Credit Card: ಸಾಲದ ಸುಳಿಯಲ್ಲಿ ಸಿಲುಕುವುದನ್ನು ತಪ್ಪಿಸಲು ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಈ 5 ವಿಷಯಗಳನ್ನು ಸದಾ ನೆನಪಿಡಿ

Credit Card: ಅಗತ್ಯವಿದ್ದಾಗ ಹಣಕಾಸಿನ ನೆರವು ಪಡೆಯಲು ನಿಸ್ಸಂದೇಹವಾಗಿ ಕ್ರೆಡಿಟ್ ಕಾರ್ಡ್ ಜನರಿಗೆ ತುಂಬಾ ಅನುಕೂಲಕರ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ, ಇದನ್ನು ಸರಿಯಾಗಿ ಬಳಸದಿದ್ದರೆ, ಇಲ್ಲವೇ, ಕ್ರೆಡಿಟ್ ಕಾರ್ಡ್ ಬಳಕೆಯ ಸಂದರ್ಭದಲ್ಲಿ ಕೊಂಚ ನಿರ್ಲಕ್ಷವೂ ಸಹ ನಿಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕಿಸಬಹುದು. 

Written by - Yashaswini V | Last Updated : Jan 19, 2024, 04:23 PM IST
  • ನೀವು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಪಾವತಿಸಲು ಸಾಧ್ಯವಾಗದಿದ್ದರೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗಬಹುದು.
  • ಮಾತ್ರವಲ್ಲ, ಭವಿಷ್ಯದಲ್ಲಿ ಇದು ನಿಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕಿಸಬಹುದು.
  • ಅಷ್ಟೇ ಅಲ್ಲದೆ, ಬಿಲ್‌ಗಳನ್ನು ಪಾವತಿಸದಿರುವುದು ಕ್ರೆಡಿಟ್ ಸ್ಕೋರ್‌ಗೆ ಹಾನಿ ಮಾಡುತ್ತದೆ.
Credit Card: ಸಾಲದ ಸುಳಿಯಲ್ಲಿ ಸಿಲುಕುವುದನ್ನು ತಪ್ಪಿಸಲು ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಈ 5 ವಿಷಯಗಳನ್ನು ಸದಾ ನೆನಪಿಡಿ  title=

Credit Card: ಪ್ರಸ್ತುತ ಜಗತ್ತಿನಲ್ಲಿ ಕ್ರೆಡಿಟ್ ಕಾರ್ಡ್ ಜನರಿಗೆ ಅನಿವಾರ್ಯ ಎಂತಲೇ ಹೇಳಬಹುದು. ಇದಕ್ಕೆ ಮುಖ್ಯ ಕಾರಣ ಕೈಯಲ್ಲಿ ಹಣವಿಲ್ಲದಿದ್ದಾಗ ಕ್ರೆಡಿಟ್ ಕಾರ್ಡ್ ನಮ್ಮ ಹಣಕಾಸಿನ ಅಗತ್ಯತೆಗಳನ್ನು ಪೂರೈಸಬಲ್ಲದು. ಇದಲ್ಲದೆ, ಗ್ರೇಸ್ ಅವಧಿಯಲ್ಲಿ ಯಾವುದೇ ಬಡ್ಡಿಯಿಲ್ಲದೆ ಹಣವನ್ನು ಹಿಂದಿರುಗಿಸಬಹುದು. ಆದರೆ, ಕ್ರೆಡಿಟ್ ಕಾರ್ಡ್ ಎಷ್ಟು ಪ್ರಯೋಜನಕಾರಿಯೋ ನಿರ್ಲಕ್ಷ್ಯವಹಿಸಿದರೆ ಅಷ್ಟೇ ಕೆಟ್ಟ ಪರಿಣಾಮವನ್ನು ಬೀರುತ್ತದೆ. 

ಹೌದು, ನೀವು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಪಾವತಿಸಲು ಸಾಧ್ಯವಾಗದಿದ್ದರೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗಬಹುದು. ಮಾತ್ರವಲ್ಲ, ಭವಿಷ್ಯದಲ್ಲಿ ಇದು ನಿಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕಿಸಬಹುದು. ಅಷ್ಟೇ ಅಲ್ಲದೆ,  ಬಿಲ್‌ಗಳನ್ನು ಪಾವತಿಸದಿರುವುದು ಕ್ರೆಡಿಟ್ ಸ್ಕೋರ್‌ಗೆ ಹಾನಿ ಮಾಡುತ್ತದೆ. ಇಂತಹ ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸಲು ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಈ 5 ವಿಷಯಗಳ ಬಗ್ಗೆ ಜಾಗರೂಕರಾಗಿರುವುದು ತುಂಬಾ ಅಗತ್ಯ. 

ಸಾಲದ ಸುಳಿಯಲ್ಲಿ ಸಿಲುಕುವುದನ್ನು ತಪ್ಪಿಸಲು ಹಾಗೂ ಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳಲು  ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಈ 5 ವಿಷಯಗಳನ್ನು ಸದಾ ನೆನಪಿಡಿ:-
ಕೊಡುಗೆಗಳು/ ರಿಯಾಯಿತಿಗಳ ಕಾರಣದಿಂದಾಗಿ ಕ್ರೆಡಿಟ್ ಕಾರ್ಡ್ ಬಳಸಬೇಡಿ: 

ನಿಮಗೆ ಅಗತ್ಯವಿದ್ದಾಗ ಮಾತ್ರವೇ ಕ್ರೆಡಿಟ್ ಕಾರ್ಡ್ ಅನ್ನು ಬಳಸಿ. ಅದನ್ನು ಬಿಟ್ಟು ಕೊಡುಗೆಗಳು ಅಥವಾ ರಿಯಾಯಿತಿಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ಸುಖಾಸುಮ್ಮನೆ ಖರೀದಿ ಮಾಡುವುದನ್ನು ತಪ್ಪಿಸಿ. ನೀವು ಸರಿಯಾದ ಸಮಯಕ್ಕೆ ಕ್ರೆಡಿಟ್ ಕಾರ್ಡ್ ಸಾಲವನ್ನು ಮರುಪಾವತಿಸದೆ ಇದ್ದರೆ ಹೆಚ್ಚಿನ ಬಡ್ಡಿ ಪಾವತಿಸಬೇಕಾಗಬಹುದು. 

ಇದನ್ನೂ ಓದಿ- ನಿಮ್ಮ ಪಿ‌ಎಫ್ ಅನ್ನು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ವರ್ಗಾಯಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ

ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಬಳಸುವುದನ್ನು ತಪ್ಪಿಸಿ: 
ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದುವುದನ್ನು ತಪ್ಪಿಸಿ. ಇದು ನಿಮ್ಮ ಕೊಳ್ಳುವ ಬಯಕೆಯನ್ನು ಹೆಚ್ಚಿಸಬಹುದು. ಅಧಿಕ ಕ್ರೆಡಿಟ್ ಕಾರ್ಡ್‌ನೊಂದಿಗೆ ಅನಗತ್ಯ ವೆಚ್ಚಗಳು ಹೆಚ್ಚಾಗಬಹುದು. ಆದರೆ, ಸಾಲ ಪಡೆಯುವಷ್ಟು ಸುಲಭವಾಗಿ ಸಾಲವನ್ನು ಹಿಂದಿರುಗಿಸುವುದು ಸಾಧ್ಯವಾಗದಿರುವುದರಿಂದ ನೀವು ಸಾಲಗಾರರಾಗಬಹುದು. 

30% ಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಬೇಡಿ: 
ಪ್ರತಿಯೊಂದು ಕ್ರೆಡಿಟ್ ಕಾರ್ಡ್ ಸಹ ನಿರ್ದಿಷ್ಟ ಮಿತಿಯನ್ನು ಹೊಂದಿರುತ್ತದೆ. ಎಂದಿಗೂ ಸಹ ನೀವು ಮಿತಿಗಿಂತ ಹೆಚ್ಚು ಖರ್ಚು ಮಾಡಬಾರದು. ಕ್ರೆಡಿಟ್ ಕಾರ್ಡ್ ಮಿತಿಯ 30 ಪ್ರತಿಶತವನ್ನು ಮಾತ್ರ ಖರ್ಚು ಮಾಡುವುದು ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ಆರ್ಥಿಕ ತಜ್ಞರು ನಂಬುತ್ತಾರೆ. 

ಇದ್ದಕ್ಕಿದ್ದಂತೆ ಕಾರ್ಡ್ ಮುಚ್ಚುವುದು: 
ಒಂದಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಹೊಂದಿದ್ದಾಗ ಕೆಲವರು ಇದ್ದಕ್ಕಿದ್ದಂತೆ ಒಂದು ಕಾರ್ಡ್ ಅನ್ನು ಮುಚ್ಚುತ್ತಾರೆ. ಆದರೆ, ಎಂದಿಗೂ ಕೂಡ ಇಂತಹ ತಪ್ಪನ್ನು ಮಾಡಬಾರದು. ಇದು ಕ್ರೆಡಿಟ್ ಬಳಕೆಯ ಅನುಪಾತವನ್ನು ಹೆಚ್ಚಿಸಬಹುದು. ಏಕೆಂದರೆ ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತವನ್ನು ಮೊದಲು ಎರಡು ಕಾರ್ಡ್‌ಗಳ ನಡುವೆ ವಿಂಗಡಿಸಲಾಗಿರುತ್ತದೆ, ನೀವು ಇದ್ದಕ್ಕಿದ್ದಂತೆ ಒಂದು ಕಾರ್ಡ್ ಅನ್ನು ಮುಚ್ಚಿದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು. 

ಇದನ್ನೂ ಓದಿ- Budget 2024: ಪಿಂಚಣಿ ಮೊತ್ತದಲ್ಲಿ ಹೆಚ್ಚಳ !ಅಟಲ್ ಪಿಂಚಣಿ ಯೋಜನೆಯಲ್ಲಿ ಮೇಜರ್ ಬದಲಾವಣೆ

ಕ್ರೆಡಿಟ್ ಕಾರ್ಡ್‌ನಿಂದ ಹಣ ವಿತ್ ಡ್ರಾ: 
ಡಿಟ್ ಕಾರ್ಡ್‌ನಿಂದ ಹಣವನ್ನು ವಿತ್ ಡ್ರಾ ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ. ಏಕೆಂದರೆ ಇದಕ್ಕಾಗಿ ನೀವು ದೊಡ್ಡ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರ ಹೊರತಾಗಿ, ನಗದು ಮುಂಗಡಕ್ಕೆ ಬಡ್ಡಿರಹಿತ ಕ್ರೆಡಿಟ್ ಅವಧಿಯ ಯಾವುದೇ ಪ್ರಯೋಜನಗಳು ಲಭ್ಯವಿರುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News