ನವದೆಹಲಿ: EPFO Latest News - ನೌಕರ ವರ್ಗದ ಜನರ ಪಾಲಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. 2020-21 ರ ಹಣಕಾಸು ವರ್ಷಕ್ಕೆ ನಿಮ್ಮ PF ಖಾತೆಗೆ EPFO ಶೇಕಡಾ 8.50 ಬಡ್ಡಿಯನ್ನು ಪಾವತಿಸಿದೆ. ಸ್ವತಃ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದೆ. 6.47 ಕೋಟಿ ಖಾತೆಗಳಲ್ಲಿ ಬಡ್ಡಿ ಪಾವತಿಸಿರುವುದಾಗಿ ಇಪಿಎಫ್‌ಒ ತನ್ನ ಟ್ವೀಟ್ ನಲ್ಲಿ ತಿಳಿಸಿದೆ.
6.47 crore accounts have been credited with an interest of 8.50% for the FY 2020-21. Next update on 15-11-2021. @LabourMinistry @esichq @PIB_India @byadavbjp @Rameswar_Teli @wootaum
— EPFO (@socialepfo) November 12, 2021
ಕಳೆದ 7 ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ಬಡ್ಡಿದರ
ಕಳೆದ ಬಾರಿ 2019-20 ರ ಆರ್ಥಿಕ ವರ್ಷದಲ್ಲಿ, KYC ಯಲ್ಲಿನ ಅಡಚಣೆಯಿಂದಾಗಿ, ಅನೇಕ ಚಂದಾದಾರರು ತಮ್ಮ ಬಡ್ಡಿ ಪಾವತಿಗಾಗಿ ಬಹಳ ಸಮಯ ಕಾಯಬೇಕಾಯಿತು ಎಂಬುದು ಇಲ್ಲಿ ಗಮನಾರ್ಹ. ಇಪಿಎಫ್‌ಒ 2020-21ರ ಹಣಕಾಸು ವರ್ಷದಲ್ಲಿ ಬಡ್ಡಿದರಗಳನ್ನು 8.5% ಕ್ಕೆ ಬದಲಾಯಿಸದೆ ಇರಿಸಿದೆ, ಇದು ಕಳೆದ 7 ವರ್ಷಗಳ ಅತ್ಯಂತ ಕನಿಷ್ಠ ಬಡ್ಡಿ ದರವಾಗಿದೆ.
1. EPFO Miss Call Service
ನಿಮ್ಮ PF ಖಾತೆಯ ಬ್ಯಾಲೆನ್ಸ್ ಅನ್ನು ನೀವು ಮಿಸ್ ಕಾಲ್ ನೀಡುವ ಮೂಲಕ ಕೂಡ ತಿಳಿಯಬಹುದು.ಇದಕ್ಕಾಗಿ ನೀವು ನಿಮ್ಮ ಇಪಿಎಫ್‌ಒ ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಬೇಕು. ಇದರ ನಂತರ, SMS ಮೂಲಕ, ನಿಮ್ಮ PF ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂದು ನಿಮಗೆ ತಿಳಿಯುತ್ತದೆ. AM-EPFOHO ನಿಂದ ಬ್ಯಾಲೆನ್ಸ್ ಸಂದೇಶ ನಿಮ್ಮ ಮೊಬೈಲ್ ಗೆ ಬರಲಿದೆ. ನಿಮ್ಮ ಕಂಪನಿ ಖಾಸಗಿ ಟ್ರಸ್ಟ್ ಆಗಿದ್ದರೆ ನೀವು ಬಾಕಿ ವಿವರಗಳನ್ನು ಪಡೆಯುವುದಿಲ್ಲ. ಇದಕ್ಕಾಗಿ ನೀವು ನಿಮ್ಮ ಕಂಪನಿಯನ್ನು ಸಂಪರ್ಕಿಸಬೇಕು.
2. ಈ ರೀತಿ EPF ಆನ್ಲೈನ್ ನಲ್ಲಿ ಬ್ಯಾಲೆನ್ಸ್ ಹಾಗೂ ಪಾಸ್ಬುಕ್ ಪರಿಶೀಲಿಸಿ
>> EPFO ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ EPF ಬ್ಯಾಲೆನ್ಸ್ ಪರಿಶೀಲಿಸುವ ಸೌಲಭ್ಯವನ್ನು ನೀಡಿದೆ. ಇದಕ್ಕಾಗಿ ವೆಬ್‌ಸೈಟ್‌ನ ಮೇಲಿನ ಬಲಭಾಗದಲ್ಲಿ ಇ-ಪಾಸ್‌ಬುಕ್‌ನ ಲಿಂಕ್ ನೀಡಲಾಗಿದೆ.
>> ಭವಿಷ್ಯ ನಿಧಿ ಖಾತೆದಾರರು ತಮ್ಮ UAN ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕಾಗುತ್ತದೆ.
>> ವೆಬ್‌ಸೈಟ್‌ನಲ್ಲಿ ಯುಎಎನ್ ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಿದ ನಂತರ, ಪಾಸ್‌ಬುಕ್ ವೀಕ್ಷಿಸಿ ಬಟನ್ ಕ್ಲಿಕ್ ಮಾಡಿ ಮತ್ತು ನಿಮಗೆ ಬ್ಯಾಲೆನ್ಸ್ ತಿಳಿಯಲಿದೆ.
EPFO 'UMANG App' ಮೂಲಕ ಕೂಡ ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಟ್ರ್ಯಾಕ್ ಮಾಡಬಹುದು. ಇದಕ್ಕಾಗಿ, ಮೊದಲು Member ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದರ ನಂತರ UAN ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
3. ಉಮಂಗ್ ಆ್ಯಪ್ ಮೂಲಕ (Through Umang App)
ಇಪಿಎಫ್‌ಒ ಅಪ್ಲಿಕೇಶನ್ ಉಮಂಗ್ ಮೂಲಕವೂ ನೀವು ಖಾತೆಯ ಬಾಕಿ ತಿಳಿಯಬಹುದು. ಇದಕ್ಕಾಗಿ, ಅಪ್ಲಿಕೇಶನ್‌ನಲ್ಲಿರುವ ಇಪಿಎಫ್‌ಒಗೆ ಹೋಗಿ. ನಂತರ ನೌಕರರ ಕೇಂದ್ರಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ. ನಂತರ ಪಾಸ್‌ಬುಕ್ ವ್ಯೂ ಆಯ್ಕೆಮಾಡಿ ಮತ್ತು ಪಾಸ್‌ಬುಕ್ ವೀಕ್ಷಿಸಲು ಯುಎಎನ್‌ನೊಂದಿಗೆ ಲಾಗ್ ಇನ್ ಮಾಡಿ. ನೀವು ಈ ಅಪ್ಲಿಕೇಶನ್ ಹೊಂದಿಲ್ಲದಿದ್ದರೆ, ಮೊದಲು ಇದನ್ನು ಡೌನ್‌ಲೋಡ್ ಮಾಡಿ ನಂತರ ಅದರಲ್ಲಿ ನೋಂದಾಯಿಸಿ.
4. SMS ಮೂಲಕ ಈ ರೀತಿಯ ಬ್ಯಾಲೆನ್ಸ್ ಪರಿಶೀಲಿಸಿ (Check balance through SMS)
ನಿಮ್ಮ ಇಪಿಎಫ್ ಖಾತೆ (EPF Account) ಯಲ್ಲಿ ಇತ್ತೀಚಿನ ಕೊಡುಗೆ ಎಷ್ಟು ಎಂದು ತಿಳಿಯಲು ನೀವು ಬಯಸಿದರೆ 7738299899 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಿ. ಅದರ ಸ್ವರೂಪವು EPFOHO UAN ENG ಆಗಿರುತ್ತದೆ. ಈ ಸಂದೇಶದ ಮೂಲಕ, ಇಂಗ್ಲಿಷ್‌ನಲ್ಲಿ ಇಪಿಎಫ್ ಕೊಡುಗೆಯ ಮಾಹಿತಿಯನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ನೀವು ಈ ಸಂದೇಶವನ್ನು ಹಿಂದಿಯಲ್ಲಿ ಬಯಸಿದರೆ, ನೀವು ಅದನ್ನು EPFOHO UAN HIN ಎಂದು ಬರೆದು ಸಂದೇಶ ಕಳುಹಿಸಬೇಕು. ಈ ಎಸ್‌ಎಂಎಸ್ ಸೇವೆ ಪಂಜಾಬಿ, ಮರಾಠಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿಯೂ ಲಭ್ಯವಿದೆ.
5. EPF statement ಡೌನ್ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ
>> ಮೊದಲು https://passbook.epfindia.gov.in/MemberPassBook/Login.jsp ವೆಬ್ ಸೈಟ್ ಗೆ ಭೇಟಿ ನೀಡಿ.
>> UAN, ಪಾಸ್ವರ್ಡ್ ಹಾಗೂ ಕ್ಯಾಪ್ಚಾ ಕೋಡ್ ನಮೂದಿಸಿ 'ಲಾಗ್ ಇನ್' ಆಗಿ
>>ಲಾಗಿನ್ ಬಳಿಕ ಪಾಸ್ಬುಕ್ ನೋಡಲು ಮೆಂಬರ್ ಐಡಿ ಆಯ್ಕೆ ಮಾಡಿ. ಈ ಪಾಸ್ಬುಕ್ PDF ಫಾರ್ಮ್ಯಾಟ್ ನಲ್ಲಿರುತ್ತದೆ. ಅದನ್ನು ನೀವು ಸುಲಭವಾಗಿ ಡೌನ್ಲೋಡ್ ಮಾಡಬಹುದು. ಆದರೆ Exempted PF Trust ಪಾಸ್ಬುಕ್ ಅನ್ನು ನೀವು ನೋಡಲು ಸಾಧ್ಯವಿಲ್ಲ. ಈ ರೀತಿಯ ಸಂಸ್ಥೆಗಳನ್ನು EPFO ಖುದ್ದಾಗಿ ನಿರ್ವಹಿಸುತ್ತದೆ.
ಇದನ್ನೂ ಓದಿ-BJP-RSS ಮೇಲೆ ರಾಹುಲ್ ಗಾಂಧಿ ವಾಗ್ದಾಳಿ, 'ಹಿಂದೂ ಧರ್ಮ-ಹಿಂದುತ್ವದಲ್ಲಿದೆ ವ್ಯತ್ಯಾಸ' ಎಂದ ರಾಹುಲ್
6. ಒಂದು ವೇಳೆ ನೀವು ನಿಮ್ಮ ಖಾತೆಯ ಪಾಸ್ವರ್ಡ್ ಮರೆತುಹೋದರೆ, ನೀವು ನಿಮ್ಮ ಪಾಸ್ವರ್ಡ್ ಅನ್ನದು ರಿಸೆಟ್ ಮಾಡಬಹುದು. ಇದಕ್ಕಾಗಿ EPFO ಸದಸ್ಯರು ಇ-ಸೇವಾ ವೆಬ್ ಸೈಟ್ https://unifiedportal-mem.epfindia.gov.in/memberinterface/ ಗೆ ಭೇಟಿ ನೀಡಬೇಕು.
ಇದನ್ನೂ ಓದಿ-RBIನ ಎರಡು ಯೋಜನೆಗಳನ್ನು ಬಿಡುಗಡೆಗೊಳಿಸಿದ PM ಮೋದಿ, ಹೂಡಿಕೆಯ ವ್ಯಾಪ್ತಿ ವಿಸ್ತಾರ ಎಂದ PM ಮೋದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ