Tesla Cars in India: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಮೆರಿಕ ಭೇಟಿಯ ಸಮಯದಲ್ಲಿ ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಅವರನ್ನು ಭೇಟಿಯಾಗಿದ್ದರು. ಈ ದಿಗ್ಗಜರ ಭೇಟಿಯ ಬಳಿಕ ಟೆಸ್ಲಾ ಭಾರತಕ್ಕೆ ಪ್ರವೇಶಿಸುವ ಬಗ್ಗೆ ವದಂತಿಗಳು ತೀವ್ರಗೊಂಡಿವೆ. ಟೆಸ್ಲಾ ಕಂಪನಿಯು ಭಾರತದಲ್ಲಿ ಸ್ಥಾವರ ಸ್ಥಾಪಿಸುವ ಮತ್ತು ಸಿಬ್ಬಂದಿ ನೇಮಕಾತಿ ಮಾಡುವ ಕೆಲಸವನ್ನು ಪ್ರಾರಂಭಿಸಿದೆ. ಈ ವರ್ಷದಿಂದಲೇ ಟೆಸ್ಲಾ ಭಾರತದಲ್ಲಿ ತನ್ನ ವಾಹನಗಳನ್ನು ಮಾರಾಟ ಮಾಡಲು ಪ್ರಾರಂಭಿಸುವ ನಿರೀಕ್ಷೆಯಿದೆ. ಭಾರತದಲ್ಲಿ ಟೆಸ್ಲಾ ಕಾರುಗಳ ಮಾರಾಟ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಅದರ ಆರಂಭಿಕ ಬೆಲೆ ಎಷ್ಟಿರುತ್ತದೆ ಎಂಬುದರ ಕುರಿತು ಒಂದು ದೊಡ್ಡ ಅಪ್‌ಡೇಟ್ ಸಿಕ್ಕಿದೆ. ಪ್ರಸ್ತುತ ವರದಿಗಳ ಪ್ರಕಾರ, ಆರಂಭಿಕ ಹಂತದಲ್ಲಿ ದೇಶದ ಆಯ್ದ ನಗರಗಳಲ್ಲಿ ಮಾತ್ರ ಟೆಸ್ಲಾ ವಾಹನಗಳು ಮಾರಾಟಕ್ಕೆ ಲಭ್ಯವಿರುತ್ತವೆ ಎಂದು ಹೇಳಲಾಗಿದೆ.
ಭಾರತದಲ್ಲಿ ಟೆಸ್ಲಾದ ಆರಂಭಿಕ ಬೆಲೆ ಎಷ್ಟಿರುತ್ತದೆ?
ಟೆಸ್ಲಾ ಕಂಪನಿಯು ಭಾರತದಲ್ಲಿ ತನ್ನ ವ್ಯವಹಾರವನ್ನು ಆದಷ್ಟು ಬೇಗ ಪ್ರಾರಂಭಿಸಲು ಸಜ್ಜಾಗಿದೆ. ಈ ವರ್ಷದ ಏಪ್ರಿಲ್‌ನಿಂದ ಟೆಸ್ಲಾ ತನ್ನ ವಾಹನಗಳನ್ನು ಮಾರಾಟ ಮಾಡಲು ಪ್ರಾರಂಭಿಸಲಿದೆ ಎಂದು ವರದಿಯಾಗಿದೆ. ಆರಂಭದಲ್ಲಿ ಕಂಪನಿಯು ತನ್ನ ವಾಹನಗಳನ್ನು ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟಕ್ಕೆ ಲಭ್ಯವಾಗುವಂತೆ ಮಾಡುತ್ತದೆ. ಈ ವಾಹನಗಳನ್ನು ಜರ್ಮನಿಯ ರಾಜಧಾನಿ ಬರ್ಲಿನ್‌ನಿಂದ ಆಮದು ಮಾಡಿಕೊಳ್ಳಲಾಗುವುದು. ಭಾರತದಲ್ಲಿ ವ್ಯವಹಾರ ಪ್ರಾರಂಭಿಸುವ ಮೊದಲು ಉದ್ಯಮಿ ಎಲೋನ್ ಮಸ್ಕ್ ಭಾರತೀಯ ಗ್ರಾಹಕರ ಅಭಿರುಚಿಯ ಬಗ್ಗೆ ನಿರಂತರವಾಗಿ ಸ್ಟಡಿ ಮಾಡುತ್ತಿದ್ದಾರೆ. ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು, ಟೆಸ್ಲಾ ಕಾರುಗಳು ದೇಶದಲ್ಲಿ 25,000 ಅಮೆರಿಕನ್ ಡಾಲರ್ (ಸುಮಾರು 21 ಲಕ್ಷ ರೂ.) ಆರಂಭಿಕ ಬೆಲೆಯಲ್ಲಿ ಲಭ್ಯವಿರುತ್ತವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸತತ ಏರಿಗೆ ಮಧ್ಯ ಆಭರಣ ಪ್ರಿಯರಿಗೆ ಗುಡ್ ನ್ಯೂಸ್.. ಇಲ್ಲಿ ಚಿನ್ನದ ಬೆಲೆ ರೂ. 65,000!
ಈ ಎರಡು ನಗರಗಳಲ್ಲಿ ಟೆಸ್ಲಾ ಕಾರು ಬಿಡುಗಡೆ
ಭಾರತವನ್ನು ಪ್ರವೇಶಿಸಿದ ನಂತರ, ಟೆಸ್ಲಾ ದೇಶದಾದ್ಯಂತ ಕೇವಲ 2 ನಗರಗಳಲ್ಲಿ ಮಾತ್ರ ಮಾರಾಟವನ್ನು ಪ್ರಾರಂಭಿಸುತ್ತದೆ. ನಂತರ ಅದನ್ನು ವಿಸ್ತರಿಸುವ ಬಗ್ಗೆ ಪ್ಲ್ಯಾನ್ ಮಾಡಲಾಗುತ್ತದೆ. ವರದಿಗಳ ಪ್ರಕಾರ, ಆರಂಭಿಕ ಹಂತದಲ್ಲಿ ಟೆಸ್ಲಾ ಕಾರುಗಳು ದೆಹಲಿ ಮತ್ತು ಮುಂಬೈನಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಿರುತ್ತವೆ. ಇದಕ್ಕಾಗಿ ಟೆಸ್ಲಾ ದೆಹಲಿ ಮತ್ತು ಮುಂಬೈನಲ್ಲಿ ಎರಡು ಪ್ರಮುಖ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅಲ್ಲಿ ಶೋ ರೂಂಗಳನ್ನು ತೆರೆಯಬಹುದು.
ಭಾರತದಲ್ಲಿ ಟೆಸ್ಲಾದ ಮೊದಲ ಎರಡು ಶೋರೂಮ್‌ಗಳನ್ನು ದೆಹಲಿಯ ಏರೋಸಿಟಿ ಮತ್ತು ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC)ನಲ್ಲಿ ತೆರೆಯಬಹುದು. ಏರೋಸಿಟಿ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇದೆ ಮತ್ತು ಬಿಕೆಸಿ ಮುಂಬೈನ ಉನ್ನತ ದರ್ಜೆಯ ವ್ಯಾಪಾರ ಮತ್ತು ಚಿಲ್ಲರೆ ಕೇಂದ್ರವಾಗಿದೆ.
ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್‌ಗೆ ಫೋನ್ ಸಂಖ್ಯೆಯನ್ನು ಅಪ್‌ಡೇಟ್ ಮಾಡುವುದು ಹೇಗೆ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.