕ್ ನ ಗ್ರಾಹಕರಿಗೂ ಕೂಡ ಸರ್ಕಾರದ ಎಲ್ಲಾ ಕಲ್ಯಾಣ ಯೋಜನೆಗಳ ಲಾಭ ಸಿಗಲಿದೆ. ಇದಕ್ಕಾಗಿ, ಸಹಕಾರಿ ಬ್ಯಾಂಕ್‌ಗಳನ್ನು ನೇರ ಬ್ಯಾಂಕ್ ವರ್ಗಾವಣೆ (ಡಿಬಿಟಿ) ಯೊಂದಿಗೆ ಲಿಂಕ್ ಮಾಡಲಾಗುತ್ತಿದೆ. ಈ ಕುರಿತು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಈ ವಿಷಯವನ್ನು ತಿಳಿಯಪಡಿಸಿದ್ದಾರೆ. ಪ್ರಸ್ತುತ, ಸರ್ಕಾರದ 52 ಸಚಿವಾಲಯಗಳು ನಡೆಸುತ್ತಿರುವ 300 ಯೋಜನೆಗಳ ಲಾಭವನ್ನು ಫಲಾನುಭವಿಗಳಿಗೆ ಡಿಬಿಟಿ ಮೂಲಕ ರವಾನಿಸಲಾಗುತ್ತಿದೆ, ಅಂದರೆ, ಈಗ ಈ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಸಹಕಾರಿ ಬ್ಯಾಂಕ್‌ಗಳ ಗ್ರಾಹಕರು ಪಡೆಯಲಿದ್ದಾರೆ.

ಮಹತ್ವದ ಮಾಹಿತಿ ನೀಡಿದ ಅಮಿತ್ ಶಾ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಂದು ಮೊದಲಿಗಿಂತ ಹೆಚ್ಚು ಸುಧಾರಣೆಯಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಇದರಿಂದಾಗಿ ದೇಶದ ನಾಗರಿಕರು ಬ್ಯಾಂಕಿಂಗ್ ಸೇವೆಯ ಲಾಭ ಪಡೆಯುತ್ತಿದ್ದಾರೆ. ಇದಲ್ಲದೇ ಜನ್ ಧನ್ ಯೋಜನೆಯಿಂದಾಗಿ ಹೊಸದಾಗಿ 45 ಕೋಟಿ ಜನರ ಬ್ಯಾಂಕ್ ಖಾತೆ ತೆರೆಯಲಾಗಿದೆ. ಇದರಲ್ಲಿ 32 ಕೋಟಿ ಜನರು ರುಪೇ ಡೆಬಿಟ್ ಕಾರ್ಡ್‌ನ ಪ್ರಯೋಜನವನ್ನೂ ಪಡೆಯುತ್ತಿದ್ದಾರೆ.ಇದೆಲ್ಲವೂ ಪ್ರಧಾನಿ ಮೋದಿಯವರ 'ಸಹಕಾರದಿಂದ ಸಮೃದ್ಧಿಯ ಸಂಕಲ್ಪ' ದಿಂದ ಸಂಭವಿಸಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

'ದೇಶದ ಏಳಿಗೆ ಮತ್ತು ಆರ್ಥಿಕ ಉನ್ನತಿಯಲ್ಲಿ ಸಹಕಾರಿ ಕ್ಷೇತ್ರ ಪ್ರಮುಖ ಪಾತ್ರ ವಹಿಸಲಿದೆ. ಪ್ರಧಾನಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ತೆರೆಯಲಾದ ಕೋಟ್ಯಾಂತರ ಹೊಸ ಖಾತೆಗಳ ಡಿಜಿಟಲ್ ವಹಿವಾಟು ಒಂದು ಟ್ರಿಲಿಯನ್ ಡಾಲರ್‌ಗಳನ್ನು ದಾಟಿದೆ. 2017-18ನೇ ಸಾಲಿನ ಡಿಜಿಟಲ್ ವಹಿವಾಟಿಗೆ ಹೋಲಿಸಿದರೆ, ಅದರಲ್ಲಿ  50 ಪಟ್ಟು ಹೆಚ್ಚಳವಾಗಿದೆ. ಡಿಬಿಟಿಯೊಂದಿಗೆ ಸಹಕಾರಿ ಬ್ಯಾಂಕ್‌ಗಳು ಸೇರ್ಪಡೆಗೊಳ್ಳುವುದರಿಂದ ನಾಗರಿಕರೊಂದಿಗೆ ಸಂಪರ್ಕದಲ್ಲಿ ಹೆಚ್ಚಳವಾಗಿದೆ ಮತ್ತು ಸಹಕಾರಿ ಕ್ಷೇತ್ರವು ಬಲಗೊಳ್ಳಲಿದೆ' ಎಂದು ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ಡಿಎ ಯಲ್ಲಿ ಹೆಚ್ಚಳ.! ವೇತನದಲ್ಲೂ ಭರ್ಜರಿ ಏರಿಕೆ

ಕೃಷಿ ಬ್ಯಾಂಕ್ ಗಳ ಅದ್ಭುತ ಪ್ರದರ್ಶನ
ಗುಜರಾತ್ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಂದರೆ ಕೃಷಿ ಬ್ಯಾಂಕ್ ತನ್ನ 71ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಮಾತನಾಡಿರುವ ಕೇಂದ್ರ ಸಚಿವರು, ಸಾಹುಕಾರರ ಅಥವಾ ಲೇವಾದೇವಿಗಾರರ ಕಪಿಮುಷ್ಟಿಯಂದ ರೈತರನ್ನು ರಕ್ಷಿಸಲು ಈ ಬ್ಯಾಂಕ್ ಮಹತ್ವದ ಪಾತ್ರವಹಿಸಿದೆ. ಎಂದು ಅಮಿತ್ ಶಾ ಹೇಳಿದ್ದಾರೆ. 

ಇದನ್ನೂ ಓದಿ-ಈ ನಂಬರ್‌ ಇರೋ ಹಳೆ ನೋಟು ನಿಮ್ಮಲ್ಲಿದ್ರೆ ಕುಳಿತಲ್ಲೇ ಲಕ್ಷ ಗಳಿಸೋದು ಪಕ್ಕಾ!

ಸಾಲದ ಬಡ್ಡಿದರಗಳಲ್ಲಿ ಇಳಿಕೆಯಾಗಿದೆ
ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ನಬಾರ್ಡ್ ಬ್ಯಾಂಕುಗಳು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ನಿಯಮಗಳು ಹಾಗೂ ಮಾನದಂಡಗಳ ಅನುಸರಣೆಯಲ್ಲಿ ಕೃಷಿ ಬ್ಯಾಂಕುಗಳು ತಮ್ಮನ್ನು ತಾವು ಸಾಬೀತುಪಡಿಸಿವೆ ಎಂದು ಅಮಿತ್ ಶಾ ಹೇಳಿದ್ದಾರೆ. ಅಷ್ಟೇ ಅಲ್ಲ ಇದುವರೆಗೆ ಶೇ.12 ರಿಂದ ಶೇ.15ರಷ್ಟು ಬಡ್ಡಿದರಕ್ಕೆ ಸಿಗುತ್ತಿದ್ದ ಸಾಲ ಇದೀಗ ಶೇ.10ಕ್ಕೆ ಸಿಗುತ್ತಿದೆ. ಇದರ ಜೊತೆಗೆ ಸರಿಯಾದ ಸಮಯಕ್ಕೆ ಸಾಲ ತೀರಿಸುವ ರೈತರಿಗೆ ಶೇ. 2 ರಷ್ಟು ರಿಯಾಯ್ತಿ ಕೂಡ ಸಿಗುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News