PF Balance: ಸರ್ಕಾರದ ವತಿಯಿಂದ ಜನರಿಗೆ ಹಲವು ರೀತಿಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಈ ಯೋಜನೆಗಳಲ್ಲಿ ಜನರಿಗೆ ವಿವಿಧ ರೀತಿಯ ಸವಲತ್ತುಗಳು ಸಿಗುತ್ತವೆ. ಈ ಯೋಜನೆಗಳಲ್ಲಿ ಪಿಎಫ್ ಯೋಜನೆಯೂ ಕೂಡ ಒಂದಾಗಿದೆ. ಉದ್ಯೋಗಿಗಳ ಜೀವನದಲ್ಲಿ EPF ಖಾತೆ ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಖಾತೆಯ ಮೂಲಕ ಉದ್ಯೋಗಿಗಳು ಸುರಕ್ಷಿತ ಹೂಡಿಕೆ ಮಾಡುವ ಮೂಲಕ ತಮ್ಮ ಭವಿಷ್ಯ ಅಥವಾ ನಿವೃತ್ತಿಯ ನಂತರದ ಜೀವನವನ್ನು ಸುರಕ್ಷಿತವಾಗಿಸಬಹುದು.
ಪಿಎಫ್ ಖಾತೆ
ಇದೀಗ ಇಪಿಎಫ್‌ಒ ಖಾತೆದಾರರು ತಮ್ಮ ಕೆಲಸವನ್ನು ಬದಲಾಯಿಸಿದ ಬಳಿಕ ಆನ್‌ಲೈನ್‌ನಲ್ಲಿ ತಮ್ಮ ಹಳೆ ನೌಕರಿಯ ನಿರ್ಗಮನ ದಿನಾಂಕವನ್ನು ನವೀಕರಿಸಬಹುದಾಗಿದೆ. EPFO ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಿದೆ, ಇದು ಉದ್ಯೋಗಗಳನ್ನು ಬದಲಾಯಿಸಿದ ನಂತರ ಆನ್‌ಲೈನ್‌ನಲ್ಲಿ 'ಎಕ್ಸಿಟ್ ಡೇಟ್' ಅನ್ನು ನವೀಕರಿಸಲು ಬಳಕೆದಾರರಿಗೆ ಅನುವು ಮಾಡಿಕೊಡಲಿದೆ. ಈ ಹಿಂದೆ ನೌಕರರಿಗೆ ಈ ಸೌಲಭ್ಯ ಇರಲಿಲ್ಲ. ಮೊದಲು ಉದ್ಯೋಗದಾತರು ಮಾತ್ರ ಆನ್‌ಲೈನ್‌ನಲ್ಲಿ ನಿರ್ಗಮನ ದಿನಾಂಕಗಳನ್ನು ನವೀಕರಿಸಬಹುದಾಗಿತ್ತು. ಆದರೆ ಇದೀಗ ಉದ್ಯೋಗಿಗಳೇ ಆನ್ಲೈನ್ ನಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಬಹುದು.
ಇದನ್ನೂ ಓದಿ-Investment: ಸರ್ಕಾರದ ಈ ಯೋಜನೆಯಲ್ಲಿ ಇಂದೇ ಹೂಡಿಕೆ ಮಾಡಿ ನಿವೃತ್ತಿಯ ಬಳಿಕ 2.25 ಕೋಟಿ ಸಂಪಾದಿಸಿ
ನಿರ್ಗಮನ ದಿನಾಂಕವನ್ನು ಈ ರೀತಿ ನವೀಕರಿಸಿ
>> EPFO ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
>> ನಿಮ್ಮ ಯುನಿವರ್ಸಲ್ ಖಾತೆ ಸಂಖ್ಯೆ (UAN) ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.
>> ನಿರ್ವಹಿಸು ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
>> ನಂತರ ಮಾರ್ಕ್ ಎಕ್ಸಿಟ್ ಮೇಲೆ ಕ್ಲಿಕ್ ಮಾಡಿ.
>> ಉದ್ಯೋಗವನ್ನು ಆಯ್ಕೆಮಾಡಲು ಡ್ರಾಪ್‌ಡೌನ್ ಮೆನುವನ್ನು ಕ್ಲಿಕ್ಕಿಸಿ, ಅಲ್ಲಿಂದ ನಿಮ್ಮ PF ಖಾತೆ ಸಂಖ್ಯೆಯನ್ನು ನೀವು ಆಯ್ಕೆ ಮಾಡಬಹುದು.
>> ನಿರ್ಗಮನ ದಿನಾಂಕವನ್ನು ನಮೂದಿಸಿ ಮತ್ತು ಕಾರಣವನ್ನು ಭರ್ತಿ ಮಾಡಿ.
>> ರಿಕ್ವೆಸ್ಟ್ OTP ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
>> OTP ನಮೂದಿಸಿ.
>> ಚೆಕ್ಬಾಕ್ಸ್ ಆಯ್ಕೆಮಾಡಿ.
>> ಇದೀಗ ಅಪ್ಡೇಟ್ ಅಂಡ್ ಕರೆಕ್ಟ್ ಮೇಲೆ ಕ್ಲಿಕ್ ಮಾಡಿ.
>> ನೀವು ದೃಢೀಕರಿಸುವ ಸಂದೇಶವನ್ನು ಪಡೆಯುತ್ತೀರಿ- ನಿರ್ಗಮನ ದಿನಾಂಕವನ್ನು ಯಶಸ್ವಿಯಾಗಿ ನವೀಕರಿಸಲಾಗಿದೆ ಎಂದು ಅದರಲ್ಲಿ ಬರೆದಿರುತ್ತದೆ.
>> ಈಗ ವೀಕ್ಷಣೆ ವಿಭಾಗಕ್ಕೆ ನ್ಯಾವಿಗೇಟ್ ಮಾಡಿ ಮತ್ತು ಅದರ ಅಡಿಯಲ್ಲಿ ಸೇವಾ ಇತಿಹಾಸವನ್ನು ನೋಡಿ.
>> ಈಗ ನೀವು ನಿಮ್ಮ EPS ಮತ್ತು EPF ಖಾತೆಗಳಿಗೆ ಸೇರುವ ಮತ್ತು ನಿರ್ಗಮಿಸುವ ದಿನಾಂಕವನ್ನು ನೋಡಬಹುದು.
>> ನಿಮ್ಮ ಹಳೆ ಉದ್ಯೋಗ ಸ್ಥಳವನ್ನು ತೊರೆದ 2 ತಿಂಗಳ ನಂತರ ಮಾತ್ರ ನೀವು ಈ ನಿರ್ಗಮನ ದಿನಾಂಕವನ್ನು ನಮೂದಿಸಬಹುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.